Dharmasthala Mask Man Arrested: ಹತ್ತು ದಿನಗಳಲ್ಲಿ ಎಸ್ಐಟಿಯಿಂದ ಚಿನ್ನಯ್ಯನ ವಿಸ್ತೃತ ತನಿಖೆ ನಡೆಯಲಿದೆ
ಏತನ್ಮಧ್ಯೆ, ಎಸ್ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುವ ಚಿನ್ನಯ್ಯನ ಅಣ್ಣ ತಾನಾಸಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅವನು ನೀಡಿರುವ ಹೇಳಿಕೆಗಳು ಮತ್ತು ಚಿನ್ನಯ್ಯ ನೀಡುವ ಹೇಳಿಕೆಗಳನ್ನು ಎಸ್ಐಟಿ ಅಧಿಕಾರಿಗಳು ತಾಳೆ ಮಾಡಿ ನೋಡುತ್ತಾರೆ, ಅಲ್ಲೂ ಅವರಿಗೆ ಸುಳಿವುಗಳು ಸಿಗುವ ಸಾಧ್ಯತೆ ಇದೆ. ತಾನಾಸಿಯನ್ನು ಬಂಧಿಸಿಲ್ಲ, ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಮಂಗಳೂರು, ಅಗಸ್ಟ್ 23: ಎಸ್ಐಟಿ ಅಧಿಕಾರಿಗಳ (SIT sleuths) ಮನವಿಯ ಮೇರೆಗೆ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಮುಸುಕುಧಾರಿ ಸಿಎನ್ ಚಿನ್ನಯ್ಯನನ್ನು 10-ದಿನ ಅವಧಿಗೆ ವಶಕ್ಕೆ ಒಪ್ಪಿಸಿದ್ದಾರೆ. ಈ ಹತ್ತು ದಿನಗಳ ಅವಧಿಯಲ್ಲಿ ಅಧಿಕಾರಿಗಳು ಹೇಗೆಲ್ಲ ವಿಚಾರಣೆ ನಡೆಸಬಹುದು ಅನ್ನೋದನ್ನು ನಮ್ಮ ಮಂಗಳೂರು ವರದಿಗಾರ ವಿವರಿಸಿದ್ದಾರೆ. ಅಧಿಕಾರಿಗಳಿಗೆ ಹತ್ತು ದಿನಗಳ ಆವಕಾಶ ಸಿಕ್ಕಿರುವುದರಿಂದ ಚಿನ್ನಯ್ಯನ ವಿಸ್ತೃತ ವಿಚಾರಣೆ ನಡೆಯಲಿದೆ, ವಿಚಾರಣೆ ವೇಳೆ ಅವನಿಂದ ಸಿಗಬಹುದಾದ ಸುಳಿವುಗಳ ಮೇಲೆ ಅವರ ಗಮನ ಕೇಂದ್ರೀಕೃತವಾಗಿರುತ್ತದೆ. ಅಸ್ಥಿಪಂಜರಗಳ ಶೋಧ ಶುರುವಾಗುವ ಮೊದಲು ಅವನು ಒಂದು ಬುರಡೆ ತಂದಿದ್ದ, ಅದು ಎಲ್ಲಿ ಸಿಕ್ಕಿತು, ಶವ ಹೂತಿದ್ದು ನಿಜಾನಾ ಸುಳ್ಳಾ? ಇದರ ಹಿಂದೆ ಷಡ್ಯಂತ್ರ ಇದ್ದರೆ ಯಾಱರು ಶಾಮೀಲಾಗಿದ್ದಾರೆ ಮೊದಲಾದ ಪ್ರಶ್ನೆಗಳನ್ನು ಅವರು ಚಿನ್ನಯ್ಯಗೆ ಕೇಳಲಿದ್ದಾರೆ ಎಂದು ನಮ್ಮ ವರದಿಗಾರ ಹೇಳುತ್ತಾರೆ.
ಇದನ್ನೂ ಓದಿ: ಧರ್ಮಸ್ಥಳ ಕೇಸ್: ಮುಸುಕುಧಾರಿ ಚಿನ್ನಯ್ಯನ ಅಣ್ಣ ಎಸ್ಐಟಿ ವಶಕ್ಕೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

