Optical Illusion: ದಟ್ಟ ಕಾನನದ ನಡುವೆ ಜಿಂಕೆ ಎಲ್ಲಿದೆ ಎಂದು ಕಂಡುಹಿಡಿಯಬಲ್ಲಿರಾ?
ಆಪ್ಟಿಕಲ್ ಇಲ್ಯೂಷನ್ ಎಂದ ಕೂಡಲೇ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಮೆದುಳಿಗೆ ಕೆಲಸ ನೀಡುವ ಹಾಗೂ ಟೈಮ್ ಪಾಸ್ ಮಾಡುವ ಇಂತಹ ಆಟಗಳನ್ನು ಆಡಲು ಎಲ್ಲರೂ ಇಷ್ಟ ಪಡುತ್ತಾರೆ. ಸೋಶಿಯಲ್ ಮೀಡಿಯಾದತ್ತ ಕಣ್ಣುಹಾಯಿಸಿದಾಗಲೆಲ್ಲಾ ಒಗಟಿನ ಚಿತ್ರಗಳೇ ವೈರಲ್ ಆಗುತ್ತಿರುತ್ತದೆ. ಇದೀಗ ಅಂತಹದ್ದೇ ಸವಾಲಿನ ಚಿತ್ರವೊಂದು ಹರಿದಾಡುತ್ತಿದ್ದು, ದಟ್ಟವಾದ ಹಸಿರು ಪರಿಸರದ ನಡುವೆ ಅಡಗಿರುವ ಜಿಂಕೆಯನ್ನು ಪತ್ತೆ ಹಚ್ಚಬೇಕು. ಈ ಸವಾಲನ್ನು ಬಿಡಿಸಲು ನೀವು ಸಿದ್ದವಿದ್ದೀರಾ.

ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್ ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ನಿಗದಿತ ಸಮಯದೊಳಗೆ ಉತ್ತರ ಸಿಕ್ಕರಂತೂ ಆಗುವ ಖುಷಿಯೇ ಬೇರೆ. ಆದರೆ ಇಂತಹ ಚಿತ್ರಗಳನ್ನು ಕಣ್ಣನ್ನು ಮೋಸ ಗೊಳಿಸಿ ಭ್ರಮೆಯಲ್ಲಿ ಸಿಲುಕಿಸುತ್ತದೆ. ದೃಷ್ಟಿ ಸಾಮರ್ಥ್ಯ ಚೆನ್ನಾಗಿದ್ದು ಬುದ್ಧಿವಂತರಾಗಿದ್ರೆ ಮಾತ್ರ ಕ್ಷಣಾರ್ಧದಲ್ಲಿ ಉತ್ತರವನ್ನು ಕಂಡುಕೊಳ್ಳುವ ಸಾಧ್ಯ. ಆದರೆ ಇದೀಗ ಇಂತಹದೊಂದು ಚಿತ್ರವು ವೈರಲ್ ಆಗಿದ್ದು ಈ ಚಿತ್ರದಲ್ಲಿ ಹಚ್ಚ ಹಸಿರಿನ ವಾತಾವರಣದ ನಡುವೆ ಜಿಂಕೆಯೊಂದು (deer) ಅಡಗಿ ಕುಳಿತಿದೆ. ನಿಮ್ಮ ವೀಕ್ಷಣಾ ಕೌಶಲ್ಯ ಹೇಗಿದೆ ಎಂದು ಪರೀಕ್ಷಿಸಲು ಈ ಸವಾಲು ಸ್ವೀಕರಿಸಿ ಉತ್ತರ ಹುಡುಕಲು ಪ್ರಯತ್ನಿಸಿ.
ಈ ಚಿತ್ರದಲ್ಲಿ ಏನಿದೆ?
r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಹಚ್ಚ ಹಸಿರಿನ ಪರಿಸರವನ್ನು ಕಾಣಬಹುದು. ಮರಗಳ ಮೂಲಕ ಚಾಚಿಕೊಂಡಿರುವ ಓವರ್ ಹೆಡ್ ವಿದ್ಯುತ್ ತಂತಿಗಳು ಇವೆ. ಅಪಾಯವನ್ನು ತಪ್ಪಿಸುವ ಸಲುವಾಗಿ ತಂತಿಗಳಿಗೆ ಪ್ರಕಾಶಮಾನವಾದ ಹಳದಿ ರಕ್ಷಣಾತ್ಮಕ ಕವರ್ ಅಳವಡಿಸಲಾಗಿದೆ. ಗಾಢ ಹಸಿರಿನ ನಡುವೆ ಇದು ಎದ್ದು ಕಾಣುತ್ತಿದೆ, ಇದರ ನಡುವೆ ಜಿಂಕೆಯೊಂದು ಅಡಗಿದೆ. ಹಚ್ಚಹಸಿರಿನ ಪರಿಸರವಾದ ಕಾರಣ ಜಿಂಕೆ ಎಲ್ಲಿದೆ ಎಂದು ಹುಡುಕುವುದು ಕಷ್ಟ. ಆದರೆ ಜಿಂಕೆ ಹುಡುಕಲು ನಿರ್ದಿಷ್ಟ ಕಾಲಾವಕಾಶವಿಲ್ಲದಿದ್ದರೂ ಕೂಡ ಎಷ್ಟು ಬೇಗ ಒಗಟು ಬಿಡಿಸುತ್ತೀರೋ, ಇದುವೇ ನಿಮ್ಮ ವೀಕ್ಷಣಾ ಸಾಮರ್ಥ್ಯದ ಬಗ್ಗೆ ತಿಳಿಸುತ್ತದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?
ಹಚ್ಚ ಹಸಿರಿನ ವಾತಾವರಣದ ನಡುವೆ ಅಡಗಿರುವ ಜಿಂಕೆಯನ್ನು ಪತ್ತೆ ಹಚ್ಚಬೇಕು. ಹಾಗೇನೆ ಈ ಚಿತ್ರವನ್ನು ಗಮನವಿಟ್ಟು ಹಾಗೂ ಏಕಾಗ್ರತೆಯಿಂದ ನೋಡಿ. ನಿಮ್ಮ ಕಣ್ಣನ್ನು ಮೋಸಗೊಳಿಸುವ ಹಾಗೂ ನಿಮ್ಮನ್ನು ಭ್ರಮೆಗೆ ಸಿಲುಕಿಸುವ ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಜಿಂಕೆ ಕಾಣಿಸುತ್ತದೆಯೇ ಎಂದು ನೋಡಿ. ನೀವು ಈ ಒಗಟನ್ನು ಬಿಡಿಸಲು ರೆಡಿ ಇದ್ದರೆ ಈಗಲೇ ಈ ಸವಾಲು ಸ್ವೀಕರಿಸಲು ಸಿದ್ಧರಾಗಿ.
ಉತ್ತರ ಇಲ್ಲಿದೆ:

ಎಷ್ಟೇ ಹುಡುಕಿದರೂ ಹಚ್ಚಹಸಿರಿನಿಂದ ಕೂಡಿದ ಈ ಪ್ರದೇಶದಲ್ಲಿ ಅಡಗಿರುವ ಜಿಂಕೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ತಲೆ ಕಡೆಸಿಕೊಂಡಿದ್ದೀರಾ?. ಈ ಒಗಟನ್ನು ಬಿಡಿಸಲು ಆಗಿಲ್ಲ ಎಂದು ಚಿಂತಿಸುವುದು ಬೇಡ. ಉತ್ತರವನ್ನು ನಾವು ನಿಮಗೆ ಹೇಳುತ್ತೇವೆ. ಈ ಚಿತ್ರದ ಮಧ್ಯಭಾಗದಲ್ಲಿ ಕಂದು ಬಣ್ಣವೊಂದು ಕಾಣುತ್ತಿರಬಹುದು, ಅದುವೇ ಜಿಂಕೆ.
ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಅಡಗಿರುವ ಮೀನನ್ನು 15 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕಾಮೆಂಟ್ ಮಾಡುವ ಮೂಲಕ ಉತ್ತರ ಹೇಳಲು ಪ್ರಯತ್ನಿಸಿದ್ದಾರೆ. ಒಬ್ಬ ಬಳಕೆದಾರ ಈ ಚಿತ್ರವು ನಮ್ಮನ್ನು ಗೊಂದಲಕ್ಕೆ ಒಳಪಡಿಸುತ್ತಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಚಿತ್ರದ ಮಧ್ಯಭಾಗದಲ್ಲಿ ಜಿಂಕೆಯೂ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಿದ್ದಾರೆ. ಈ ಚಿತ್ರ ನೋಡಿದ ಕೂಡಲೇ ಕಂದು ಬಣ್ಣದ ಜಿಂಕೆಯೂ ಕಣ್ಣಿಗೆ ಗೋಚರಿಸಿತು ಎಂದು ಇನ್ನೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:39 pm, Sat, 23 August 25








