Optical Illusion: ಈ ಚಿತ್ರದಲ್ಲಿ ಅಡಗಿರುವ ಮೊಸಳೆಯನ್ನು ಹುಡುಕಬಲ್ಲಿರಾ?
ಇತ್ತೀಚೆಗಿನ ದಿನಗಳಲ್ಲಿ ಇಂಟರ್‌ನೆಟ್‌ನಲ್ಲಿ ಲೆಕ್ಕವಿಲ್ಲದಷ್ಟು ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಹರಿದಾಡುತ್ತಿರುತ್ತವೆ. ಆದರೆ ಇಂತಹ ಒಗಟುಗಳನ್ನು ಬಿಡಿಸುವುದು ಎಲ್ಲರಿಂದ ಸಾಧ್ಯವಿಲ್ಲ. ಕೆಲವರು ಈ ಒಗಟಿನ ಚಿತ್ರವನ್ನು ಸುಲಭವಾಗಿ ಬಿಡಿಸುತ್ತಾರೆ. ಇದೀಗ ಇಲ್ಲೊಂದು ಬಲು ಕಷ್ಟಕರವಾದ ಒಗಟಿನ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರದಲ್ಲಿ ಅಡಗಿರುವ ಮೊಸಳೆಯನ್ನು ಹುಡುಕುವ ಸವಾಲು ನೀಡಲಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್‌ಗಳು (Optical Illusion) ಸಾಕಷ್ಟು ಜನಪ್ರಿಯವಾಗಿವೆ. ಇದೀಗ ಇಂತಹ ಒಗಟಿನ ಚಿತ್ರಗಳು ಮೆದುಳಿಗೆ ಕೆಲಸ ನೀಡುವುದಲ್ಲದೇ, ದೃಷ್ಟಿ ಮತ್ತು ಬುದ್ಧಿಗೆ ಸವಾಲು ನೀಡುತ್ತವೆ. ಇಂತಹ ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಇದು ಟೈಮ್ ಪಾಸ್ ಮಾತ್ರವಲ್ಲದೇ ನಿಮ್ಮ ಬುದ್ಧಿ ಶಕ್ತಿ ಎಷ್ಟಿದೆ ಎಂದು ಪರೀಕ್ಷಿಸಲು ಸಹಾಯ ಮಾಡುತ್ತದೆ. ಇದೀಗ ನಿಮ್ಮ ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಚಿತ್ರ ವೈರಲ್ ಆಗಿದ್ದು, ಈ ಚಿತ್ರದಲ್ಲಿ ಒಂದು ಕೊಳವನ್ನು ಕಾಣಬಹುದು. ಆದರೆ ಈ ಕೊಳದಲ್ಲಿ ಅಡಗಿರುವ ಮೊಸಳೆಯನ್ನು ಕಂಡು ಹಿಡಿಯಬಲ್ಲಿರಾ, ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವಾದ್ರೆ ನೀವು ಬುದ್ಧಿವಂತರು ಎಂದರ್ಥ.
ಈ ಸವಾಲನ್ನು ಸ್ವೀಕರಿಸಿದ್ದೀರಾ?
FindTheSpiner ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಒಗಟಿನ ಆಟಗಳು ಮನೋರಂಜನೆಯನ್ನು ನೀಡುವುದು ಮಾತ್ರವಲ್ಲದೆ ನಮ್ಮ ಯೋಚನಾ ಶಕ್ತಿ ಮತ್ತು ಏಕಾಗ್ರತೆಯನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಈ ಒಗಟಿನ ಆಟಗಳಿಗೆ ಉತ್ತರ ಕಂಡುಹಿಡಿಯುವ ಕ್ರೇಜ್ ಇದ್ಯಾ? ಹಾಗಾದ್ರೆ ಚಿತ್ರದಲ್ಲಿ ಕೊಳವೊಂದಿದೆ. ನೀರು ನಿಶ್ಚಲವಾಗಿದ್ದು, ನೀಲಿ ಬಣ್ಣದ ಆಕಾಶವನ್ನು ನೀವು ನೋಡಬಹುದು. ಮರವೊಂದು ನೀರಿನ ಮೇಲೆ ತನ್ನ ಕೊಂಬೆಗಳನ್ನು ಆಕರ್ಷಕವಾಗಿ ಚಾಚಿದರೆ, ಕಳೆ ಸಸ್ಯಗಳು ಕೊಳದಲ್ಲಿವೆ. ಆದರೆ ನೀವು ಈ ಕೊಳದಲ್ಲಿ ಅಡಗಿರುವ ಮೊಸಳೆಯನ್ನು ಕಂಡು ಹಿಡಿಯಬೇಕು. ಈ ಒಗಟನ್ನು ಬಿಡಿಸಲು ಸಮಯಾವಕಾಶವಿಲ್ಲದಿದ್ರೂ ಎಷ್ಟು ಬೇಗ ಪತ್ತೆ ಹಚ್ಚುತ್ತೀರಿ ಎನ್ನುವುದರ ಮೇಲೆ ನಿಮ್ಮ ವೀಕ್ಷಣಾ ಕೌಶಲ್ಯ ಎಷ್ಟಿದೆ ಎಂದು ತಿಳಿಯುತ್ತದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಉತ್ತರ ಇಲ್ಲಿದೆ:
ಅಬ್ಬಬ್ಬಾ ಎಷ್ಟೇ ಹುಡುಕಿದರೂ ಚಿತ್ರದಲ್ಲಿ ಅಡಗಿರುವ ಮೊಸಳೆ ಹುಡುಕಲು ಸಾಧ್ಯವಾಗುತ್ತಿಲ್ಲವೇ ಎಂದು ತಲೆ ಕೆಡಿಸಿಕೊಂಡಿದ್ದೀರಾ?. ಹೆಚ್ಚು ಚಿಂತಿಸಬೇಡಿ. ಇಂತಹ ಕಠಿಣ ಸವಾಲಿನ ಒಗಟನ್ನು ಬಿಡಿಸುವಾಗ ಗೊಂದಲಗಳು ಆಗುವುದು ಸಹಜ. ಆದರೆ ಈ ಚಿತ್ರದತ್ತ ಗಮನಹರಿಸಿ, ತಾಳ್ಮೆಯಿಂದ ನೋಡಬೇಕು. ಹೀಗೆ ನೋಡಿದಾಗ ಕೊಳದ ಅಂಚು ಹಾಗೂ ನೆರಳಿನ ಪ್ರದೇಶಗಳನ್ನು ಎಚ್ಚರಿಕೆಯಿಂದ ನೋಡಿ. ಈ ಶಾಂತವಾದ ಪ್ರದೇಶದಲ್ಲಿ ಮೊಸಳೆಯೊಂದು ಸದ್ದಿಲ್ಲದೇ ಅಡಗಿವೆ. ನಿಮ್ಮ ಕಣ್ಣಿಗೆ ಮೊಸಳೆ ಬಿದ್ದಿದೆ ಎಂದು ನಾವು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








