Dharmasthala Mask Man arrested; ತನಿಖೆ ಪೂರ್ಣಗೊಂಡು ವರದಿ ಕೈಸೇರುವವರೆಗೆ ಏನನ್ನೂ ಹೇಳಲ್ಲ: ಪರಮೇಶ್ವರ್
Dharmasthala Mask Man arrested: ಸರ್ಕಾರದ ಪ್ರತಿನಿಧಿಗಳಾಗಿರುವವರು ಈಗ ಹೇಳಿಕೆಗಳನ್ನು ನೀಡಿದರೆ ಅದು ಎಸ್ಐಟಿ ಅಧಿಕಾರಿಗಳು ನಡೆಸುತ್ತಿರುವ ತನಿಖೆಯ ಮೇಲೆ ಪ್ರಭಾವ ಬೀರುತ್ತದೆ, ಅಧಿಕಾರಿಗಳು ಕಷ್ಟಪಟ್ಟು ತನಿಖೆ ಮಾಡುತ್ತಿದ್ದಾರೆ, ಬೆಳವಣಿಗೆಗಳು ಏನೇ ನಡೆಯಲಿ, ಸರ್ಕಾರಕ್ಕೆ ಎಸ್ಐಟಿ ನೀಡುವ ವರದಿ ಅಂತಿಮ ಎಂದು ಪರಮೇಶ್ವರ್ ಹೇಳಿದರು.
ಉಡುಪಿ, ಆಗಸ್ಟ್ 23: ಮುಸುಕುಧಾರಿ ವ್ಯಕ್ತಿ ಸಿಎನ್ ಚಿನ್ನಯ್ಯ (CM Chinnaiah) ಬಂಧನದ ಬಳಿಕ ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು ತನಿಖೆ ಇನ್ನೂ ಜಾರಿಯಲ್ಲಿರುವುದರಿಂದ ಈಗ ಯಾವ ವಿಷಯವನ್ನೂ ಬಹಿರಂಗಡಿಸಲಾಗದು, ಷಡ್ಯಂತ್ರ ನಡೆದಿದೆಯಾ? ಇದರ ಹಿಂದೆ ಜಾಲ ಇದೆಯಾ ಅನ್ನೋದು ಎಸ್ಐಟಿ ತನಿಖೆ ಪೂರ್ಣಗೊಂಡ ನಂತರವೇ ಗೊತ್ತಾಗಬೇಕು ಎಂದು ಹೇಳಿದರು, ಬೇರೆ ಯಾರ‍್ಯಾರೋ ಅಡುತ್ತಿರುವ ಮಾತುಗಳನ್ನು ಆಧರಿಸಿ ಹೇಳಿಕೆಯನ್ನು ನೀಡಲಾಗಲ್ಲ, ತನಿಖೆ ಪೂರ್ಣಗೊಂಡು ವರದಿ ನಮ್ಮ ಕೈಸೇರಿದ ನಂತರ ಅಧಿಕೃತ ಹೇಳಿಕೆಗಳನ್ನು ನೀಡಬಹುದು, ಊಹಾಪೋಹಗಳನ್ನು ನಂಬಿ ಮಾತಾಡುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.
ಇದನ್ನೂ ಓದಿ: ಧರ್ಮಸ್ಥಳ ಮಾಸ್ಕ್ಮ್ಯಾನ್ ಬಂಧನ; ನಮ್ಮ ಸರ್ಕಾರ ಯಾರ ಪರವೂ ಅಲ್ಲ, ಕೇವಲ ನ್ಯಾಯದ ಪರ: ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

