Video: ಆನೆ ಬಂತೊಂದಾನೆ, ತಾಯಿಯಿಂದ ಬೆರ್ಪಟ್ಟು ಕೇರಳದ ಶಾಲಾ ಆವರಣಕ್ಕೆ ಎಂಟ್ರಿ ಕೊಟ್ಟ ಮರಿಯಾನೆ
ಮರಿಯಾನೆಗಳು ತನ್ನ ತಾಯಿ ಅಥವಾ ಹಿಂಡಿನಿಂದ ತಪ್ಪಿಸಿಕೊಂಡು ಹೋಗಿ, ಕೊನೆಗೆ ತಾಯಿ ಮಡಿಲು ಸೇರಿದ ಘಟನೆಗಳ ಬಗ್ಗೆ ಕೇಳಿರುತ್ತೀರಿ. ಆದರೆ ಇಲ್ಲೊಂದು ಮರಿಯಾನೆಯೊಂದು ತನ್ನ ತಾಯಿಯಿಂದ ಬೇರ್ಪಟ್ಟಿದ್ದು, ತಾಯಿ ಎಲ್ಲಿದ್ದಾಳೆ ಎಂದು ಹುಡುಕುತ್ತಾ ಕಾಡಂಚಿನ ಬಳಿಯಿರುವ ಶಾಲಾ ಆವರಣಕ್ಕೆ ಎಂಟ್ರಿ ಕೊಟ್ಟಿದೆ. ಶಾಲೆಗೆ ಬಂದು ಅಲೆದಾಡುತ್ತಿರುವ ಈ ಪುಟಾಣಿ ಆನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೇನಾಯ್ತು ಗೊತ್ತಾ? ಈ ಸ್ಟೋರಿ ಓದಿ.

ಕೇರಳ, ಆಗಸ್ಟ್ 23: ತಾಯಿಯ ಪ್ರೀತಿಯೇ ಹಾಗೆ, ತಮ್ಮ ಕಂದಮ್ಮನಿಗೆ ತೊಂದರೆಯಾಗದಂತೆ ನೋಡಿಕೊಳ್ಳುವವಳು ಈ ತಾಯಿ. ಇದು ಪ್ರಾಣಿಗಳ ವಿಚಾರದಲ್ಲೂ ಹೊರತಾಗಿಲ್ಲ. ಈ ತಾಯಾನೆಗಳು (mother elephant) ತನ್ನ ಮರಿಗಳಿಗೆ ಮಾರ್ಗದರ್ಶನ ನೀಡುತ್ತಾ ಕಣ್ಣು ತಪ್ಪಿಸಿ ಎಲ್ಲಿ ಹೋಗದಂತೆ ನೋಡಿಕೊಳ್ಳುತ್ತವೆ. ಕೆಲವೊಮ್ಮೆ ಈ ಮರಿಯಾನೆಗಳು ದಾರಿ ತಪ್ಪಿ ತಾಯಿಯಿಂದ ಬೆರ್ಪಟ್ಟು ಅಲೆದಾಡುದಿದೆ. ಆದರೆ, ತಾಯಿಯಿಂದ ಬೇರ್ಪಟ್ಟ ಮರಿಯಾನೆಗಳು ಕೊನೆಗೆ ತನ್ನ ತಾಯಿಯ ಮಡಿಲು ಸೇರಿದ ಹೃದಯಸ್ಪರ್ಶಿ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಆದರೆ, ಕೇರಳದ ವಯನಾಡ್ ಚೆಕ್ಕಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ (Government Primary School in Chekkadi, Wayanad of Kerala) ಆವರಣಕ್ಕೆ ತಾಯಿಯಿಂದ ಬೇರ್ಪಟ್ಟ ಮರಿಯಾನೆಯೊಂದು ಬಂದಿದೆ. ಈ ಪುಟಾಣಿ ಮರಿಯಾನೆಯ ವಿಡಿಯೋ ವೈರಲ್ ಆಗುತ್ತಿದೆ.
hashtag-wayanad ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೇರಳದ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಕಾಡಿನ ಸಮೀಪವಿರುವ ಗ್ರಾಮವಾದ ಪುಲುಪಳ್ಳಿಯ ಶಾಲೆಯ ಆವರಣದಲ್ಲಿ ಈ ಆನೆ ಮರಿ ಎಂಟ್ರಿ ಕೊಟ್ಟಿರುವುದನ್ನು ನೀವಿಲ್ಲಿ ನೋಡಬಹುದು. ಕೊಠಡಿಗಳ ಆವರಣದಲ್ಲಿ ಆನೆಮರಿ ಅಲೆದಾಡುತ್ತಿದ್ದು, ಇತ್ತ ಶಿಕ್ಷಕರು ಹಾಗೂ ಸಿಬ್ಬಂದಿ ಮಕ್ಕಳನ್ನು ತರಗತಿ ಕೋಣೆಗಳಿಗೆ ಕರೆದೊಯ್ದು ಬಾಗಿಲುಗಳನ್ನು ಭದ್ರಪಡಿಸಿಕೊಂಡಿರುವುದನ್ನು ಇಲ್ಲಿ ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಆನ್ ಮನೋರಮಾ ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿರುವ ಮುಖ್ಯೋಪಾಧ್ಯಾಯಿನಿ ಸಿಜಿಮೋಲ್ ಸುಮಾರು ಒಂದು ಗಂಟೆ ಕಾಲ ನಾವು ಆತಂಕದಲ್ಲಿದ್ದೆವು. ಆದರೆ ಮರಿಯಾನೆ ತುಂಬಾ ಶಾಂತವಾಗಿಯೇ ವರ್ತಿಸಿತ್ತು, ಶಾಲೆಗೆ ಸೇರಲು ಬರುವ ಮಗುವಿನಂತೆ ಇತ್ತು ಎಂದು ಹೇಳಿದ್ದಾರೆ. ಇನ್ನು, ಶಾಲೆಯೂ ಕಾಡಿನ ಬಳಿ ಇರುವುದರಿಂದ ಸಂಜೆಯ ವೇಳೆ ಆನೆಗಳ ಹಿಂಡು ಹೆಚ್ಚಾಗಿ ಹಾದುಹೋಗುವುದನ್ನು ಕಾಣಬಹುದು. ಆದರೆ ಶಾಲೆಯ ಸಮಯದಲ್ಲಿ ಮರಿಯಾನೆಯೊಂದು ಆವರಣದೊಳಗೆ ಬಂದದ್ದು ಇದೇ ಮೊದಲು ಎಂದು ಶಾಲಾ ಸಿಬ್ಬಂದಿ ತಿಳಿಸಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಅಧಿಕಾರಿಗಳು ಶೀಘ್ರದಲ್ಲೇ ಆಗಮಿಸಿ ಪಮರಿಯಾನೆಯನ್ನು ಎಚ್ಚರಿಕೆಯಿಂದ ಕಾಡಿನ ಕಡೆಗೆ ಹಿಂತಿರುಗಿಸಿದ್ದಾರೆ. ಹಿಂಡಿನೊಂದಿಗೆ ಇದ್ದ ಈ ಮರಿಯಾನೆಯೂ ಹಾದಿ ತಪ್ಪಿ ಶಾಲಾ ಆವರಣಕ್ಕೆ ಬಂದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:Video: ನೋಡ ನೋಡ ಎಷ್ಟು ಚಂದ; ಖುಷಿ ಖುಷಿಯಾಗಿ ಚೆಂಡಾಟ ಆಡಿದ ಆನೆ
ಈ ವಿಡಿಯೋ ನಲವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು ಪುಟಾಣಿಯೇ ಅಳಬೇಡ, ಆದಷ್ಟು ಬೇಗ ನೀನು ನಿನ್ನ ಕುಟುಂಬ ಸೇರುವೆ ಎಂದಿದ್ದಾರೆ. ಮತ್ತೊಬ್ಬರು ಶಾಲೆಗೆ ಹೊಸ ಶಾಲೆಗೆ ಸೇರ್ಪಡೆ ಎಂದು ತಮಾಷೆಯಾಗಿಯೇ ಹೇಳಿದ್ದಾರೆ. ಈ ಪುಟಾಣಿಗಳ ಜೊತೆಗೆ ಮತ್ತೊಂದು ಪುಟಾಣಿಯ ಸೇರ್ಪಡೆ, ವಿಡಿಯೋ ಸೊಗಸಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:57 am, Sat, 23 August 25








