ವಿದೇಶದಲ್ಲಿ ಮದುವೆಯಾಗಿ ಭಾರತಕ್ಕೆ ಬಂದ ಮಗ-ಸೊಸೆಗೆ ಅದ್ಧೂರಿ ಸ್ವಾಗತ ನೀಡಿದ ಮನೆಯವರು
ಭಾರತದ ಯುವಕರು ವಿದೇಶಿ ಯುವತಿಯನ್ನು ಮದುವೆಯಾಗುತ್ತಿದ್ದಾರೆ. ಕೆಲಸಕ್ಕೆಂದು ವಿದೇಶಕ್ಕೆ ಹೋಗಿ ಅಲ್ಲಿಯೇ ಮದುವೆಯಾಗುತ್ತಿದ್ದಾರೆ. ನಂತರ ಭಾರತಕ್ಕೆ ಬರುತ್ತಾರೆ. ಇದೀಗ ಇಲ್ಲೊಂದು ವಿಡಿಯೋ ಅನೇಕರು ಮನಸ್ಸು ಮುಟ್ಟಿದೆ. ಜಮ್ಮುವಿನಲ್ಲಿರುವ ತನ್ನ ಮನೆಗೆ ವಿದೇಶಿ ಸ್ನೇಹಿತೆಯನ್ನು ಕೆರದುಕೊಂಡು ಬಂದ ಭಾರತದ ಯುವಕನಿಗೆ ಮನೆಯವರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಈ ದೃಶ್ಯ ಇದೀಗ ಸಖತ್ ವೈರಲ್ ಆಗುತ್ತಿದೆ.

ಭಾರತದ ಯುವಕರು ಹೆಚ್ಚಾಗಿ ವಿದೇಶಿ ಮಹಿಳೆಯರನ್ನು ವರಿಸುತ್ತಿದ್ದಾರೆ. ವಿದೇಶಿ ಮಹಿಳೆಯರು ಕೂಡ ಭಾರತ ಪುರುಷರೇ ಹೆಚ್ಚು ಇಷ್ಟ ಪಡುತ್ತಾರೆ. ಇದರ ಜತೆಗೆ ಭಾರತದ ಸಂಪ್ರದಾಯಗಳು ಕೂಡ ಈ ವಿದೇಶಿ ಮಹಿಳೆಯರಿಗೆ ಇಷ್ಟ. ಇದೀಗ ಇಲ್ಲೊಂದು ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಜಮ್ಮುವಿನಲ್ಲಿರುವ ತನ್ನ ಮನೆಗೆ ವಿದೇಶಿ ಸ್ನೇಹಿತೆಯನ್ನು ಕೆರದುಕೊಂಡು ಬಂದ ಭಾರತದ ಯುವಕನಿಗೆ ಮನೆಯವರು (Indian Parents) ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗ ಹೆಂಡತಿಯನ್ನು ತುಂಬಾ ಖುಷಿಯಿಂದ ಸ್ವಾಗತ ಮಾಡಿದ್ದಾರೆ. ಜಮ್ಮುವಿನ ಅತುಲ್ ಮತ್ತು ಅವರ ಅಮೇರಿಕನ್ ಗೆಳತಿ ಕ್ಲೇರ್ (American Girlfriend) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇಲ್ಲಿ ತಮ್ಮ ಜೀವನದ ಅದ್ಭುತ ಕ್ಷಣಗಳ ಬಗ್ಗೆ ಹಂಚಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿಯ ಬಗ್ಗೆ, ಸಾಂಪ್ರದಾಯಿಕ ಪದ್ಧತಿಗಳನ್ನು ಕಲಿಯುವ ಬಗ್ಗೆ, ಹೊಸ ಆಹಾರಗಳನ್ನು ಪ್ರಯತ್ನಿಸುವ ಬಗ್ಗೆ ಇಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಅತುಲ್ ಪೋಷಕರು ಅವರ ಗೆಳತಿಯನ್ನು ಹೃತ್ಪೂರ್ವಕವಾಗಿ ನಗುತ್ತಾ ಸ್ವಾಗತಿಸುತ್ತಾ, ಅವಳ ಹಣೆಯ ಮೇಲೆ ತಿಲಕ ಇಡುತ್ತಾರೆ. ಹೂಗಳನ್ನು ಸುರಿದು ಸ್ವಾಗತಿಸುತ್ತಾರೆ. ಕ್ಲೇರ್ನನ್ನು ಕುಟುಂಬ ಸದಸ್ಯರು ಮಾತನಾಡಿಸಿದಾಗ ಅವಳು ಸಂತೋಷ ಮತ್ತು ಆರಾಮದಾಯಕವಾಗದ್ದಾಳೆ ಎಂದುಕೊಂಡೆ ಎಂದು ತಮ್ಮ ಪೋಸ್ಟ್ನಲ್ಲಿ ಅತುಲ್ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಬಳಕೆದಾರರು ಈ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆ ಸೃಷ್ಟಿಸಿದ ಟ್ಯಾಂಕ್-ಟಾಪ್ ಎಫೆಕ್ಟ್, ಏನಿದು?
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಆಗಸ್ಟ್ 12, 2025 ರಂದು ಇದನ್ನು ಹಂಚಿಕೊಳ್ಳಲಾಗಿದೆ. 23 ಸಾವಿರಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಹಲವು ಇನ್ಸ್ಟಾ ಬಳಕೆದಾರರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಅರ್ಜುನ್ ಶರ್ಮಾ ಎಂಬ ಇನ್ಸ್ಟಾ ಬಳಕೆದಾರ ಅಭಿನಂದನೆಗಳು, ಸಹೋದರ ದೇವರು ನಿಮ್ಮಿಬ್ಬರಿಗೂ ಒಳ್ಳೆದು ಮಾಡಲಿ ಎಂದು ಹೇಳಿದ್ದಾರೆ. ಗುಲ್ನಾಜ್ ಎಂಬ ಬಳಕೆದಾರ ಭಾರತಕ್ಕೆ ಸ್ವಾಗತ ಎಂದು ಕಾಮೆಂಟ್ ಮಾಡಿದ್ದಾರೆ. ತುಂಬಾ ಸ್ವಾಗತಾರ್ಹ, ಮತ್ತು ಹುಡುಗಿ ಕೂಡ ಸಂತೋಷವಾಗಿ ಕಾಣುತ್ತಿದ್ದಾಳೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








