AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ನಂಬಿ ಕೆಟ್ಟವರಿಲ್ಲವೋ ಗೂಗಲ್​ ಮ್ಯಾಪ್​ನ​ ಅಂದುಕೊಂಡ್ರೆ ತಪ್ಪು…. ಏನಾಯ್ತು ನೋಡಿ

ಗೊತ್ತಿಲ್ಲದ ಸ್ಥಳಗಳಿಗೆ ಪ್ರಯಾಣಿಸುವಾಗ ಗೂಗಲ್‌ ಮ್ಯಾಪ್‌ನ್ನೇ ಅವಲಂಬಿಸುತ್ತಾರೆ. ಈಗಾಗಲೇ ಈ ಗೂಗಲ್‌ ಮ್ಯಾಪ್‌ ನಂಬಿ ಆದ ಎಡವಟ್ಟುಗಳ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಅದೇ ರೀತಿ ಘಟನೆ ನಡೆದಿದ್ದು, ವಾಹನ ಚಾಲಕ ಗೂಗಲ್ ಮ್ಯಾಪ್ ನಂಬಿ ವಾಹನವನ್ನು ಸೇತುವೆಯ ಮೇಲೆ ಇಳಿಸಿದ್ದು, ಇದರ ಪರಿಣಾಮವಾಗಿ ಕುಟುಂಬದ ನಾಲ್ವರು ಸಾವನ್ನಪ್ಪಿದರೆ, ಅದೃಷ್ಟವಶಾತ್ ಐವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದದ್ದು ಎಲ್ಲಿ? ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

Viral: ನಂಬಿ ಕೆಟ್ಟವರಿಲ್ಲವೋ ಗೂಗಲ್​ ಮ್ಯಾಪ್​ನ​ ಅಂದುಕೊಂಡ್ರೆ ತಪ್ಪು.... ಏನಾಯ್ತು ನೋಡಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on:Aug 28, 2025 | 4:00 PM

Share

ರಾಜಸ್ಥಾನ, ಆಗಸ್ಟ್ 28: ನಾವೆಲ್ಲಾ ಡಿಜಿಟಲ್ ಯುಗದಲ್ಲಿದ್ದೇವೆ. ಪ್ರತಿಯೊಂದು ಕೆಲಸಕ್ಕೂ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಈ ತಂತ್ರಜ್ಞಾನದ ಮೊರೆ ಹೋಗುತ್ತೇವೆ. ಈ ಗೂಗಲ್ ಮ್ಯಾಪ್ (Google map) ಬಳಸುವವರೇ ಹೆಚ್ಚು. ದೂರದ ಊರಿಗೆ ಟ್ರಿಪ್‌ಗೆಂದು ಹೋದರೆ ದಾರಿ ಗೊತ್ತಿರುವುದಿಲ್ಲ, ಹೀಗಾಗಿ ಗೂಗಲ್ ಮ್ಯಾಪ್ ನಂಬಿಕೊಂಡು ಪ್ರಯಾಣಿಸುತ್ತಾರೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ಈ ಮ್ಯಾಪ್‌ ದಾರಿ ತಪ್ಪಿಸಿದಿದ್ದು ಇದೆ. ಇದೀಗ ಅಂತಹದ್ದೇ ಘಟನೆಯೂ ರಾಜಸ್ಥಾನದ ಚಿತ್ತೋರ್ ಗಢದಲ್ಲಿ (Chittorgarh of Rajasthan) ನಡೆದಿದೆ. ಗೂಗಲ್ ಮ್ಯಾಪ್ ನಂಬಿ ಸೇತುವೆ ಮೇಲೆ ವಾಹನ ಚಲಾಯಿಸಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೇತುವೆಯ ಮೇಲೆ ಸಿಲುಕಿಕೊಂಡ ವಾಹನ

ಕುಟುಂಬವೊಂದು ಭಿಲ್ವಾರದಿಂದ ಧಾರ್ಮಿಕ ಸ್ಥಳಕ್ಕೆ ತೆರಳಿ ಮನೆಗೆ ವಾಪಸ್ಸು ಆಗುವ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಹೌದು, ಮನೆಗೆ ವಾಪಾಸ್ ಬರುತ್ತಿರುವಾಗ ಚಾಲಕ ಗೂಗಲ್ ಮ್ಯಾಪ್ ತೋರಿದ ಮಾರ್ಗವನ್ನೇ ಅನುಸರಿಸಿದ್ದು, ಈ ವೇಳೆಯಲ್ಲಿ ಮ್ಯಾಪ್ ನಂಬಿಕೊಂಡು ನಿಷೇಧಿತ ಸೇತುವೆ ಮೇಲೆ  ವಾಹನ ಚಲಾಯಿಸಿ ಎಡವಟ್ಟು ಮಾಡಿಕೊಂಡಿದ್ದಾನೆ. ಹೌದು, ವಾಹನವು ಸೋಮಿ- ಉಪ್ರೇಡಾ ಸೇತುವೆಯ ಮೇಲೆ ವ್ಯಾನ್ ಸಿಲುಕಿಕೊಂಡಿದ್ದು ಈ ದುರಂತದಲ್ಲಿ ನಾಲ್ವರು ಸಾವನ್ನಪ್ಪಿಸಿದರೆ, ಐವರು ವಾಹನದ ಮೇಲೆ ಕುಳಿತು ಜೀವ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ
Image
ಸೈಕಲ್​ ಮೇಲೆ ಹೋಗುತ್ತಿದ್ದ ವಿದ್ಯಾರ್ಥಿ ಮೇಲೆ ಬೀದಿ ನಾಯಿ ದಾಳಿ
Image
15 ದಿನ ಗಂಡನ ಜೊತೆ, 15 ದಿನ ಪ್ರೇಮಿ ಜೊತೆ; ಈ ಮಹಿಳೆಯ ಶೋಕಿಗೆ ಊರವರು ಶಾಕ್!
Image
ಮಾಜಿ ಬಿಗ್ ಬಾಸ್ ಸ್ಪರ್ಧಿಯಿಂದ ಗುರುವಾಯೂರು ದೇವಸ್ಥಾನದ ಕೊಳಕ್ಕೆ ಅಪಚಾರ
Image
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ

ಸಂಬಂಧಿಕರಿಗೆ ಕರೆ ಮಾಡಿದ ಸುದ್ದಿ ತಿಳಿಸಿದ ವ್ಯಕ್ತಿ

ಸೇತುವೆಯ ಮೇಲೆ ವ್ಯಾನ್ ಸಿಲುಕಿಕೊಳ್ಳುತ್ತಿದ್ದಂತೆ ಐವರು ತಲೆ ಓಡಿಸಿದ್ದಾರೆ. ಸಾವು ಕಣ್ಣ ಮುಂದೆ ಇರುವಾಗಲು ಇವರು ವಾಹನದ ಗಾಜು ಒಡೆದು ಛಾವಣಿ ಮೇಲೆ ಹತ್ತಿ ಪ್ರಾಣ ಉಳಿಸಿಕೊಂಡಿದ್ದಾರೆ. ಆ ಬಳಿಕ ಈ ಐವರಲ್ಲಿ ಒಬ್ಬ ವ್ಯಕ್ತಿಯೂ ತಮ್ಮ ಸಂಬಂಧಿಕರಿಗೆ ಫೋನ್ ಮಾಡಿ ಈ ವಿಷಯವನ್ನು ತಿಳಿಸಿದ್ದಾನೆ. ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಚಿತ್ತೋರ್ ಗಢದ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ತ್ರಿಪಾಠಿ ತಿಳಿಸಿದ್ದಾರೆ.

ನಾಲ್ವರು ನೀರುಪಾಲು, ಐವರು ಪ್ರಾಣಾಪಾಯದಿಂದ ಪಾರು

ಠಾಣಾಧಿಕಾರಿ ರಶ್ಮಿ ದೇವೇಂದ್ರ ಸಿಂಗ್ ಸ್ಥಳಕ್ಕೆ ಆಗಮಿಸಿ ಸೇತುವೆಯ ಮೇಲೆ ಸಿಲುಕಿದ್ದ ವಾಹನದಲ್ಲಿದ್ದ ಜನರನ್ನು ಸ್ಥಳಾಂತರಿಸಲು ದೋಣಿ ವ್ಯವಸ್ಥೆ ಮಾಡಿದ್ದು, ಕತ್ತಲಾಗಿದ್ದ ಕಾರಣ ವಾಹನವಿದ್ದ ಸ್ಥಳ ತಲುಪು ಕಷ್ಟವಾಗಿತ್ತು. ಆದರೆ, ಸೇತುವೆಯಲ್ಲಿ ಸಿಲುಕಿದ್ದ ಐವರು ಮೊಬೈಲ್ ಟಾರ್ಚ್ ಹಾಕಿ, ಪೊಲೀಸರಿಗೆ ತಾವು ಇಲ್ಲಿ ಇದ್ದೇವೆ ಎನ್ನುವ ಸುಳಿವು ನೀಡಿದ್ದು, ಈ ಐವರನ್ನು ರಕ್ಷಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಸೈಕಲ್​ ಮೇಲೆ ಹೋಗುತ್ತಿದ್ದ ವಿದ್ಯಾರ್ಥಿ ಮೇಲೆ ಬೀದಿ ನಾಯಿ ದಾಳಿ

ಪೊಲೀಸ್ ತಂಡ ಸ್ಥಳಕ್ಕೆ ತಲುಪುವ ಮೊದಲೇ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಕೊಚ್ಚಿ ಹೋಗಿದ್ದರು. ಈಗಾಗಲೇ ಮೂರು ಜನರ ಶವಗಳನ್ನು ಹೊರತೆಗೆಯಲಾಗಿದ್ದು, ಮಗುವಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಈ ಘಟನೆಯಲ್ಲಿ ಮೃತಪಟ್ಟವರನ್ನು ಚಂದಾ (21), ಅವರ ಮಗಳು ರುತ್ವಿ (6), ಮಮತಾ (25) ಮತ್ತು ಅವರ ಮಗಳು ಖುಷಿ (4) ಎಂದು ಗುರುತಿಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Thu, 28 August 25

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ