ಧರ್ಮಸ್ಥಳ ಜಾಥಾ ಕೈಗೊಂಡಿರುವ ವಕೀಲರು ಮತ್ತು ಪೊಲೀಸರ ನಡುವೆ ಎಸ್ಐಟಿ ಕಚೇರಿ ಬಳಿ ವಾಗ್ವಾದ
ಧಾರ್ಮಿಕ ಕೇಂದ್ರವಾಗಿರುವ ಧರ್ಮಸ್ಥಳದ ವಿರುದ್ಧ ನಡೆದಿರುವ ಅಪಪ್ರಚಾರವನ್ನು ವಿರೋಧಿಸಿ 50 ಕ್ಕೂ ಹೆಚ್ಚು ಕಾರುಗಳಲ್ಲಿ ವಕೀಲರ ತಂಡವೊಂದು ಬೆಂಗಳೂರುನಿಂದ ಕಾರುಗಳಲ್ಲಿ ಧರ್ಮಸ್ಥಳದತ್ತ ತೆರಳಿದೆ. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ವಕೀಲರರು ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿದ್ದಾರೆ. ಏತನ್ಮಧ್ಯೆ ಉಡುಪಿಯ ನ್ಯಾಯಾಲಯವೊಂದು ಮಹೇಶ್ ಶೆಟ್ಟಿ ತಿಮರೋಡಿಗೆ ಜಾನೀನು ನೀಡಿದೆ.
ಮಂಗಳೂರು, ಆಗಸ್ಟ್ 23: ಧರ್ಮಸ್ಥಳ ಜಾಥಾ (Dharmasthala rally) ಕೈಗೊಂಡಿರುವ ವಕೀಲರ ತಂಡವು ನೆಲಮಂಗಲ ಬಳಿಯ ಬಿಐಇಸಿಯಿಂದ ಹೊರಟು ಜಿಲ್ಲೆಯ ಬೆಳ್ತಂಗಡಿಯಲ್ಲಿ ಎಸ್ಐಟಿ ಕಚೇರಿಗೆ ಆಗಮಿಸಿದಾಗ ಅಲ್ಲಿದ್ದ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿತು. ವಕೀಲರ ತಂಡವನ್ನು ತಡೆಯಲು ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು. ಕಾವಲಿಗೆ ನಿಂತಿದ್ದ ಪೊಲೀಸರು ಯಾರನ್ನೂ ಒಳಗೆ ಬಿಡಲ್ಲ ಎಂದಾಗ ವಾಗ್ವಾದ ಶುರುವಾಯಿತು. ತಂಡವನ್ನು ಲೀಡ್ ಮಾಡುತ್ತಿದ್ದ ವಕೀಲರೊಬ್ಬರು ಒಳಗೆ ನುಗ್ಗಲು ಪ್ರಯತ್ನಿಸಿದಾಗ ಒಬ್ಬ ಪೊಲೀಸ್ ಅವರನ್ನು ತಡೆಯುವ ಪ್ರಯತ್ನ ಮಾಡುತ್ತಾರೆ. ವಕೀಲರ ಮೇಲೆ ಕೈ ಎತ್ತುತ್ತೀರಾ ಅಂತ ವಕೀಲ ಜೋರುಧ್ವನಿಯಲ್ಲಿ ಮಾತಾಡುತ್ತಾರೆ. ಬೇರೆ ಪೊಲೀಸರು ಅವರನ್ನು ಸಮಾಧಾನಪಡಿಸುತ್ತಾರೆ. ಕೊನೆಗೆ ಎಸ್ಐಟಿ ಅಧಿಕಾರಿಯೊಬ್ಬರು ವಕೀಲರ ದೂರನ್ನು ಸ್ವೀಕರಿಸುತ್ತಾರೆ.
ಇದನ್ನೂ ಓದಿ: Dharmasthala Case: ಧರ್ಮಸ್ಥಳ ಕೇಸ್ ಬಗ್ಗೆ ಕೊನೆಗೂ ಮೌನ ಮುರಿದ ಧರ್ಮಾಧಿಕಾರಿ, ವಿರೇಂದ್ರ ಹೆಗ್ಗಡೆ ಹೇಳಿದ್ದಿಷ್ಟು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

