Viral: ಬೆಂಗಳೂರಿನಲ್ಲಿ ಮನೆ ಮಾಲೀಕರಿಗೆ ದುರಾಸೆ ಹೆಚ್ಚಾಗಿದೆ, ಮನೆ ಬಾಡಿಗೆ 50 ಸಾವಿರಕ್ಕೆ ದಾಟಿದೆ
ಬೆಂಗಳೂರು ದುಬಾರಿ ದುನಿಯಾ, ಇಲ್ಲಿ ಎಲ್ಲವೂ ದುಬಾರಿ ಆಗುತ್ತಿದೆ. ಅದರಲ್ಲೂ ಈ ಮನೆ ಬಾಡಿಗೆ ಇನ್ನು ದುಬಾರಿಯಾಗಿದೆ. ಕೊರೂನಾ ನಂತರ ಮನೆ ಬಾಡಿಗೆ ಹೆಚ್ಚು ಮಾಡಿದ ಮಾಲೀಕರನ್ನು ದುರಾಸೆ ಮಾಲೀಕರು ಎಂದು ವ್ಯಕ್ತಿಯೊಬ್ಬರು ಕರೆದಿದ್ದಾರೆ. ಈ ಬಗ್ಗೆ ಪೋಸ್ಟ್ ಒಂದು ವೈರಲ್ ಆಗುತ್ತಿದ್ದು, ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ.

ಬೆಂಗಳೂರಿನಲ್ಲಿ ಮನೆ ಬಾಡಿಗೆ (Bengaluru rental prices) ಹೆಚ್ಚುತ್ತಿದೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ, ದುರಾಸೆಯ ಮಾಲೀಕರು ಹೆಚ್ಚಾಗುತ್ತಿದ್ದಾರೆ. ಇದರಿಂದ ಬಾಡಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನಲ್ಲಿ ಎಲ್ಲವೂ ದುಬಾರಿಯಾಗುತ್ತಿದೆ. ಇದೀಗ ಮನೆ ಬಾಡಿಗೆ ಕೂಡ ದುಬಾರಿ ಮಾಡಲಾಗಿದೆ. ಈ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿಕಳವಳ ವ್ಯಕ್ತಪಡಿಸಿದ್ದಾರೆ. ಮನೆ ಬಾಡಿಗೆ ಹೆಚ್ಚಾಗಿದ್ದು, ಇದರಿಂದ ಅನೇಕ ಜನರು ಬೆಂಗಳೂರನ್ನು ತೊರೆಯುವ ಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ. ಕೊರೊನಾ ನಂತರ ಬೆಂಗಳೂರಿನಲ್ಲಿ ಬಾಡಿಗೆ ಹೆಚ್ಚಾಗಿದೆ. ಮನೆ ಮಾಲೀಕರಿಗೆ ದುರಾಸೆ ಜಾಸ್ತಿಯಾಗಿದೆ ಎಂದು ಈ ಪೋಸ್ಟ್ನಲ್ಲಿ ಹೇಳಿದ್ದಾರೆ. ಈ ಬಗ್ಗೆ ಪೋಸ್ಟ್ನ್ನು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು ಫ್ಲಾಟ್ ಮಾಲೀಕರು ದುರಾಸೆಯವರು ಎಂದು ಈ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದೆ. 2012 ರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಅತ್ಯಂತ ಮೂಲಭೂತ ಅಪಾರ್ಟ್‌ಮೆಂಟ್‌ಗಳನ್ನು ಸಹ ಈಗ ₹ 50,000 ದಷ್ಟು ಬಾಡಿಗೆಗೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಬೇಡಿಕೆ ಮತ್ತು ಪೂರೈಕೆ ಹೇಗೆ ಕೆಲಸ ಮಾಡುತ್ತದೆ ಎಂದು ನನಗೆ ಅರ್ಥವಾಗಿದೆ. ಆದರೆ ಈ ಬಗ್ಗೆ ನನಗೆ ತುಂಬಾ ನಿರಾಶೆಯಾಗಿದೆ ಎಂದು ಹೇಳಿದ್ದಾರೆ. ಅತ್ಯಂತ ಮೂಲಭೂತ ಕಟ್ಟಡಗಳಲ್ಲಿರುವ ಮನೆಗಳು ₹ 50,000 ಶುಲ್ಕ ವಿಧಿಸುತ್ತಿವೆ? ಇದು ಯಾವ ಕಾರಣಕ್ಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಇಲ್ಲಿದೆ ನೋಡಿ ವೈರಲ್ ಪೋಸ್ಟ್:
Bangalore flat owners are greedy byu/Practical_Print6511 inbangalorerentals
ಇದನ್ನೂ ಓದಿ
ಇಲ್ಲಿ ಮಾಲೀಕರಿಗೆ ಹೆಚ್ಚುವರಿ ಆದಾಯ ಅಗತ್ಯ ಇಲ್ಲ, ಇಲ್ಲಿ ವ್ಯವಹಾರ ಮಾಡಬೇಕು ಎಂಬ ದುರಾಸೆಯಿಂದ ಹೀಗೆ ಮಾಡುತ್ತಿದ್ದಾರೆ. ಕೆಲವು ಜನ ಇದನ್ನು ಪಾವತಿ ಮಾಡಬಹುದು, ಆದರೆ ನಾನು ಯಾಕೆ ಇಷ್ಟೊಂದು ಪಾವತಿ ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ. ತಮ್ಮ ಲಾಭಕ್ಕಾಗಿ ಬೂಟಾಟಿಕೆ ಖರ್ಚುಗಳನ್ನು ಹೇಳುತ್ತಾರೆ. ಒಂದು ವೇಳೆ ಇಷ್ಟವಿಲ್ಲದ್ದಿದ್ದರೆ ಅಲ್ಲಿ ಇರುವುದು ಕೂಡ ತಪ್ಪು ಎಂದು ಹೇಳಿದ್ದಾರೆ. ಯಾರೂ ತಮ್ಮ ಸಂಬಳದ ಅರ್ಧದಷ್ಟು ಬಾಡಿಗೆಗೆ ಖರ್ಚು ಮಾಡಲು ಅಥವಾ ಹೊರವಲಯದಲ್ಲಿ ವಾಸಿಸಲು 4 ಗಂಟೆಗಳ ಪ್ರಯಾಣವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ಸತ್ಯವೆಂದರೆ, ಉದ್ಯೋಗಗಳು ದೇಶಾದ್ಯಂತ ಸಮವಾಗಿ ಹರಡಿಲ್ಲ, ಆದ್ದರಿಂದ ನಮ್ಮಲ್ಲಿ ಅನೇಕರಿಗೆ ಹೆಚ್ಚಿನ ಆಯ್ಕೆಗಳಿಲ್ಲಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿದೇಶದಲ್ಲಿ ಮದುವೆಯಾಗಿ ಭಾರತಕ್ಕೆ ಬಂದ ಮಗ-ಸೊಸೆಗೆ ಅದ್ಧೂರಿ ಸ್ವಾಗತ ನೀಡಿದ ಮನೆಯವರು
ಬಾಡಿಗೆ ಏರಿಕೆ ಸಮರ್ಥನೀಯವೇ ಅಥವಾ ನಿವಾಸಿಗಳು ಇನ್ನಷ್ಟು ಹದಗೆಡುತ್ತಿರುವ ಇಂತಹ ಪ್ರದೇಶದಲ್ಲಿ ಇರುವುದು ಸರಿಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರು ಸ್ಯಾನ್ ಫ್ರಾನ್ಸಿಸ್ಕೋ ಹಾದಿಯಲ್ಲಿ ಸಾಗುತ್ತಿರುವಂತೆ ತೋರುತ್ತಿದೆ ಎಂದು ಅನೇಕ ಬಳಕೆದಾರರೂ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆದಾರರ ಸಂಘ ಕಾರ್ಯನಿರ್ವಹಿಸುತ್ತಿದೆಯೇ? ಎಂಬು ಮತ್ತೊಬ್ಬ ಬಳಕೆದಾರ ಪ್ರಶ್ನೆ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Fri, 22 August 25








