Video: ನೋಡ ನೋಡುತ್ತಿದ್ದಂತೆ ನಡುರಸ್ತೆಯಲ್ಲೇ ಮಿನಿ ಟ್ರಕನ್ನು ಉರುಳಿಸಿಯೇ ಬಿಡ್ತು ದೈತ್ಯ ಆನೆ
ಶಾಂತ ಸ್ಥಿತಿಯಲ್ಲಿರುವ ಆನೆಯನ್ನು ನೋಡುವುದು ಎಷ್ಟು ಖುಷಿ ಕೊಡುತ್ತದೆಯೋ ಆದರೆ, ಈ ಮದವೇರಿದ ಆನೆಗಳು ಮಾಡುವ ಅವಾಂತರಗಳು ಅಷ್ಟಿಷ್ಟಲ್ಲ. ಇದೀಗ ಇಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಆನೆಯೊಂದು ನಡುರಸ್ತೆಯಲ್ಲೇ ಮಿನಿ ಟ್ರಕ್‌ವೊಂದನ್ನು ಉರುಳಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಆನೆಗಳ (elephant) ಆಟ ತುಂಟಾಟಗಳು ಮನಸ್ಸಿಗೆ ಎಷ್ಟು ಖುಷಿಕೊಡುತ್ತದೆ, ಆದರೆ ರೊಚ್ಚಿಗೆದ್ದರೆ ಎದುರಿಗಿದ್ದವರ ಕಥೆ ಮುಗಿದೇ ಹೋಯಿತು. ಕಾಡಾನೆಗಳಿಗೆ ಕೋಪ ಬಂದರೆ ಅವುಗಳ ನಿಯಂತ್ರಿಸುವುದು ಕಷ್ಟಕರ. ದಾಂಧಲೆ ನಡೆಸುವ ಈ ಆನೆಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ಸುಸಂತಾ ನಂದಾ (susanta nanda) ಅವರು ಹಂಚಿಕೊಂಡಿರುವ ಕ್ಲಿಪ್‌ನಲ್ಲಿ ಆನೆಯೊಂದು ಮಿನಿ ಟ್ರಕನ್ನು ಉರುಳಿಸಿದ್ದು, ತನ್ನ ಶಕ್ತಿಯನ್ನು ಪ್ರದರ್ಶಿಸಿದಂತಿದೆ. ಈ ದೃಶ್ಯವು ವನ್ಯಜೀವಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಾನವ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸುವಂತಿದೆ.
ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಅವರು, susantananda ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು ಶೀರ್ಷಿಕೆಯಲ್ಲಿ ವಾಸ್ತವ ಸತ್ಯವನ್ನು ಬರೆದುಕೊಂಡಿದ್ದಾರೆ. ಆನೆಯೂ ತನ್ನ ಈ ಕೆಲಸದಲ್ಲಿ ಶಕ್ತಿಯನ್ನು ಮಾತ್ರವಲ್ಲ, ಒತ್ತಡವನ್ನು ಪ್ರತಿಬಿಂಬಿಸುತ್ತಿದೆ. ವನ್ಯಜೀವಿಗಳು ಮನೋರಂಜನೆಯಲ್ಲ, ಅವುಗಳಿಗೆ ಯಾವುದೇ ತೊಂದರೆಯಿಲ್ಲದೇ ಬದುಕಲು ಅವಕಾಶ ನೀಡಬೇಕು ಎಂದು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
A reminder from the wild…. An elephant hurling a mini truck shows not just strength, but also stress. Wildlife is not entertainment- it deserves space & respect.
Stay away & stay safe. Let the wild roam free. pic.twitter.com/fom7cZB3xX
— Susanta Nanda IFS (Retd) (@susantananda3) August 23, 2025
ದಟ್ಟವಾದ ಹಸಿರಿನಿಂದ ಆವೃತವಾದ ಯಾವುದೇ ವಾಹನಗಳ ಓಡಾಟವಿಲ್ಲದ ರಸ್ತೆಯಲ್ಲಿ ರೆಕಾರ್ಡ್ ಮಾಡಲಾದ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಆನೆಯೊಂದು ನಡುರಸ್ತೆಯಲ್ಲಿದ್ದ ಮಿನಿ ಟ್ರಕ್ ವೊಂದನ್ನು ತನ್ನ ಶಕ್ತಿಯನ್ನೆಲ್ಲಾ ಬಳಸಿ ಉರುಳಿಸುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ: Video: ಆನೆ ಬಂತೊಂದಾನೆ, ತಾಯಿಯಿಂದ ಬೆರ್ಪಟ್ಟು ಕೇರಳದ ಶಾಲಾ ಆವರಣಕ್ಕೆ ಎಂಟ್ರಿ ಕೊಟ್ಟ ಮರಿಯಾನೆ
ಈ ವಿಡಿಯೋ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಈ ಪ್ರದೇಶವು ಅವುಗಳ ವಾಸಸ್ಥಳ, ಹೀಗಾಗಿ ನಾವು ಅಲ್ಲಿಗೆ ಹೋದದ್ದು ನಮ್ಮ ತಪ್ಪು ಎಂದಿದ್ದಾರೆ. ಮತ್ತೊಬ್ಬರು ಮಾನವ ಚಟುವಟಿಕೆಗಳು ಅರಣ್ಯ ಪ್ರದೇಶಗಳಿಗೆ ವಿಸ್ತರಿಸುತ್ತಿದೆ. ವಾಹನಗಳು ಅಥವಾ ಪ್ರವಾಸಿಗರು ಮತ್ತು ಕಾಡು ಪ್ರಾಣಿಗಳ ನಡುವಿನ ಘರ್ಷಣೆಗಳು ಹೆಚ್ಚಾಗುತ್ತಲೇ ಇದೆ ಎಂದು ಹೇಳಿದ್ದಾರೆ. ಈ ದೃಶ್ಯಗಳು ಮನಸ್ಸಿಗೆ ನೋವುಂಟು ಮಾಡುತ್ತವೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಮತ್ತೆ ಕೆಲವರು ಈ ರೀತಿಯ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ನೀವು ಯಾವುದೇ ಕಾಡು ಪ್ರಾಣಿಯನ್ನು ಕಂಡರೆ , ತಾಳ್ಮೆಯಿಂದ ಇರಿ. ಅವುಗಳಿಗೆ ಭಯಪಡಬೇಡಿ, ಭಯ ಪಡಿಸಬೇಡಿ, ಅವುಗಳು ಶೀಘ್ರದಲ್ಲೇ ತಮ್ಮದೇ ಆದ ರೀತಿಯಲ್ಲಿ ಸರಿಯಾಗುತ್ತವೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Sun, 24 August 25








