AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬೆಂಗಳೂರಿನ ದೊಮ್ಮಲೂರು-ಇಂದಿರಾನಗರ ಪಾದಚಾರಿ ಮಾರ್ಗ ಹೇಗಿತ್ತು? ಹೇಗಾಯಿತು ನೋಡಿ, ಇದು ವಿದೇಶಿಗನ ಕೈಚಳಕ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ರಸ್ತೆ ಕಾಮಗಾರಿ, ಅಲ್ಲಲ್ಲಿ ಗುಂಡಿ ಬಿದ್ದ ರಸ್ತೆಗಳು ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ. ಆದರೆ ಕೆನಡಾ ವ್ಯಕ್ತಿಯೊಬ್ಬರು ಮಾಡಿದ ವಿಡಿಯೋದಿಂದಾಗಿ ಬೆಂಗಳೂರಿನ ಈ ಪಾದಚಾರಿ ಮಾರ್ಗವನ್ನು ಕೇವಲ ಒಂದೇ ವಾರದೊಳಗೆ ದುರಸ್ತಿ ಮಾಡಿ ಪಾದಚಾರಿಗಳ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಲಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

Video: ಬೆಂಗಳೂರಿನ ದೊಮ್ಮಲೂರು-ಇಂದಿರಾನಗರ ಪಾದಚಾರಿ ಮಾರ್ಗ ಹೇಗಿತ್ತು? ಹೇಗಾಯಿತು ನೋಡಿ, ಇದು ವಿದೇಶಿಗನ ಕೈಚಳಕ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Aug 28, 2025 | 10:49 AM

Share

ಬೆಂಗಳೂರು, ಆಗಸ್ಟ್ 28: ಬೆಂಗಳೂರಿನಲ್ಲಿ ಮಳೆ ಬಂದರೆ ಸಾಕು, ರಸ್ತೆಯಲ್ಲಿ ವಾಹನ ಸಂಚಾರವೇ ಕಷ್ಟವಾಗುತ್ತದೆ. ಅಲ್ಲಲ್ಲಿ ಗುಂಡಿ ಬಿದ್ದ ರಸ್ತೆಗಳು ಒಂದೆಡೆಯಾದರೆ, ಜನ ಸಾಮಾನ್ಯರಿಗೆ ನಡೆದುಕೊಂಡು ಹೋಗಲು ಪಾದಚಾರಿ ಮಾರ್ಗವಂತೂ ಇರುವುದೇ ಇಲ್ಲ. ಆದರೆ ಇದೀಗ ಸುಮಾರು ಎರಡು ದಶಕಗಳ ಕಾಲ ಶಿಥಿಲಗೊಂಡಿದ್ದ ಬೆಂಗಳೂರಿನ ದೊಮ್ಮಲೂರು – ಇಂದಿರಾನಗರ ಪಾದಚಾರಿ ಮಾರ್ಗವನ್ನು (Domlur – Indiranagar pedestrian walkway) ಮತ್ತೆ ದುರಸ್ತಿ ಮಾಡಲಾಗಿದೆ. ಇದಕ್ಕೆ ಕಾರಣವೇ ಕೆನಡಾದ ವ್ಯಕ್ತಿ ಕ್ಯಾಲೆಬ್ ಫ್ರೈಸೆನ್ ಅವರು ತಮ್ಮ ವಿಡಿಯೋದಲ್ಲಿ ಈ ವಾಕ್ ವೇ ಸಮಸ್ಯೆಯನ್ನು ಎತ್ತಿ ತೋರಿಸಿದ್ದು. ಇದಾದ ಒಂದೇ ವಾರಕ್ಕೆ ಪಾದಚಾರಿ ಮಾರ್ಗವನ್ನು ದುರಸ್ತಿ ಮಾಡಲಾಗಿದ್ದು, ಪಾದಚಾರಿಗಳಿಗೆ ಇದರಿಂದ ಅನುಕೂಲವಾಗಿದೆ. ಈ ಬಗೆಗಿನ ವಿಡಿಯೋ ಬೆಂಗಳೂರು ವಾಕ್ಸ್‌ನ ಸಂಸ್ಥಾಪಕ ಅರುಣ್ ಪೈ (Bengaluru Walks founder Arun Pai) ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ತ್ವರಿತ ದುರಸ್ತಿ ಕಾರ್ಯಗಳು ಬೆಂಗಳೂರಿನ ಹಲವು ಕಡೆಗಳಲ್ಲಿ ಆಗುವಂತಾಗಲಿ ಎಂದಿದ್ದಾರೆ.

arunpai.theblrwalksguy ಹೆಸರಿನ ಖಾತೆಯಲ್ಲಿ ಬೆಂಗಳೂರು ವಾಕ್ಸ್‌ನ ಸಂಸ್ಥಾಪಕ ಅರುಣ್ ಪೈ ಅವರು ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, ಸೋಮವಾರ ಹೊಸದಾಗಿ ದುರಸ್ತಿ ಮಾಡಲಾದ ವಾಕ್‌ವೇಯನ್ನು ತೋರಿಸಿದ್ದಾರೆ. ಇದು ಈಗ ಪಾದಚಾರಿಗಳಿಗೆ ಮುಕ್ತವಾಗಿದೆ. ಕೆನಡಾದ ವ್ಯಕ್ತಿ ಕ್ಯಾಲೆಬ್ ಫ್ರೈಸೆನ್ ಅವರು ಮಾಡಿದ ಪೋಸ್ಟ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸುಮಾರು 20 ವರ್ಷಗಳ ಕಾಲ ಬಳಕೆಯಲ್ಲಿಲ್ಲದ ಈ ಮಾರ್ಗವನ್ನು ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯ ಸ್ವಯಂಸೇವಕರು ಜೊತೆ ಸೇರಿ ಒಂದು ವಾರದೊಳಗೆ ಜನ ಸಾಮಾನ್ಯರ ಓಡಾಟಕ್ಕೆ ಅನುಕೂಲವಾಗುವಂತೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬಿಬಿಎಂಪಿ ವಲಯ ಆಯುಕ್ತೆ ಸ್ನೇಹಲ್ ಆರ್, ನಿವಾಸಿಗಳೊಂದಿಗೆ ದುರಸ್ತಿ ಮಾಡಲಾದ ಈ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು.

ಇದನ್ನೂ ಓದಿ
Image
ರಸ್ತೆ ಕಾಮಗಾರಿ ವಿಳಂಬ, ಶಾಲೆಗೆ ಹೋಗಲು ಬೆಂಗಳೂರಿನ ಶಾಲಾ ಮಕ್ಕಳ ಪರದಾಟ
Image
ಹಬ್ಬದ ದಿನ ಟ್ರಾಫಿಕ್ ರಹಿತ ಬೆಂಗಳೂರನ್ನು ನೋಡಿ ಖುಷಿ ಪಟ್ಟ ವ್ಯಕ್ತಿ
Image
ಮೂಲ ಸೌಕರ್ಯಕ್ಕಾಗಿ ಬೆಂಗಳೂರಿನ ನಾಗರಿಕರ ವಿಶಿಷ್ಟ ಪ್ರತಿಭಟನೆ
Image
ಬೆಂಗಳೂರಿನ ಸ್ನೇಹಿತೆ ಜತೆಗೆ ಸೇರಿ ಕನ್ನಡ ಕವಿತೆ ಹಾಡಿದ ರಷ್ಯಾದ ಹುಡುಗಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಅದಲ್ಲದೇ, ನಾವು ದೊಮ್ಮಲೂರಿನಿಂದ ಇಂದಿರಾನಗರಕ್ಕೆ ಹೋಗುವ ಪಾದಚಾರಿ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಇದು ಕಳೆದ 20 ವರ್ಷಗಳಿಂದ ಸಾಧ್ಯವಾಗಿರಲಿಲ್ಲ. ಈ ಹಿಂದೆ ಪಾದಚಾರಿಗಳು ಜನನಿಬಿಡ ಸಂಚಾರವನ್ನು ದಾಟುವಾಗ ತಮ್ಮ ಪ್ರಾಣವನ್ನೇ ಪಣಕ್ಕಿಡಬೇಕಾಗಿತ್ತು. ಆದರೆ ಇಂದು ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗಿದೆ. ಇದೀಗ ಜನಸಾಮಾನ್ಯರಿಗೆ ನಡೆಯಲು ತುಂಬಾ ಉತ್ತಮವಾದ ಮಾರ್ಗವಿದಾಗಿದೆ. ಕೆನಡಾದ ವ್ಯಕ್ತಿ, ನಾಗರಿಕರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಯೋಜಿತ ಪ್ರಯತ್ನಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಈ ವಿಡಿಯೋಗೆ ಕೆನಡಾದ ವ್ಯಕ್ತಿಯೂ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಇದು ನನ್ನ ವರ್ಷವನ್ನು ಇನ್ನಷ್ಟು ಉತ್ತಮಗೊಳಿಸಿತು. ಪಾದಚಾರಿ ಮಾರ್ಗವನ್ನು ಸ್ವಚ್ಛಗೊಳಿಸಿದ, ಗೋಡೆಗೆ ಬಣ್ಣ ಬಳಿದ ಹಾಗೂ ದುರಸ್ಥಿ ಮಾಡಿದ ಎಲ್ಲಾ ಸ್ವಯಂಸೇವಕರಿಗೆ ಈ ಎಲ್ಲಾ ಶ್ರೇಯಸ್ಸು ಸಲ್ಲುತ್ತದೆ ಎಂದು ಹೇಳಿದ್ದಾರೆ

ವಾಕ್ ವೇ ಬಗ್ಗೆ ಪೋಸ್ಟ್ ಮಾಡಿದ್ದ ವಿದೇಶಿಗ

ಒಂದು ವಾರದ ಹಿಂದೆ ಕೆನಡಾದ ವ್ಯಕ್ತಿ ಕ್ಯಾಲೆಬ್ ಫ್ರೈಸೆನ್ ಈ ಬಗ್ಗೆ ವಿಡಿಯೋ ಅಪ್‌ಲೋಡ್ ಮಾಡಿದ್ದರು, ಈ ವಿಡಿಯೋದಲ್ಲಿ “ನಾನು ಡೊಮ್ಲೂರಿನಿಂದ ಇಂದಿರಾನಗರಕ್ಕೆ ಪಾದಚಾರಿ ಮಾರ್ಗವನ್ನು ಬಳಸಲು ಪ್ರಯತ್ನಿಸಿದೆ. ನಾನು ಅಂದುಕೊಂಡಂತೆ ಇರಲಿಲ್ಲ ನಡೆಯಲಿಲ್ಲ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದರು. ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ಸಾಧ್ಯವಾಗದ, ಕಸದಿಂದ ತುಂಬಿದ ಹಾದಿಯಲ್ಲಿ ಸಂಚರಿಸಲು ಹೆಣಗಾಡುತ್ತಿರುವುದನ್ನು ತೋರಿಸಲಾಗಿತ್ತು. ಇಲ್ಲಿ ನಡೆಯಲು “ಪಾರ್ಕರ್ ಮತ್ತು ಜಿಮ್ನಾಸ್ಟಿಕ್ಸ್” ಅನ್ನು ಸಹ ಆಶ್ರಯಿಸುತ್ತಿದ್ದರು ಈ ವೀಡಿಯೊ ಆನ್‌ಲೈನ್‌ನಲ್ಲಿ ತ್ವರಿತವಾಗಿ ಚರ್ಚೆಗಳನ್ನು ಹುಟ್ಟುಹಾಕಲಾಗಿದ್ದು, ಒಂದು ವಾರದಲ್ಲೇ ದುರಸ್ತಿ ಕಾರ್ಯ ನಡೆದು ಇದೀಗ ವಾಕ್ ವೇಯ ಚಿತ್ರಣವೇ ಬದಲಾಗಿದೆ.

ಇದನ್ನೂ ಓದಿ: Viral: ರಸ್ತೆ ಕಾಮಗಾರಿ ವಿಳಂಬ, ಟ್ರಾಫಿಕ್ ಜಾಮ್ ಹೆಚ್ಚಳ, ಶಾಲೆಗೆ ಹೋಗಲು ಬೆಂಗಳೂರಿನ ಶಾಲಾ ಮಕ್ಕಳ ಪರದಾಟ

ಈ ವಿಡಿಯೋ ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಭಾರತದ ಸಮಸ್ಯೆಗಳನ್ನು ತೋರಿಸಲು ನಿಮಗೆ ಹೊರಗಿನವರು ಬೇಕೆ, ಇಂತಹ ಸಮಸ್ಯೆಯನ್ನು ನೀವು ಸರಿಪಡಿಸಬಹುದಲ್ಲವೇ. ಈ ಬಗ್ಗೆ ನಾಗರಿಕರು ದೂರು ನೀಡಿದ್ರೆ ಅದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಭಾರತೀಯರು ಈ ಬಗ್ಗೆ ಧ್ವನಿ ಎತ್ತಿದರೂ ಈ ಬಗ್ಗೆ ಯಾವುದೇ ಬೆಲೆಯೇ ಇಲ್ಲ ಎಂದಿದ್ದಾರೆ. ಇನ್ನೊಬ್ಬರು, ಇಂತಹ ವಿಡಿಯೋಗಳನ್ನು ಮಾಡಲು ವಿದೇಶಿಯರನ್ನು ಕರೆತರುವುದು ಸೂಕ್ತ. ಆಗಲಾದರೂ ನಮ್ಮ ದೇಶದಲ್ಲಿ ಜನಸಾಮಾನ್ಯರಿಗೆ ಓಡಾಡಲು ಪಾದಚಾರಿ ಮಾರ್ಗಗಳು ಇರಬಹುದು ಎಂದು ವ್ಯಂಗ್ಯವಾಡಿದ್ದಾರೆ. ಇಂತಹ ಕಾಲ ಬಂತು, ದೇಶದ ಸಮಸ್ಯೆಯನ್ನು ವಿದೇಶಿಯರು ಸರ್ಕಾರಕ್ಕೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸುವಂತಾಯಿತು ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್‌ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:47 am, Thu, 28 August 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ