AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್

ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್

ಝಾಹಿರ್ ಯೂಸುಫ್
|

Updated on: Aug 23, 2025 | 2:10 PM

Share

160 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಸ್ಟೆಲ್ಲರ್ ಸ್ಟಾಲಿನ್ಸ್ ತಂಡದ ಪರ ರಾಸ್ ಟೇಲರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಪ್ರಿನ್ಸ್ ವರ್ಮಾ ಎಸೆದ  8ನೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸುವ ಮೂಲಕ ಟೇಲರ್ ಅಬ್ಬರಿಸಿದರು. ಈ ಭರ್ಜರಿ ಬ್ಯಾಟಿಂಗ್​ನೊಂದಿಗೆ 9.3 ಓವರ್​ಗಳಲ್ಲಿ 160 ರನ್​ ಕಲೆಹಾಕುವ ಮೂಲಕ ಸ್ಟೆಲ್ಲರ್ ಸ್ಟಾಲಿನ್ಸ್ ತಂಡವು ಈ ಪಂದ್ಯದಲ್ಲಿ 7 ವಿಕೆಟ್​ಗಳ ಗೆಲುವು ದಾಖಲಿಸಿದೆ.

ನೋಯ್ಡಾದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಲೀಗ್ ಟಿ10 ಟೆನಿಸ್ ಟೂರ್ನಿಯಲ್ಲಿ ನ್ಯೂಝಿಲೆಂಡ್​ನ ರಾಸ್ ಟೇಲರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅದು ಕೂಡ ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸುವ ಮೂಲಕ ಎಂಬುದು ವಿಶೇಷ. ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾರ್ಥೀವ್ ಪಟೇಲ್ ನೇತೃತ್ವದ ವಿಕ್ಟರಿ ವೆಂಗಾರ್ಡ್ ತಂಡವು 10 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು.