AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಶಿಯಲ್​ ಮೀಡಿಯಾದಲ್ಲಿ ಹೊಸ ಅಲೆ ಸೃಷ್ಟಿಸಿದ ಟ್ಯಾಂಕ್-ಟಾಪ್ ಎಫೆಕ್ಟ್, ಏನಿದು?

ಸೋಶಿಯಲ್​​​ ಮೀಡಿಯಾದಲ್ಲಿ ಅಚ್ಚರಿಗೊಳಿಸುವ ವಿಚಾರಗಳು ವೈರಲ್​​ ಆಗುತ್ತಲೇ ಇರುತ್ತದೆ. ಅದೇ ರೀತಿ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್​ ಆಗಿದ್ದು, ಈ ಟ್ಯಾಂಕ್-ಟಾಪ್ ಎಫೆಕ್ಟ್ ವಿಡಿಯೋವನ್ನು ನೋಡಿ ಹಲವು ತಜ್ಞರು ಅವರದೇ ರೀತಿಯ ಅಭಿಪ್ರಾಯವನ್ನು ನೀಡಿದ್ದಾರೆ. ಅಷ್ಟಕ್ಕೂ ಈ ಟ್ಯಾಂಕ್-ಟಾಪ್ ಎಫೆಕ್ಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇಲ್ಲಿ ನೋಡಬಹುದು.

ಸೋಶಿಯಲ್​ ಮೀಡಿಯಾದಲ್ಲಿ ಹೊಸ ಅಲೆ ಸೃಷ್ಟಿಸಿದ ಟ್ಯಾಂಕ್-ಟಾಪ್ ಎಫೆಕ್ಟ್, ಏನಿದು?
ವೈರಲ್ ವಿಡಿಯೋ
ಸಾಯಿನಂದಾ
| Edited By: |

Updated on: Aug 22, 2025 | 1:33 PM

Share

ಸೋಶಿಯಲ್​​ ಮೀಡಿಯಾ ಎಂಬುದು ಎಷ್ಟೊಂದು ಬದಲಾವಣೆಗಳನ್ನು ತರುತ್ತದೆ. ಯಾವ ವಿಡಿಯೋ ಹಾಕಿದ್ರೆ ಹೆಚ್ಚು ಲೈಕ್ಸ್​​​​​​, ಕಾಮೆಂಟ್​​, ವಿವ್ಸ್​​​ ಬರುತ್ತದೆ ಎಂಬುದು ಮುಖ್ಯವಾಗಿರುತ್ತದೆ. ಆದರೆ ಲೈಕ್ಸ್​​​​​​, ಕಾಮೆಂಟ್​​, ವಿವ್ಸ್​​​ ಅಷ್ಟೊಂದು ಸುಲಭದಲ್ಲಿ ಬರುವುದಿಲ್ಲ. ಯಾಕೆಂದರೆ ಸೋಶಿಯಲ್​​​ ಮೀಡಿಯಾದಲ್ಲಿ ಜನರಿಗೆ ವಿಷಯ ಇಷ್ಟವಾಗಬೇಕು. ಅದಕ್ಕಿಂತಲ್ಲೂ ಈ ವಿಡಿಯೋ ಬಳಕೆದಾರರನ್ನು ತಲುಪಬೇಕು.  ಆದರೆ ಇಲ್ಲಿ ಲೈಕ್ಸ್​​​, ವಿವ್ಸ್​​​ ಪಡೆಯುವುದು ಸುಲಭದ ಸಂಗತಿಯಲ್ಲ. ಇದರ ಜತೆಗೆ ಇವುಗಳ ಅಲ್ಗಾರಿದಮ್‌ಗಳನ್ನು ಅರ್ಥಮಾಡಿಕೊಳ್ಳುವುದು ಕಡಿಮೆ ಸಾಧನೆಯಲ್ಲ. ಇಲ್ಲೊಂದು ಯುವತಿ ಹೊಸ ಪದಗುಚ್ಛವನ್ನು ಸೃಷ್ಟಿಸಿದ್ದಾಳೆ. ಕಂಟೆಂಟ್‌ ಕ್ರಿಯೆಟರ್ (content creator) ಜರಾ ದಾರ್ ಎಂಬುವವರು ಹೊಸ ಪ್ರಯೋಗವನ್ನು ಕಂಡುಕೊಳ್ಳುವ ಮೂಲಕ ವೈರಲ್​ ಆಗಿದ್ದಾಳೆ. ಟ್ಯಾಂಕ್-ಟಾಪ್ ಎಫೆಕ್ಟ್ (Tank-Top Effect)​​​ ಎಂಬ ಹೊಸ ವಿಚಾರವನ್ನು ಇಲ್ಲಿ ತಿಳಿಸಿದ್ದು, ಇದನ್ನು ಆಕೆ ವೈರಲ್ ಹ್ಯಾಕ್ ಎಂದು ಕರೆದಿದ್ದಾಳೆ.

ಈ ಯುವತಿ ಟ್ಯಾಂಕ್-ಟಾಪ್ ಎಫೆಕ್ಟ್ ಎಂದು ಈ ವಿಡಿಯೋವನ್ನು ಕರೆದಿದ್ದು, ಈ ವಿಡಿಯೋದಲ್ಲಿ ಒಂದೇ ವಿಷಯದ ಬಗ್ಗೆ ಮಾತನಾಡಿದ್ದಾಳೆ.  ಆದರೆ ಎರಡು ವಿಡಿಯೋ ಸೃಷ್ಟಿಯಾಗಿದೆ. ಜರಾ ದಾರ್ ಒಂದು ವಿಡಿಯೋದಲ್ಲಿ ಸಾಧರಣವಾದ ಬಟ್ಟೆಯನ್ನು ಧರಿಸಿದ್ದಾಳೆ. ಇದನ್ನು ಟ್ಯಾಂಕ್-ಟಾಪ್ ಎಫೆಕ್ಟ್ ಬದಲಾವಣೆ ಮಾಡಿಕೊಂಡಾಗ ಶಾರ್ಟ್ಸ್‌ ಆಗಿರುವ ಬಟ್ಟೆಯಲ್ಲಿ ತೋರಿಸಿದೆ. ಇದು ಟ್ಯಾಂಕ್-ಟಾಪ್ ಎಫೆಕ್ಟ್ ಎಂದು ಹೇಳಿದ್ದಾಳೆ. ಈ ಎರಡೂ ವಿಡಿಯೋಗಳನ್ನು ವಿಭಿನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ Instagram ಹಾಗೂ ಎಕ್ಸ್​​​​​​ ಖಾತೆ, YouTube ಗೆ ಅಪ್‌ಲೋಡ್ ಮಾಡಿದ್ದಾಳೆ. ಈ ವೇಳೆ ಎರಡು ವಿಡಿಯೋಗೆ ಬಂದಿರುವ ಲೈಕ್​​ ಹಾಗೂ ವಿವ್ಸ್​​​ಗಳನ್ನು ಹೋಲಿಸಿದ್ದಾಳೆ.

ಇದನ್ನೂ ಓದಿ
Image
ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು, ಮುಂದೇನಾಯ್ತು ನೋಡಿ
Image
ಕೊಳಲು ವಾದನಕ್ಕೆ ಮನಸೋತ ಪುಟಾಣಿ, ಮುದ್ದಾಗಿ ರಿಯಾಕ್ಷನ್ ಕೊಟ್ಟ ಕಂದಮ್ಮ
Image
ಲಕ್ಷ ಲಕ್ಷ ಸಂಬಳದ ಕೆಲಸ ಬಿಟ್ಟು ಜಾಲಿ ಟ್ರಿಪ್ ಹೋದ ಉದ್ಯೋಗಿ
Image
ಪಾರ್ಸೆಲ್ ನೀಡಲು ಬಂದ ಪೋಸ್ಟ್ ಮ್ಯಾನ್ ಮಾಡಿದ ಕೆಲಸಕ್ಕೆ ವಿದೇಶಿ ಮಹಿಳೆ ಫಿದಾ

ಲಿಂಕ್ಡ್‌ಇನ್‌ನಲ್ಲಿ ಈ ವಿಡಿಯೋ ಅಪ್‌ಲೋಡ್​​​ ಮಾಡಿ ಟ್ಯಾಂಕ್-ಟಾಪ್ ಎಫೆಕ್ಟ್ ಫಲಿತಾಂಶವನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾಳೆ. ಒಂದು ವಿಷಯದ ಬಗ್ಗೆ ಎರಡು ವಿಡಿಯೋವನ್ನು ಇಲ್ಲಿ ಹಾಕಿದ್ದಾನೆ. ಒಮ್ಮೆ ಸಾಮಾನ್ಯ ಟಾಪ್ ಧರಿಸಿ, ಮತ್ತು ಒಮ್ಮೆ ಟ್ಯಾಂಕ್ ಟಾಪ್ ಎಫೆಕ್ಟ್​​​ ಮಾಡಿದ್ದೇನೆ. ಇದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡಲು ಹೀಗೆ ಮಾಡಿದ್ದೇನೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್​​ನಲ್ಲಿ ಹಾಕಿದಾಗ ಇದರ ಫಲಿತಾಂಶ 28% ರಷ್ಟು ಹೆಚ್ಚಾಗಿದೆ. ಎಕ್ಸ್​​ನಲ್ಲಿ ಅಲೋಡ್​ ಮಾಡಿದಾಗ ಇದರ ವೀಕ್ಷಣೆ ದ್ವಿಗುಣವಾಗಿದೆ. ಆದರೆ YouTube ನಲ್ಲಿ ವೀಕ್ಷಣೆ ಕಡಿಮೆ ಬಂದಿದೆ ಎಂದು ಹೇಳಿದ್ದಾಳೆ.

ಇಲ್ಲಿದೆ ನೋಡಿ ವಿಡಿಯೋ;

;

ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ವೀಕ್ಷಣೆ ಹೆಚ್ಚು:

ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಜರಾ ಅವರ ಟ್ಯಾಂಕ್-ಟಾಪ್ ವೀಡಿಯೊ 30,500 ವೀಕ್ಷಣೆಗಳನ್ನು ಪಡೆದುಕೊಂಡಿದೆ. ಆದರೆ ಇನ್ನೊಂದು ವಿಡಿಯೋ 23,700 ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ಮೂಲಕ ಎರಡು ವೀಕ್ಷಣೆ ಬಗ್ಗೆ ಹೋಲಿಕೆ ಮಾಡಿಕೊಂಡಿದ್ದಾಳೆ. ಒಟ್ಟಾರೆಯಾಗಿ ಇನ್ಸ್ಟಾದಲ್ಲಿ28%ದಷ್ಟು ಹೆಚ್ಚಾಗಿದೆ. ಇನ್ನು ಎಕ್ಸ್​​ನಲ್ಲಿ ಸಾಮಾನ್ಯವಾಗಿ ಹಾಕಿರುವ ಬಟ್ಟೆಯ ವಿಡಿಯೋ 4,400 ವೀಕ್ಷಣೆ ಪಡೆದುಕೊಂಡರೆ, ಇದಕ್ಕೆ ವಿರುದ್ಧವಾಗಿ ಟ್ಯಾಂಕ್-ಟಾಪ್ ವೀಡಿಯೊ 9,000 ವೀಕ್ಷಣೆ ಪಡೆದುಕೊಂಡಿದೆ.

ಇಲ್ಲಿದೆ ನೋಡಿ ವಿಡಿಯೋ

YouTube ವಿಭಿನ್ನ ಫಲಿತಾಂಶ ನೀಡಿದೆ:

YouTube Shortsಗೆ ಈ ಎರಡು ವಿಡಿಯೋವನ್ನು ಹಾಕಿದಾಗ ವಿಭಿನ್ನ ಫಲಿತಾಂಶ ನೀಡಿದೆ. ಸಾಮಾನ್ಯವಾಗಿ ಹಾಕಿರುವ ಬಟ್ಟೆಯ ವೀಡಿಯೊ 6,800 ವೀಕ್ಷಣೆ, ಹಾಗೂ ಟ್ಯಾಂಕ್-ಟಾಪ್ ವೀಡಿಯೊ 6200 ವಿಕ್ಷೇಣೆಯನ್ನು ಪಡೆದುಕೊಂಡಿದೆ. ಇನ್ಸ್ಟಾ, ಎಕ್ಸ್​​​​​ಗಿಂತ ಇದರ ಅಲ್ಗಾರಿದಮ್‌ ವಿಭಿನ್ನವಾಗಿದೆ. ಇಲ್ಲಿ ಹೆಚ್ಚು ವಿವ್ಸ್​​​, ಲೈಕ್​​​​ಗಳನ್ನು ಟ್ಯಾಂಕ್-ಟಾಪ್ ವೀಡಿಯೊ ಪಡೆದುಕೊಂಡಿಲ್ಲ.

ಇದನ್ನೂ ಓದಿ: ಭಯ ಅನ್ನೋ ಮಾತೇ ಇಲ್ಲ; ಹಾವನ್ನು ಬರಿಗೈಲಿ ಹಿಡಿದ ಧೈರ್ಯವಂತ ಬಾಲಕ

ಇಲ್ಲಿದೆ ನೋಡಿ ನಿಜವಾದ ವಿಡಿಯೋ:

ಯಾರು ಈ ಜರಾ ದಾರ್?

ಟೆಕ್ಸಾಸ್ (ಯುಎಸ್ಎ) ಮೂಲದ ಜರಾ ದಾರ್  ಎಂಜಿನಿಯರ್ ಮತ್ತು ಯೂಟ್ಯೂಬರ್ ಆಗಿದ್ದು, ಜರಾ ದಾರ್ ಪಿಎಚ್‌ಡಿ ಮಾಡುತ್ತಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಹಾಗೂ ಹಂಚಿಕೊಳ್ಳಲು ಶಿಕ್ಷಣದಿಂದ ದೂರ ಇದ್ದಾಳೆ. ವಿಶೇಷವಾಗಿ ಚಂದಾದಾರಿಕೆ ಆಧಾರಿತ ವೇದಿಕೆ ಓನ್ಲಿಫ್ಯಾನ್ಸ್‌ಗಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ $1 ಮಿಲಿಯನ್ (8.7 ಕೋಟಿಗೂ ಹೆಚ್ಚು) ಗಳಿಸಿದ್ದಾಳೆ.

ಲಿಂಕ್ಡ್‌ಇನ್‌ನಲ್ಲಿ ಈ ಎರಡು ವಿಡಿಯೋವನ್ನು ಹಂಚಿಕೊಂಡ ತಕ್ಷಣ ಹೆಚ್ಚು ವೀಕ್ಷಣೆ ಹಾಗೂ ಚರ್ಚೆ ಕಾರಣವಾಗಿದೆ. ವಿಚಾರ ವೈರಲ್​​ ಆಗುತ್ತಿದ್ದಂತೆ, ಹ್ಯಾಕ್‌ಗಳು ಮತ್ತು ಅಲ್ಗಾರಿದಮ್ ಪಕ್ಷಪಾತದ ಕುರಿತು ಬಳಕೆದಾರರು ಚರ್ಚೆಗಳು ಶುರು ಮಾಡಿಕೊಂಡಿದ್ದಾರೆ. ಟ್ಯಾಂಕ್-ಟಾಪ್ ಎಫೆಕ್ಟ್ ವೈರಲ್ ಪರೀಕ್ಷೆಯು ಅಲ್ಗಾರಿದಮ್‌ಗಳು ಎಷ್ಟು ಅನಿರೀಕ್ಷಿತವಾಗಿರಬಹುದು ಎಂಬುದನ್ನು ಈ ವಿಡಿಯೋ ತಿಳಿಸುತ್ತದೆ. ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ಈ ವಿಡಿಯೋವನ್ನು ಸ್ವಾಗತಿಸಿದ್ದಾರೆ ಹಾಗೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ