ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ; ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ
ಇಂದು ಬೆಳಿಗ್ಗೆ 5 ಗಂಟೆಯ ಸುಮಾರಿಗೆ ನಡೆದಿರುವ ಈ ಘಟನೆಯಲ್ಲಿ ಆ ವ್ಯಕ್ತಿ ಮಂದ ಬೆಳಕಿನಿಂದ ಕೂಡಿದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಈ ವೇಳೆ ಇದ್ದಕ್ಕಿದ್ದಂತೆ ಬೀದಿ ನಾಯಿಗಳ ಹಿಂಡು ಅವನ ಮೇಲೆ ದಾಳಿ ಮಾಡಿವೆ. ಈ ವಿಡಿಯೋ ಈಗ ವೈರಲ್ ಆಗಿದೆ. ಇಂದು ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಆಗ ನಾಯಿಗಳ ಹಿಂಡು ಇದ್ದಕ್ಕಿದ್ದಂತೆ ಅವನ ಮೇಲೆ ದಾಳಿ ಮಾಡಿದೆ. ಗಾಬರಿಗೊಂಡ ಅವನು ನಿಲ್ಲಿಸಿದ್ದ ಬೈಕ್ ಹಿಂದೆ ಅಡಗಿಕೊಂಡು ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ, ನಾಯಿಗಳು ಅವನ ಮೇಲೆ ದಾಳಿ ಮಾಡುತ್ತಲೇ ಇದ್ದಾಗ ಆತ್ಮರಕ್ಷಣೆಗಾಗಿ ಬೈಕನ್ನು ನಾಯಿಗಳ ಕಡೆಗೆ ತಳ್ಳಿದನು.
ಮುಂಬೈ, ಆಗಸ್ಟ್ 23: ಮಹಾರಾಷ್ಟ್ರದ (Maharashtra) ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಇಂದು ಬೆಳಗ್ಗೆ 7 ಬೀದಿ ನಾಯಿಗಳು ಅವನನ್ನು ಬೆನ್ನಟ್ಟಿ ದಾಳಿ ಮಾಡಿವೆ. ಕತ್ತಲೆ ತುಂಬಿದ್ದ ರಸ್ತೆಯಲ್ಲಿ ಆತ ನಡೆದುಹೋಗುತ್ತಿದ್ದಾಗ ಹಿಂದಿನಿಂದ ಬೀದಿ ನಾಯಿಗಳು (Stray Dogs Attack) ದಾಳಿ ನಡೆಸಿವೆ. ಇಂದು ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಆಗ ನಾಯಿಗಳ ಹಿಂಡು ಇದ್ದಕ್ಕಿದ್ದಂತೆ ಅವನ ಮೇಲೆ ದಾಳಿ ಮಾಡಿದೆ. ಗಾಬರಿಗೊಂಡ ಅವನು ನಿಲ್ಲಿಸಿದ್ದ ಬೈಕ್ ಹಿಂದೆ ಅಡಗಿಕೊಂಡು ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ, ನಾಯಿಗಳು ಅವನ ಮೇಲೆ ದಾಳಿ ಮಾಡುತ್ತಲೇ ಇದ್ದಾಗ ಆತ್ಮರಕ್ಷಣೆಗಾಗಿ ಬೈಕನ್ನು ನಾಯಿಗಳ ಕಡೆಗೆ ತಳ್ಳಿದನು. ಆತನ ಕೂಗಾಟ ಕೇಳಿದ ಹತ್ತಿರದ ನಿವಾಸಿಗಳು ಶೀಘ್ರದಲ್ಲೇ ಹೊರಗೆ ಓಡಿ ಬಂದು ಪ್ರಾಣಿಗಳನ್ನು ಓಡಿಸಿದ್ದಾರೆ. ಗಾಯಗೊಂಡ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

