Dharmasthala Mask Man Arrested; ಚಿನ್ನಯ್ಯ ಬಂಧನ ಒಳ್ಳೇ ಬೆಳವಣಿಗೆ, ಎಸ್ಐಟಿ ಕ್ರಮ ಸ್ವಾಗತಿಸುತ್ತೇನೆ: ಗಿರೀಶ್ ಮಟ್ಟಣ್ಣನವರ್
ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಬಂಧಿಸಿದ್ದಾರೆ ಎಂಬ ಕಾರಣಕ್ಕೆ ಯಾರೂ ಅವರ ವಿರುದ್ಧ ಅಕ್ರೋಶ ವ್ಯಕ್ತಪಡಿಸಬಾರದು, ಎಸ್ಐಟಿ ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ, ಒಂದು ಪ್ಯಾಟರ್ನ್ ಅನುಸರಿಸಿಕೊಂಡು ಕೆಲಸ ಮಾಡುತ್ತದೆ, ಹಾಗಾಗಿ ಸರ್ಕಾರ ಮತ್ತು ಸಾರ್ವಜನಿಕರು ಎಸ್ಐಟಿ ಅಧಿಕಾರಿಗಳ ಕೆಲಸಕ್ಕೆ ವ್ಯತ್ಯಯ ಉಂಟುಮಾಡಬಾರದು ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದರು.
ಮಂಗಳೂರು, ಆಗಸ್ಟ್ 23: ಮಾಸ್ಕ್ಮ್ಯಾನ್ ಸಿಎನ್ ಚಿನ್ನಯ್ಯನನ್ನು (CS Chinnaiah) ಬಂಧಿಸಿರುವುದು ಒಳ್ಳೆಯ ಬೆಳವಣಿಗೆ, ಎಸ್ಐಟಿ ಕ್ರಮವನ್ನು ಸ್ವಾಗುತಿಸುತ್ತೇನೆ, ಅದರೆ ಅವರನ್ನು ಬಂಧಿಸಿದರಷ್ಟೇ ಸಾಲದು, ಅವರ ಮಂಪರು ಪರೀಕ್ಷೆ ನಡೆಸಬೇಕು, ಎಸ್ಐಟಿಗೆ ಇದು ತನ್ನ ವಿನಂತಿ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದರು. ತನ್ನ ವಿರುದ್ಧ ಎಫ್ಐಆರ್ ಆಗಿದೆ, ಹಾಗಾಗಿ ಲಿಖಿತ ಹೇಳಿಕೆ ನೀಡಲು ಬಂದಿದ್ದೆ ಎಂದು ಹೇಳಿದ ಮಟ್ಟಣ್ಣನವರ್, ಈ ಪ್ರಕರಣ ಒಂದು ಷಡ್ಯಂತ್ರ ಮಾತ್ರವೋ ಅಲ್ಲವೋ ಅನ್ನೋದನ್ನು ಎಸ್ಐಟಿ ಅಧಿಕಾರಿಗಳೇ ಹೇಳಬೇಕು, ತಾನು ತನಿಖಾಧಿಕಾರಿ ಅಲ್ಲ ಎಂದರು. ಎಸ್ಐಟಿಯವರು ವಿಚಾರಣೆಗೆ ತನ್ನನ್ನು ಕರೆದಿಲ್ಲ, ಕರೆದರೆ ಖಂಡಿತ ಹೋಗೋದಾಗಿ ಅವರು ಹೇಳಿದರು.
ಇದನ್ನೂ ಓದಿ: ಧರ್ಮಸ್ಥಳ ಮಾಸ್ಕ್ಮ್ಯಾನ್ ಬಂಧನ; ನಮ್ಮ ಸರ್ಕಾರ ಯಾರ ಪರವೂ ಅಲ್ಲ, ಕೇವಲ ನ್ಯಾಯದ ಪರ: ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

