Viral: ಜೀವಂತ ಕಂದಮ್ಮನಿಗೆ ಜನ್ಮ ನೀಡುವ ರೋಬೋಟ್, ಇನ್ನು ಮಹಿಳೆಯರ ಅಗತ್ಯವಿಲ್ಲ
ತಾಯಿಯಾಗುವುದು ಎಂದರೆ ಹೆಣ್ಣಿಗೆ ಮರುಹುಟ್ಟು ಇದ್ದಂತೆ. ದೇಹದಲ್ಲಾಗುವ ಬದಲಾವಣೆಗಳೊಂದಿಗೆ ಎಲ್ಲಾ ನೋವನ್ನು ಸಹಿಸಿಕೊಂಡು ಹೆಣ್ಣು ತನ್ನ ಜೀವವನ್ನು ಒತ್ತೆ ಇಟ್ಟು ಮಗುವಿನ ಜನ್ಮನೀಡುತ್ತಾಳೆ. ಆದರೆ ಇನ್ನು ಮುಂದೆ ಹೆರಿಗೆ ನೋವನ್ನು ಸಹಿಸಬೇಕಿಲ್ಲ. ಇದೀಗ ಚೀನಿ ವಿಜ್ಞಾನಿಗಳು ಮಹಿಳೆಯ ಸಹಾಯವಿಲ್ಲದೇ ರೋಬೋಟ್ ಮೂಲಕ ಮಗುವಿನ ಜನ್ಮನೀಡುವ ಹೊಸ ಆವಿಷ್ಕಾರಕ್ಕೆ ಕೈ ಹಾಕಿದ್ದಾರೆ. ಹಾಗಾದ್ರೆ ಈ ಕುರಿತಾದ ಮಾಹಿತಿ ಇಲ್ಲಿದೆ.

ಚೀನಾ, ಆಗಸ್ಟ್ 23: ಇಂದು ನಾವೆಲ್ಲಾ ತಂತ್ರಜ್ಞಾನದ ಯುಗದಲ್ಲಿದ್ದೇವೆ. ಹೀಗಾಗಿ ಪ್ರತಿಯೊಂದು ಕೆಲಸದಲ್ಲೂ ಯಂತ್ರಗಳು ಹಾಗೂ ರೋಬೋಟ್‌ಗಳದ್ದೇ ಕಾರುಬಾರು. ದೊಡ್ಡ ದೊಡ್ಡ ನಗರಗಳಲ್ಲಿ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಕೆಲಸಗಳಿಗೆ ರೋಬೋಟ್ ಗಳನ್ನು (Robot) ಬಳಸುವುದೇ ಹೆಚ್ಚು. ಆದರೆ ಮಗುವಿಗೆ ಜನ್ಮ ನೀಡುವ ಕೆಲಸವನ್ನು ಕೂಡ ಈ ರೋಬೋಟ್‌ಗಳೇ ಮಾಡಿದರೆ ಹೇಗಿರುತ್ತೆ, ಇದನ್ನು ಊಹಿಸಲು ಅಸಾಧ್ಯ. ಆದರೆ ಈಗ ಹೇಳೋ ವಿಷ್ಯವನ್ನು ನೀವು ಒಪ್ಪಿಕೊಳ್ಳಲೇ ಬೇಕು. ಒಂದು ಮಗುವಿಗೆ ಜನ್ಮ ನೀಡಬೇಕಾದರೆ ಹೆಣ್ಣು ಸಾಕಷ್ಟು ತ್ಯಾಗಗಳನ್ನು ಮಾಡುತ್ತಾಳೆ, ನೋವನ್ನು ಅನುಭವಿಸುತ್ತಾಳೆ. ಆದರೆ ಇನ್ನು ಮುಂದೇ ಹೆಣ್ಮಕ್ಕಳು ಹೆರಿಗೆ ನೋವನ್ನು ಅನುಭವಿಸುವ ಅಗತ್ಯವೇ ಇಲ್ಲ. ಚೀನಾದ ವಿಜ್ಞಾನಿಗಳು (Chinese scientists) ಮಹಿಳೆಯ ಸಹಾಯವಿಲ್ಲದೇ ರೋಬೋಟ್ ಮಗುವಿಗೆ ಜನ್ಮ ನೀಡುವ ಹೊಸ ಆವಿಷ್ಕಾರಕ್ಕೆ ಮಾಡಿದ್ದಾರೆ. ಹೆಣ್ಣು ಮಕ್ಕಳ ಅಗತ್ಯವಿಲ್ಲದೇ, ಮಗುವಿನ ಬೆಳೆವಣಿಗೆ ಸೇರಿದಂತೆ, ಜನ್ಮ ನೀಡುವುದು ಹೀಗೆ ಎಲ್ಲಾ ಪ್ರಕ್ರಿಯೆಗಳನ್ನು ಈ ರೋಬೋಟ್‌ಗಳೇ ಮಾಡಲಿದೆ. ಹೀಗಾಗಿ ಇನ್ನು ಮುಂದೇ ಸೃಷ್ಟಿಯ ಪ್ರಕ್ರಿಯೆಯೂ ರೋಬೋಟ್‌ಗಳಿಂದಲೇ ಆಗಲಿದೆ ಎನ್ನಲಾಗಿದೆ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.
ಜೀವಂತ ಮಗುವನ್ನು ಹೆತ್ತುಕೊಡುವ ರೋಬೋಟ್
ರೋಬೋಟ್‌ಗಳಿಂದಲೇ ಜೀವಂತ ಮಗುವಿಗೆ ಜನ್ಮ ನೀಡುವ ಪ್ರಕ್ರಿಯೆಯೂ ಹುಟ್ಟಿಕೊಂಡದ್ದು ಚೀನಾದಲ್ಲಿ. ಅಚ್ಚರಿಕಾರಿ ಹಾಗೂ ಊಹೆ ಮಾಡಲು ಸಾಧ್ಯವಾಗದಂತಹ ಈ ತಾಯಿ ರೋಬೋಟ್‌ನ್ನು ಚೀನಾದ ಗೌಂಝುಗು ಪ್ರಾಂತ್ಯದ ಕೈವಾ ಟೆಕ್ನಾಲಜಿಯೂ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ. ಸಿಂಗಾಪೂರನ ನನ್ಯಾಂಗ್ ಟೆಕ್ನಾಲಜಿ ವಿಶ್ವವಿದ್ಯಾನಿಲಯದ ವಿಜ್ಞಾನಿ ಡಾ. ಝಾಂಗ್ ಖಿಪೆಂಗ್ ನೇತೃತ್ವದಲ್ಲಿ ಈ ಸಂಶೋಧನೆಯಲ್ಲಿ ನಡೆಸಲಾಗಿದೆ. ಈ ರೋಬೋಟ್ ಮೂಲಕ ಜೀವಂತ ಮಗುವನ್ನು ಪಡೆಯಬಹುದು. ಈ ಬಗ್ಗೆ ಬೀಜಿಂಗ್ನಲ್ಲಿ ನಡೆದ ವಿಶ್ವ ರೋಬೋಟ್‌ನ ಸಮ್ಮೇಳನದಲ್ಲಿ ವಿಜ್ಞಾನಿ ಡಾ. ಝಾಂಗ್ ರೋಬೋಟ್ ಮೂಲಕ ಮಗು ಪಡೆಯುವ ಹೊಸ ಆವಿಷ್ಕಾರದ ಕುರಿತು ತಿಳಿಸಿದ್ದಾರೆ. 2026ರ ವೇಳೆಗೆ ತಾಯಿ ರೋಬೋಟ್‌ನ ಮೂಲ ಮಾದರಿ ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ.
ರೋಬೋಟ್‌ನ ಕೃತಕ ಗರ್ಭದಲ್ಲಿ ಮಗುವಿನ ಬೆಳವಣಿಗೆ ಹೇಗಿರುತ್ತದೆ?
ಸಾಮಾನ್ಯವಾಗಿ ಹೆಣ್ಣು ಗರ್ಭದಲ್ಲಿ ಮಗುವಿನ ಬೆಳವಣಿಗೆಯ ವೇಳೆ ಸಾಕಷ್ಟು ಕಾಳಜಿ ವಹಿಸಬೇಕಾಗುತ್ತದೆ. ಹೀಗಿರುವಾಗ ರೋಬೋಟ್‌ನಿಂದ ಮಗು ಪಡೆಯುವುದು ಎಂದರೆ ನಂಬಲು ಕಷ್ಟವೇ. ಆದರೆ ಈ ರೋಬೋಟ್ ಹೊಟ್ಟೆಯಲ್ಲಿ ಕೃತಕ ಗರ್ಭವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಈ ಗರ್ಭಕ್ಕೆ ವಿರ್ಯ ಹಾಗೂ ಅಂಡಾಣುಗಳನ್ನು ಸಂಯೋಜಿಸಿ ಹಾಕಲಾಗುತ್ತದೆ. ಇನ್ನು ಈ ರೋಬೋಟ್‌ನಲ್ಲಿರುವ ಈ ಕೃತಕ ಗರ್ಭದಲ್ಲಿ ಕೃತಕ ಆಮ್ನಿಯೊಟಿಕ್ ದ್ರವದಲ್ಲಿ ಭ್ರೂಣವು ಬೆಳವಣಿಗೆಯಾಗಲಿದೆ. ತಾಯಿಯ ಗರ್ಭದಲ್ಲಿ ಹೇಗೆ ಬೆಚ್ಚಗಿನ ವಾತಾವರಣವಿರುತ್ತದೆಯೋ ಅದೇ ರೀತಿ ಇಲ್ಲಿಯೂ ಅಂತಹದ್ದೇ ವಾತಾವರಣವನ್ನು ಸೃಷ್ಟಿಸಲಾಗಿದೆಯಂತೆ. ಇನ್ನು, ಕೃತಕ ಗರ್ಭದಲ್ಲಿರುವ ಮಗುವಿನ ಬೇಕಾದ ಅಗತ್ಯ ಫೋಷಕಾಂಶಗಳನ್ನು ಕೊಳವೆಯ ಮೂಲಕ ಪೂರೈಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ಇದನ್ನೂ ಓದಿ:Viral: ಬೆಂಗಳೂರಿಗನ ಹೊಸ ಪ್ರಯತ್ನ; ಮನೆಯಲ್ಲಿ ಗರಿಗರಿ ದೋಸೆ ಮಾಡೋದಕ್ಕೂ ಬಂತು ರೋಬೋಟ್
ಈ ರೋಬೋಟ್ ಬೆಲೆ ಎಷ್ಟು?
ವಿಜ್ಞಾನಿಗಳು ರೋಬೋಟ್ ಮೂಲಕ ಮಗು ಪಡೆಯುವ ಹೊಸ ಆವಿಷ್ಕಾರಕ್ಕೆ ಮುಂದಾಗಿದ್ದು, ಈಗಾಗಲೇ ನಾನಾ ರೀತಿಯ ಪರೀಕ್ಷೆಗಳು ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2026 ರ ವೇಳೆ ರೋಬೋಟ್‌ನಿಂದ ಮಗುವಿಗೆ ಜನ್ಮ ನೀಡುವ ಈ ರೋಬೋಟ್ ಮಾರುಕಟ್ಟೆಗೆ ಬರಲಿದೆ. ಆರ್ಥಿಕವಾಗಿ ಸದೃಢರಾಗಿರುವವರು ಇದರಿಂದ ಮಗು ಪಡೆಯಬಹುದು. ಆದರೆ ಈ ರೋಬೋಟ್ ಬೆಲೆ ಬರೋಬ್ಬರಿ 12.23 ಲಕ್ಷ ರೂಪಾಯಿ ಎನ್ನಲಾಗಿದೆ. ಆದರೆ ಮಗುವಿನ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಪರಿಣಾಮದ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:25 am, Sat, 23 August 25








