AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಉಬರ್‌ನಲ್ಲಿ ಆಟೋ ಭಾರಿ ಕಾಸ್ಟ್ಲಿ, ಒಂದು ಕಿಮೀಗೆ 425 ರೂ ಆಟೋ ಚಾರ್ಜ್ ಎಂದ ಬೆಂಗಳೂರಿನ ವ್ಯಕ್ತಿ

ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಆಟೋ ಸೇರಿದಂತೆ ಟ್ಯಾಕ್ಸಿ ಬುಕ್ ಮಾಡಲು ಓಲಾ, ಉಬರ್ ಮುಂತಾದ ಆ್ಯಪ್‌ಗಳನ್ನೇ ಬಳಸುವವರೇ ಹೆಚ್ಚು. ಇಂತಹ ಅಪ್ಲಿಕೇಶನ್‌ಗಳಲ್ಲಿ ಆಟೋ ಬುಕ್ ಮಾಡಲು ಹೋಗಿ ಹೆಚ್ಚಿನವರು ಜೇಬಿಗೆ ಕತ್ತರಿ ಹಾಕಿಕೊಳ್ಳುತ್ತಾರೆ. ಇಂತಹದ್ದೆ ಕಹಿ ಅನುಭವ ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಆಗಿದೆ. ಹೌದು, ಉಬರ್‌ ಅಪ್ಲಿಕೇಶನ್‌ನಲ್ಲಿ ಆಟೋ ಬುಕ್‌ ಮಾಡಲು ಹೋಗಿ ದರ ನೋಡಿ ದಂಗಾಗಿ ಹೋಗಿದ್ದಾರೆ. ಹೌದು, ತನ್ನ ಸ್ನೇಹಿತನಿಗೆ ಆದ ಕಹಿ ಅನುಭವವನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದು, ಈ ಪೋಸ್ಟ್ ಸದ್ಯ ವೈರಲ್ ಆಗಿದೆ.

Viral: ಉಬರ್‌ನಲ್ಲಿ ಆಟೋ ಭಾರಿ ಕಾಸ್ಟ್ಲಿ, ಒಂದು ಕಿಮೀಗೆ 425 ರೂ ಆಟೋ ಚಾರ್ಜ್ ಎಂದ ಬೆಂಗಳೂರಿನ ವ್ಯಕ್ತಿ
ವೈರಲ್‌ ಪೋಸ್ಡ್‌Image Credit source: Reddit
ಸಾಯಿನಂದಾ
|

Updated on: Aug 25, 2025 | 12:11 PM

Share

ಬೆಂಗಳೂರು, ಆಗಸ್ಟ್ 25: ಬೆಂಗಳೂರಿನಲ್ಲಿ ಆ್ಯಪ್ (app) ಆಧಾರಿತ ಕ್ಯಾಬ್ ಅಥವಾ ಆಟೋ ಬುಕಿಂಗ್‌ ಸೇವೆಗಳು ದುಬಾರಿಯಾಗುತ್ತಿದೆ. ಹೀಗಾಗಿ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಬಗ್ಗೆ ಬೆಂಗಳೂರಿಗರು ಅಸಮಾಧಾನ ವ್ಯಕ್ತಪಡಿಸುವ ಪೋಸ್ಟ್‌ಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ಬೆಂಗಳೂರಿನ (Bengaluru) ವ್ಯಕ್ತಿಯೊಬ್ಬರು ತಮ್ಮ ಸ್ನೇಹಿತನು ಆಟೋ ಬುಕ್ ಮಾಡಲು ಹೋಗಿದ್ದು, ಉಬರ್‌ನಲ್ಲಿ ಆಟೋ ದರ ಕೇವಲ ಒಂದು ಕಿಲೋಮೀಟರ್ ದೂರಕ್ಕೆ 425 ರೂ ಆಗಿದೆ. ಆಟೋ ದರ ನೋಡಿ ಶಾಕ್ ಆದ ಬೆಂಗಳೂರಿಗ ಕೊನೆಗೆ ನಡೆದುಕೊಂಡೆ ಹೋಗಿದ್ದು, ಈ ಬಗ್ಗೆ ವ್ಯಕ್ತಿಯೊಬ್ಬರು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಬಳಕೆದಾರರು ಆಟೋಗಳು ಜನರಿಂದ ಹೆಚ್ಚುವರಿ ಹಣ ದೋಚುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

@okstand04 ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಂಡ ಪೋಸ್ಟ್‌ನಲ್ಲಿ ಮಳೆಯ ಸಮಯದಲ್ಲಿ ಕೇವಲ 1 ಕಿಮೀಗೆ ಉಬರ್ ದರಗಳು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಮಳೆ ಬಂದ ಕಾರಣ ವ್ಯಕ್ತಿಯೊಬ್ಬರು ಉಬರ್‌ನಲ್ಲಿ ಆಟೋ ಬುಕ್ ಮಾಡಲು ಹೋಗಿದ್ದಾರೆ. ಈ ವೇಳೆಯಲ್ಲಿ ಆ್ಯಪ್‌ನಲ್ಲಿ ಒಂದು ಮೀಟರ್ ಗೆ ಆಟೋ ದರವು 425 ರೂ ತೋರಿಸಿದೆ. ಈ ಬಗ್ಗೆ ಸ್ಕ್ರೀನ್ ಶಾಟ್ ಹಂಚಿಕೊಂಡು ಇದು ನನ್ನ ಸ್ನೇಹಿತನಿಗೆ ಆದ ಕಹಿ ಅನುಭವ ಎಂದಿದ್ದಾರೆ. ಇನ್ನು, ನಿನ್ನೆ ರಾತ್ರಿ ನನ್ನ ಫ್ರೆಂಡ್ ಊರಿಗೆ ಹೋಗೋಕೆ ಆಟೋ ಬುಕ್ ಮಾಡ್ಬೇಕು ಎಂದು ನೋಡಿದ. ಈ ವೇಳೆ ದರ ನೋಡಿ ಶಾಕ್ ಆದ. ಕೂಡಲೇ ಒಂದು ಛತ್ರಿ ತಗೊಂಡು ನಡ್ಕೊಂಡು ಹೋದ ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

Reddit Post

ಇದನ್ನೂ ಓದಿ
Image
ಆಟೋ ಓಡಿಸಿಕೊಂಡು ಈ ಚಾಲಕ ಮಾಡಿದ ಕೆಲಸಕ್ಕೆ ಭಾರೀ ಮೆಚ್ಚುಗೆ
Image
ಓಲಾದಲ್ಲಿ ಆಟೋ ಬುಕ್ ಮಾಡೋ ಬದಲು ಸೆಡಾನ್ ಕಾರ್ ಬುಕ್ ಮಾಡೋದೇ ಬೆಸ್ಟ್

ಇದನ್ನೂ ಓದಿ: Video: ಇದು ಕಲಿಯುವ ಹಂಬಲ: ಉದ್ಯಮಿ ರವಿಕಾಂತ್ ಪಾಡ್‌ಕ್ಯಾಸ್ಟ್ ನೋಡಿಕೊಂಡು ಆಟೋ ಓಡಿಸಿದ ಚಾಲಕ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಇದನ್ನೆಲ್ಲಾ ನೋಡುವಾಗ ಕಾರು ಖರೀದಿಸಲು ಇದು ಸೂಕ್ತ ಸಮಯ ಎಂದಿದ್ದಾರೆ. ಮತ್ತೊಬ್ಬರು, ಈ ದರ ನೋಡಿದ್ರೆ ಮಳೆಯಲ್ಲಿ ನಡೆಯುವುದೇ ಉತ್ತಮ ಆಯ್ಕೆಯಂತೆ ಕಾಣುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಕಂಪನಿಯಲ್ಲಿ ದುಡಿಯೋ ಬದಲು ಆಟೋ ಓಡಿಸುವುದೇ ಬೆಸ್ಟ್ ಎನಿಸುತ್ತಿದೆ ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?