Video: ಕೊಳಲು ವಾದನಕ್ಕೆ ಮನಸೋತ ಪುಟಾಣಿ, ಮುದ್ದಾಗಿ ರಿಯಾಕ್ಷನ್ ಕೊಟ್ಟ ಕಂದಮ್ಮ
ಸೀಟಿಗಾಗಿ ಜಡೆ ಜಗಳ, ಸಣ್ಣ ಪುಟ್ಟ ವಿಚಾರಕ್ಕೆ ಕಿರಿಕ್, ರೂಲ್ಸ್ ಬ್ರೇಕ್ ಮಾಡುವ ಪ್ರಯಾಣಿಕರು, ಪ್ರೇಮಿಗಳ ರೊಮ್ಯಾನ್ಸ್ ಹೀಗೆ ನಾನಾ ವಿಚಾರಗಳಿಂದ ಮೆಟ್ರೋ ಸುದ್ದಿಯಾಗುವುದೇ ಹೆಚ್ಚು. ಆದರೆ ಇದೀಗ ವ್ಯಕ್ತಿಯೊಬ್ಬರು ಮೆಟ್ರೋದಲ್ಲಿ ಕೊಳಲು ನುಡಿಸಿದ್ದು, ಅಲ್ಲೇ ಇದ್ದ ಪುಟಾಣಿಯೊಂದು ಮುದ್ದಾಗಿ ರಿಯಾಕ್ಷನ್ ನೀಡಿದೆ. ಈ ವಿಡಿಯೋ ಸದ್ಯಕ್ಕೆ ವೈರಲ್ ಆಗುತ್ತಿದೆ.

ಪುಣೆ, ಆಗಸ್ಟ್ 21: ಸಂಗೀತವೇ ಹಾಗೆ, ಎಲ್ಲರನ್ನು ತನ್ನತ್ತ ಸೆಳೆಯುವ ಶಕ್ತಿ ಇದಕ್ಕೆ ಇದೆ. ಖುಷಿಯಿರಲಿ, ದುಃಖವಿರಲಿ ಹಾಡು ಕೇಳಿದಾಗ ಮನಸ್ಸು ಹಗುರವಾಗುತ್ತದೆ. ಇದೀಗ ಪುಣೆ ಮೆಟ್ರೋದಲ್ಲಿ ವ್ಯಕ್ತಿಯೊಬ್ಬರು ಕೊಳಲು ನುಡಿಸುವ (flute music) ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮೆಟ್ರೋದಲ್ಲಿದ್ದ ಪ್ರಯಾಣಿಕರು ಈ ಕೊಳಲು ವಾದನಕ್ಕೆ ತಲೆದೂಗಿದರೆ ಪುಟ್ಟ ಕಂದಮ್ಮ (Little baby) ಕೊಳಲು ವಾದಕನ ಹತ್ತಿರ ಬಂದು ಮುದ್ದಾಗಿ ರಿಯಾಕ್ಷನ್ ನೀಡಿದೆ. ಈ ಅಪರೂಪದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಕೊಳಲು ವಾದನಕ್ಕೆ ಮನಸೋತ ಪುಟಾಣಿ
ಈ ವಿಡಿಯೋವನ್ನು ತನಿಷ್ಕ್ ಘೋಡ್ಕೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ನನ್ನ ಜೀವನದ ಅತ್ಯಂತ ಮಧುರ ಕ್ಷಣಗಳಲ್ಲಿ ಒಂದು” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ವಿಡಿಯೋದಲ್ಲಿ ಮೆಟ್ರೋದಲ್ಲಿ ಕೊಳಲು ವಾದಕರಾದ ಘೋಡ್ಕೆರವರು ಪ್ರಸಿದ್ಧ ಲಿಟಲ್ ಕೃಷ್ಣ ರಾಗವನ್ನು ನುಡಿಸುತ್ತಿರುವುದನ್ನು ನೋಡಬಹುದು. ಇವರ ಮುಂಭಾಗದಲ್ಲಿ ತಾಯಿ ತನ್ನ ಮಗುವಿನೊಂದಿಗೆ ಕುಳಿತಿರುವುದನ್ನು ಕಾಣಬಹುದು. ಮೆಟ್ರೋದಲ್ಲಿ ಮಧುರವಾದ ಸಂಗೀತವು ತುಂಬುತ್ತಿದ್ದಂತೆ, ಮಗುವು ತನ್ನ ತಾಯಿಯ ಮಡಿಲಿಂದ ಜಾರಿ, ಘೋಡ್ಕೆ ಕಡೆಗೆ ತಬಂದಿದ್ದು, ಕೊಳಲಿನ ಪೆಟ್ಟಿಗೆಯನ್ನು ಮೆಲ್ಲನೆ ತಟ್ಟುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:Video: ಚೋಟ ಮಾಸ್ಕ್ ಮ್ಯಾನ್, ಪತ್ತೆಯಾಗದ ಹೊಸ ತಲೆಬುರುಡೆ
ಬಳಕೆದಾರರ ಕಾಮೆಂಟ್‌ಗಳು ಹೀಗಿವೆ
ಈ ವಿಡಿಯೋ ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ಪುಟಾಣಿ ಕೃಷ್ಣ ತುಂಬಾನೇ ಮುದ್ದಾಗಿದ್ದಾನೆ ಎಂದರೆ, ಮತ್ತೊಬ್ಬರು, ಈ ಪುಟಾಣಿಯು ಕೊಳಲು ವಾದಕನನ್ನು ನೋಡಿದ ರೀತಿ ಮುದ್ದಾಗಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಕೃಷ್ಣ ಬಹಳ ತುಂಟನಾಗಿದ್ದಾನೆ ಎಂದು ಹೇಳಿದ್ದಾರೆ. ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಈ ವಿಡಿಯೋವನ್ನು ಮೆಚ್ಚಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








