Dharmasthala Case: ಧರ್ಮಸ್ಥಳ ಕೇಸ್ ಬಗ್ಗೆ ಕೊನೆಗೂ ಮೌನ ಮುರಿದ ಧರ್ಮಾಧಿಕಾರಿ, ವಿರೇಂದ್ರ ಹೆಗ್ಗಡೆ ಹೇಳಿದ್ದಿಷ್ಟು
ಧರ್ಮಸ್ಥಳದಲ್ಲಿ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗಗಳು ಆಗುತ್ತಿವೆ. ಅನಾಮಿನಕ ವ್ಯಕ್ತಿಯೋರ್ವ ಬಂದು ನೂರಾರು ಶವಗಳನ್ನು ಹೂತಿದ್ದೇನೆಂದು ಹೇಳಿದ ಬಳಿಕ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಗೆಯನ್ನು ಎಸ್ಐಟಿಗೆ ವಹಿಸಿದ್ದು, 16 ದಿನ 17 ಪಾಯಿಂಟ್‌ಗಳಲ್ಲಿ ಅಗೆದಿದ್ದ ಎಸ್‌ಐಟಿ ತಂಡಕ್ಕೆ ಎರಡು ಕಡೆ ಮೂತ್ರ ಅಸ್ಥಿಪಂಜರದ ಕುರುಹು ಸಿಕ್ಕಿತ್ತು. ಇದಾದ ನಂತ್ರ ಸದನದಲ್ಲೂ ಸದ್ದು ಮಾಡಿದ್ದ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪ ಕೇಸ್, ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಇದೀಗ ಸ್ವತಃ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು, (ಆಗಸ್ಟ್ 19): ಧರ್ಮಸ್ಥಳದಲ್ಲಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಅನಾಮಿಕ ವ್ಯಕ್ತಿಯೋರ್ವ ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಹೂತು ಹಾಕಿದ್ದೇನೆಂದು ಹೇಳಿದ್ದು, ಈ ಸಂಬಂಧ ಎಸ್‌ಐಟಿ ಇಡೀ ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿ ತೋರಿಸಿದ ಸ್ಥಳಗಳನ್ನು ಅಗೆದು ಶೋಧ ನಡೆಸಿದೆ. ಆದ್ರೆ, ಒಂದರಲ್ಲಿ ಮಾತ್ರ ಮಾನವನ ಅಸ್ಥಿಪಂಜರ ಮಾತ್ರ ದೊರಕಿರುವುದು ಬಿಟ್ಟರೇ ಬೇರೆ ಯಾವುದೇ ಕುರುಹುಳು ಸಿಕ್ಕಿಲ್ಲ. ಆದ್ರೆ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ರೀತಿಯ ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ಇದೀಗ ಸ್ವತಃ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ ನೀಡಿದ್ದು, ಧರ್ಮಸ್ಥಳದ ಬಗ್ಗೆ ಅನಗತ್ಯವಾಗಿ ಗೊಂದಲ ಮೂಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಮೂಲಕ ಧರ್ಮಸ್ಥಳಕ್ಕೆ ಕಳಂಕ ತರಲು ಕೆಲವರು ಯತ್ನಿಸುತ್ತಿದ್ದಾರೆ. ಎಸ್‌ಐಟಿಯಿಂದ ಸತ್ಯ ಹೊರ ತರುತ್ತೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳ ತನಿಖಾ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

