Optical Illusion: ಹಚ್ಚಹಸಿರಿನ ಪರಿಸರದ ನಡುವೆ ಕಪ್ಪೆ ಎಲ್ಲಿದೆ ಎಂದು ಹೇಳಬಲ್ಲಿರಾ?
ದಿನಬೆಳಗಾದರೆ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ ಹಾಗೂ ಬ್ರೈನ್ ಟೀಸರ್‌ನಂತಹ ಒಗಟಿನ ಚಿತ್ರಗಳುಗಳು ವೈರಲ್ ಆಗುತ್ತಿರುತ್ತದೆ. ಈ ಮೋಜಿನ ಚಿತ್ರಗಳನ್ನು ಕಣ್ಣನ್ನು ಮೋಸಗೊಳಿಸಿ ಭ್ರಮೆಯಲ್ಲಿ ಸಿಲುಕಿಸುತ್ತದೆ. ಇದೀಗ ಇಂತಹದ್ದೆ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಹಚ್ಚ ಹಸಿರಿನ ಗಿಡಗಳು ಹಾಗೂ ಪೊದೆಗಳ ನಡುವೆ ಅಡಗಿರುವ ಕಪ್ಪೆಯನ್ನು ಕಂಡುಹಿಡಿಯಬೇಕು.

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಅಥವಾ ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿವೆ. ಇದೊಂದು ಮೋಜಿನ ಆಟವಾಗಿದ್ದು, ಸಮಯ ಕಳೆದದ್ದೇ ತಿಳಿಯುವುದಿಲ್ಲ. ಈ ಚಿತ್ರಗಳು ಮೆದುಳಿಗೆ ಕೆಲಸ ನೀಡುವುದರ ಜೊತೆಗೆ ಬುದ್ಧಿವಂತಿಕೆಗೂ ಸವಾಲೆಸುಗುತ್ತದೆ. ಮೇಲ್ನೋಟಕ್ಕೆ ಈ ಒಗಟಿನ ಚಿತ್ರಗಳು ಸುಲಭವಾಗಿ ಕಂಡರೂ ಇದು ಟ್ರಿಕ್ಕಿಯಾಗಿದ್ದು ಉತ್ತರ ಹುಡುಕುವುದು ಕಷ್ಟ. ಇದೀಗ ಇಂತಹದ್ದೇ ಭ್ರಮೆಯನ್ನು ಉಂಟು ಮಾಡುವ ಒಗಟಿನ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಕಪ್ಪೆಯೊಂದು ಅಡಗಿದೆಯಂತೆ. ಮೇಲ್ನೋಟಕ್ಕೆ ಸುಲಭವಾಗಿದೆ ಎಂದುಕೊಂಡರೂ ಒಗಟನ್ನು ಬಿಡಿಸುವಾಗಲೇ ಎಷ್ಟು ಕಷ್ಟಕರ ಎಂದು ತಿಳಿಯುತ್ತದೆ. ಈ ಕಪ್ಪೆಯನ್ನು ಕಂಡು ಹಿಡಿಯಲು ಹತ್ತೇ ಹತ್ತು ನಿಮಿಷ ಕಾಲಾವಕಾಶವಿದ್ದು, ಈ ಒಗಟನ್ನು ಬಿಡಿಸಲು ರೆಡಿ ನೀವು ಇದ್ದೀರಾ? ಹಾಗಾದ್ರೆ ಈಗಲೇ ನಿಮ್ಮ ಸಮಯ ಆರಂಭವಾಗುತ್ತದೆ.
ಈ ಚಿತ್ರದಲ್ಲಿ ಏನಿದೆ ಎಂದು ನೋಡಿ
ರೋಬೋ-ಡ್ರ್ಯಾಗನ್ ಎಂಬ ಬಳಕೆದಾರರು r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಈ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಚಿತ್ರವನ್ನು ಮೊದಲ ಬಾರಿಗೆ ಕಂಡಾಗ ಹಚ್ಚ ಹಸಿರಿನ ಗಿಡಗಳು ಹಾಗೂ ಪೊದೆಗಳಿಂದ ಆವೃತ್ತವಾಗಿರುವ ದೃಶ್ಯ ಮಾತ್ರ ಕಾಣಿಸುತ್ತದೆ. ಹಿನ್ನಲೆಯಲ್ಲಿ ಒಂದು ಸಣ್ಣದಾದ ಮನೆಯೊಂದಿದೆ. ಈ ಮನೆಯ ಸುತ್ತಲೂ ಹಚ್ಚಹಸಿರಿನಿಂದ ಕೂಡಿದ ಮರ ಗಿಡಗಳು ಹಾಗೂ ಪೊದೆಯನ್ನು ಕಾಣಬಹುದು. ಈ ಗಿಡಗಳಿಂದ ಒಂದೆರಡು ಗುಲಾಬಿ ಬಣ್ಣದ ಹೂವುಗಳಿವೆ. ಆದರೆ ಈ ಚಿತ್ರದಲ್ಲಿ ಕಪ್ಪೆಯೊಂದು ಅಡಗಿದೆ. ಹಚ್ಚಹಸಿರಿನ ಪರಿಸರದ ನಡುವೆ ಕಪ್ಪೆ ಎಲ್ಲಿದೆ ಎಂದು ಹತ್ತು ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕು. ಈ ಸವಾಲು ಸ್ವೀಕರಿಸಲು ರೆಡಿ ಇದ್ದೀರಾ ಎಂದು ನಾವು ಭಾವಿಸುತ್ತೇವೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಮಲಗಿರುವ ಬೆಕ್ಕನ್ನು ಕಂಡು ಹಿಡಿಯಬಲ್ಲಿರಾ?
ನಿಮ್ಮ ಕಣ್ಣಿಗೆ ಕಪ್ಪೆ ಕಾಣಿಸಿತೇ?

ಮೊದಲಿಗೆ ಈ ಚಿತ್ರ ನೋಡಿದಾಗ ಇದು ಉದ್ಯಾನವನದಂತೆ ಭಾಸವಾದರೂ, ತೀಕ್ಷ್ಣ ಕಣ್ಣುಗಳನ್ನು ಹೊಂದಿರುವ ಕೆಲವೇ ಜನರು ಅದನ್ನು ಕೇವಲ 10 ಸೆಕೆಂಡುಗಳಲ್ಲಿ ಈ ಒಗಟನ್ನು ಬಿಡಿಸಲು ಸಾಧ್ಯ. ಈ ಚಿತ್ರದಲ್ಲಿ ಕಪ್ಪೆ ಮೈಬಣ್ಣವು ಹಸಿರು ಪರಿಸರದೊಂದಿಗೆ ಬೆರೆತಿದ್ದು, ಹೀಗಾಗಿ ಗೊಂದಲಕ್ಕೆ ಒಳಗಾಗುವುದು ಸಹಜ. ಎಷ್ಟೇ ಪ್ರಯತ್ನ ಪಟ್ಟರೂ ಕಪ್ಪೆಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲವೇ, ಚಿಂತಿಸಬೇಡಿ. ಉತ್ತರವನ್ನು ನಾವು ನಿಮಗೆ ಹೇಳುತ್ತೇವೆ. ಈ ಚಿತ್ರದ ಮಧ್ಯಭಾಗವನ್ನು ಗಮನಿಸಿ, ಸಸ್ಯದ ಎಲೆಯ ಮೇಲೆ ಕಪ್ಪೆಯೊಂದು ಕುಳಿತಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








