Optical Illusion: ಹದ್ದಿನ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಅಳಿಲನ್ನು 20 ಸೆಕೆಂಡುಗಳಲ್ಲಿ ಪತ್ತೆಹಚ್ಚಿ
ಆಪ್ಟಿಕಲ್ ಭ್ರಮೆಗಳು ಸಾಮಾನ್ಯವಾಗಿ ಜನರ ಮೆದುಳಿಗೆ ಕೆಲಸ ನೀಡುವುದರ ಜೊತೆಗೆ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತದೆ. ಈ ಒಗಟಿನ ಚಿತ್ರಗಳನ್ನು ನೋಡಿದ ನಂತರ ಗೊಂದಲಕ್ಕೆ ಒಳಗಾಗುವುದು ಸಹಜ. ಆದರೆ ಇದೀಗ ಇಂತಹದ್ದೇ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರದಲ್ಲಿ ಅಡಗಿರುವ ಅಳಿಲು ಅಡಗಿದೆ. ಕೇವಲ ಇಪ್ಪತ್ತು ಸೆಕೆಂಡುಗಳೊಳಗೆ ಈ ಒಗಟನ್ನು ಬಿಡಿಸುವ ಸವಾಲು ನೀಡಲಾಗಿದ್ದು, ಈ ಮೋಜಿನ ಆಟದ ಚಿತ್ರದತ್ತ ಒಮ್ಮೆ ಕಣ್ಣು ಹಾಯಿಸಿ.

ಸಾಮಾಜಿಕ ಜಾಲತಾಣದಲ್ಲಿ ಕಣ್ಣು ಮತ್ತು ಮೆದುಳಿಗೆ ಸವಾಲೊಡ್ಡುವ ಕುತೂಹಲಕಾರಿ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ಹರಿದಾಡುತ್ತಿರುತ್ತವೆ. ಕೆಲವರಿಗೆ ಇಂತಹ ಒಗಟಿನ ಚಿತ್ರಗಳನ್ನು ಬಿಡಿಸುವುದೆಂದರೆ ಅದೇನೋ ಖುಷಿ. ಆದರೆ ಹೆಚ್ಚಿನವರು ಇಂತಹ ಒಗಟನ್ನು ಬಿಡಿಸುವಲ್ಲಿ ವಿಫಲರಾಗುತ್ತಾರೆ. ಆದರೆ ಭ್ರಮೆಯನ್ನು ಉಂಟು ಮಾಡುವ ಈ ಚಿತ್ರಗಳು ನಮ್ಮ ಕಣ್ಣಿನ ಸೂಕ್ಷ್ಮತೆ ಮತ್ತು ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಕೆಲವೊಂದು ನಮ್ಮ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತವೆ. ಇದೀಗ ಅಂತಹದ್ದೇ ಚಿತ್ರವೊಂದು ವೈರಲ್ ಆಗಿದ್ದು, ಆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ, ಇಲ್ಲಿ ಅಡಗಿರುವ ಅಳಿಲು (squirrel) ಎಲ್ಲಿದೆ ಎಂದು ಹೇಳಬೇಕು. ಈ ಒಗಟಿನ ಚಿತ್ರ ಬಿಡಿಸಲು ನೀವು ರೆಡಿ ಇದ್ದೀರಾ?.
ಈ ಚಿತ್ರದಲ್ಲಿ ಏನಿದೆ?
ಆಪ್ಟಿಕಲ್ ಭ್ರಮೆಯ ಚಿತ್ರಗಳು ನೋಡಲು ತುಂಬಾ ಸಾಮಾನ್ಯವಾಗಿ ಕಂಡರೂ ಉತ್ತರ ಹುಡುಕಲು ಕುಳಿತುಕೊಂಡಾಗಲೇ ಎಷ್ಟು ಕಷ್ಟ ಎಂದೆನಿಸುತ್ತದೆ. ಇದೀಗ ವೈರಲ್ ಆಗಿರುವ ಈ ಚಿತ್ರದಲ್ಲಿ ಮಕ್ಕಳಿಂದ ಹಿಡಿದು ಯುವಕ ಯುವತಿಯರು ಹಚ್ಚ ಹಸಿರಿನಿಂದ ಕೂಡಿದ ಪರಿಸರದಲ್ಲಿ ಬಿದ್ದಿರುವ ಕಸವನ್ನು ಹೆಕ್ಕುವುದರಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ಚಿತ್ರದಲ್ಲಿ ಅಳಿಲೊಂದು ಅಡಗಿದೆ. ಕೇವಲ 20 ಸೆಕೆಂಡುಗಳಲ್ಲಿ ಈ ಅಳಿಲು ಎಲ್ಲಿದೆ ಎಂದು ಪತ್ತೆ ಹಚ್ಚುವ ಸವಾಲು ನೀಡಲಾಗಿದ್ದು, ನೀವು ರೆಡಿ ಇದ್ರೆ ಈಗಲೇ ನಿಮ್ಮ ಸಮಯ ಆರಂಭವಾಗುತ್ತದೆ.
ಈ ಸವಾಲನ್ನು ಸ್ವೀಕರಿಸಿದ್ದೀರಾ?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಚಿತ್ರವು ಆಪ್ಟಿಕಲ್ ಭ್ರಮೆಗೆ ಪರಿಪೂರ್ಣ ಉದಾಹರಣೆಯಾಗಿದೆ. ನಿಮಗೆ ಹದ್ದಿನಂತಹ ಕಣ್ಣುಗಳಿದ್ದರೆ, ಸಮಯದ ಮಿತಿಯೊಳಗೆ ಅಳಿಲನ್ನು ಗುರುತಿಸುತ್ತೀರಿ. ಈ ಒಗಟಿನ ಚಿತ್ರವನ್ನು ಬಿಡಿಸಲು ನೀವು ಸಿದ್ದವಿದ್ದು ಸವಾಲನ್ನು ಸ್ವೀಕರಿಸಿದ್ದೀರಿ ಎಂದು ನಾವು ಭಾವಿಸುತ್ತೇವೆ.
ಇದನ್ನೂ ಓದಿ:Optical Illusion: ಹಚ್ಚಹಸಿರಿನ ಪರಿಸರದ ನಡುವೆ ಕಪ್ಪೆ ಎಲ್ಲಿದೆ ಎಂದು ಹೇಳಬಲ್ಲಿರಾ?
ಅಳಿಲನ್ನು ಪತ್ತೆ ಹಚ್ಚಿದ್ರಾ?

ಈ ಆಪ್ಟಿಕಲ್ ಇಲ್ಯೂಷನ್ ಫೋಟೋ ಜನರಿಗೆ ಗೊಂದಲವನ್ನು ಉಂಟು ಮಾಡಿದೆ. ಈ ಒಗಟನ್ನು ಬಿಡಿಸಲು ಸಾಧ್ಯವಾಗಿದ್ರೆ ನಿಮ್ಮದು ಉತ್ತಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತರಾಗಿದ್ದೀರಿ ಎಂದರ್ಥ. ನೀವು ಇಲ್ಲಿ ನೀಡಿರುವ ನಿರ್ದಿಷ್ಟ ಸಮಯದೊಳಗೆ ಅಳಿಲನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲದಿದ್ದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. ಈ ಚಿತ್ರದಲ್ಲಿ ಯುವತಿಯೊಬ್ಬಳು ಕಸವನ್ನು ಹೆಕ್ಕಿ ಗೋಣಿ ಚೀಲಕ್ಕೆ ಹಾಕುತ್ತಿರುವುದನ್ನು ಕಾಣಬಹುದು. ಆ ಗೋಣಿ ಚೀಲದ ಪಕ್ಕದಲ್ಲೇ ಅಳಿಲು ಇದೆ. ಉತ್ತರವನ್ನು ಹಳದಿ ಬಣ್ಣದಲ್ಲಿ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:43 pm, Thu, 28 August 25








