Dharmasthala Mask Man arrested; ಚಿನ್ನಯ್ಯನ ಬಂಧನ ಹಾಲು ಕುಡಿದಷ್ಟು ಸಂತೋಷ ನೀಡಿದೆ: ಚಿಕ್ಕಬಳ್ಳಿ ಗ್ರಾಮಸ್ಥರು
ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಗ್ರಾಮದ ಮತ್ತೊಬ್ಬ ನಿವಾಸಿ ಬಾಲು ಅವರು, ಶಾಲೆಯಲ್ಲಿ ತನಗಿಂತ ಎರಡು ವರ್ಷ ಜ್ಯೂನಿಯರ್ ಆಗಿದ್ದ ಚಿನ್ನಯ್ಯನನ್ನು ಎಸ್ಐಟಿ ಬಂಧಿಸಿದ್ದು ಹಾಲು ಕುಡಿದಷ್ಟು ಸಂತೋಷವಾಗಿದೆ, ಅವನ ಮೂಲಕ ಇಡೀ ತಂಡದ ಕುತಂತ್ರ ಬಯಲಿಗೆ ಬಿದ್ದಿದೆ, ಧಾರ್ಮಿಕ ಕೇಂದ್ರಗಳಿಗೆ ಮಸಿ ಬಳಿಯುವ ಅವರ ಪ್ರಯತ್ನ ವಿಫಲಗೊಂಡಿದೆ, ಡಿಜಿಟಲ್ ಮಿಡಿಯಗಳು ಅದ್ಭುತವಾದ ಕೆಲಸಮಾಡಿವೆ, ಅವರಿಗೆ ಅಭಿನಂದನೆಗಳು ಎಂದರು.
ಮಂಡ್ಯ, ಆಗಸ್ಟ್ 23: ನಾವು ಈಗಾಗಲೇ ವರದಿ ಮಾಡಿರುವಂತೆ ಮಾಸ್ಕ್ಮ್ಯಾನ್ ಸಿಎನ್ ಚಿನ್ನಯ್ಯ ಮಂಡ್ಯ ಮೂಲದವನು. ಚಿನ್ನಯ್ಯ ವಾಸವಾಗಿದ್ದ ಚಿಕ್ಕಬಳ್ಳಿ ಗ್ರಾಮಕ್ಕೆಕ ತೆರಳಿ ಅವನೊಂದಿಗೆ ಓದಿದ, ಒಡನಾಟವಿದ್ದ ಜನರೊಂದಿಗೆ ನಮ್ಮ ವರದಿಗಾರ ಮಾತಾಡಿ ಅವನ ಸ್ವಭಾವ ಮತ್ತು ಗುಣನಡತೆಗಳನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ. ಚಿಕ್ಕಬಳ್ಳಿಯ ಶಂಕರೇಗೌಡರು ಹೇಳುವ ಹಾಗೆ, ಚಿನ್ನಯ್ಯ ಮೂಲತಃ ತಮಿಳುನಾಡುನವನು, ಅವನ ತಂದೆ ತಾಯಿ ಕೂಲಿ ಮಾಡಿ ಬದುಕು ನಡೆಸಲು ಈ ಊರಿಗೆ ಬಂದಿದ್ದರಂತೆ. ಗೌಡರು ಚಿನ್ನಯ್ಯಗೆ ಯಾವುದೋ ಸ್ಕೀಮಲ್ಲಿ ಬ್ಯಾಂಕ್ ನಿಂದ ಎರಡು ಹಸುಗಳನ್ನು ಕೊಡಿಸಿದ್ದರಂತೆ, ಅವನು ಸಾಲ ತೀರಿಸದೆ ಹಸುಗಳನ್ನು ಮಾರಿ ಊರು ಬಿಟ್ಟಿದ್ದನಂತೆ. ಎಸ್ಐಟಿಯವರು, ಮಾಧ್ಯಮದವರು ಒಳ್ಳೆಯ ಕೆಲಸ ಮಾಡಿದ್ದಾರೆ, ಅವನನ್ನು ಬಂಧಿಸಿದ್ದು ಬಹಳ ಸಂತೋಷವಾಗಿದೆ ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: Dharmasthala Mask Man arrested; ತನಿಖೆ ಪೂರ್ಣಗೊಂಡು ವರದಿ ಕೈಸೇರುವವರೆಗೆ ಏನನ್ನೂ ಹೇಳಲ್ಲ: ಪರಮೇಶ್ವರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

