Video: ಇಳಿವಯಸ್ಸಿನಲ್ಲಿ ಎಂಬಿಎ ಪದವಿ ಪಡೆದ ತಂದೆ, ಅಪ್ಪನ ಸಾಧನೆಯನ್ನು ಸಂಭ್ರಮಿಸಿದ ಮಗ
ತಮ್ಮ ಮುದ್ದಿನ ಮಕ್ಕಳು ಜೀವನದಲ್ಲಿ ಏನಾದ್ರು ಸಾಧನೆ ಮಾಡಿದಾಗ, ಯಶಸ್ಸು ಗಳಿಸಿದಾಗ ತಂದೆ ತಾಯಿಯರಿಗೆ ಆಗುವ ಖುಷಿ ಅಷ್ಟಿಷ್ಟಲ್ಲ. ಮಕ್ಕಳ ಏಳಿಗೆಯಲ್ಲೇ ಖುಷಿ ಕಾಣುವ ಹೆತ್ತವರ ನಡುವೆ ಮಗನ ಈ ವಿಡಿಯೋ ಸಖತ್ ವೈರಲ್ ಆಗಿದೆ. ತನ್ನ ಇಳಿ ವಯಸ್ಸಿನಲ್ಲಿ ಎಂಬಿಎ ಪದವಿ ಪಡೆದ ತಂದೆಯ ಈ ಸಾಧನೆಯನ್ನು ಮಗನು ಸೆಲೆಬ್ರೇಶನ್ ಮಾಡಿದ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

ಕಲಿಯುವ ಮನಸ್ಸಿದ್ದರೆ ವಯಸ್ಸು (Age) ಅಡ್ಡಿಯಾಗುವುದಿಲ್ಲ. ಈಗಾಗಲೇ ತಮ್ಮ ಇಳಿವಯಸ್ಸಿನಲ್ಲಿ ಹತ್ತನೇ ಪರೀಕ್ಷೆ ಬರೆದು, ಇಲ್ಲದಿದ್ದರೆ ಪದವಿ ಪಡೆದ ವ್ಯಕ್ತಿಗಳ ಸ್ಟೋರಿಯನ್ನು ನೀವು ಕೇಳಿರುತ್ತೀರಿ. ಇಲ್ಲೊಬ್ಬ 52 ವರ್ಷದ ವ್ಯಕ್ತಿಯೂ ಎಂಬಿಎ ಪದವಿ (MBA Degree) ಪಡೆದಿದ್ದಾನೆ. ಪದವಿ ಪಡೆದು ತನ್ನ ಮನೆ ಪ್ರವೇಶಿಸಿದಾಗ ಮಗನು ಬಹಳ ಅದ್ದೂರಿಯಾಗಿ ಸ್ವಾಗತಿಸಿದ್ದು, ತಂದೆಯ ಈ ಸಾಧನೆಯನ್ನು ಮಗನು ಸಂಭ್ರಮಿಸಿದ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.
mitreyasathe ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋಗೆ ಪದವಿ ಪಡೆದಿದ್ದೇನೆ’ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಈ ವಿಡಿಯೋದಲ್ಲಿ ಇಳಿವಯಸ್ಸಿನಲ್ಲಿ ಎಂಬಿಎ ಪದವಿ ಪಡೆದ ವ್ಯಕ್ತಿ ತನ್ನ ಮನೆಗೆ ಪ್ರವೇಶಿಸುತ್ತಾರೆ. ಈ ವೇಳೆ ಅವರ ಮುಖವನ್ನು ಹೋಲುವ ಮುಖವಾಡಗಳನ್ನು ಧರಿಸಿದ ಸಂಬಂಧಿಕರು ಅವರನ್ನು ಅದ್ದೂರಿಯಾಗಿ ಸ್ವಾಗತಿಸುವುದನ್ನು ಕಾಣಬಹುದು. ಮನೆಯ ಗೋಡೆಗಳನ್ನು ಕಲರ್ ಫುಲ್ ಆಗಿ ಅಲಂಕರಿಸಲಾಗಿದ್ದು, ಕುಟುಂಬ ಮತ್ತು ಸ್ನೇಹಿತರು ಸಂಭ್ರಮಿಸುವುದನ್ನು ಕಾಣಬಹುದು. ಈ ಗ್ರಾಜುವೇಷನ್ ಪಾರ್ಟಿಯನ್ನು ಮಗನೇ ಆಯೋಜಿಸಿದ್ದು ತಂದೆಗೆ ಮರೆಯಲಾಗದ ಸರ್ಪ್ರೈಸ್ ನೀಡಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:Video: ಮಡಿಲಿನಲ್ಲಿ ಕಂದಮ್ಮನನ್ನು ಮಲಗಿಸಿಕೊಂಡು ಆಟೋ ಓಡಿಸಿ ಜೀವನ ಸಾಗಿಸುವ ಬೆಂಗಳೂರಿನ ಆಟೋ ಡ್ರೈವರ್
ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಬಳಕೆದಾರರು ಈ ವಿಡಿಯೋ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ ಎಂದಿದ್ದಾರೆ. ಮತ್ತೊಬ್ಬರು ಈ ವಿಡಿಯೋ ಮುದ್ದಾಗಿದೆ. ಅಂಕಲ್ ನಿಮಗೆ ಶುಭಾಶಯಗಳು, ನನ್ನ ತಾಯಿ 50ನೇ ವಯಸ್ಸಿನಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡಳು, ಆ ಸಂದರ್ಭ ಅದ್ಭುತವಾಗಿತ್ತು ಎಂದಿದ್ದಾರೆ. ಮುಖವೇ ಇವರ ಸಂತೋಷ ಎಷ್ಟಿದೆ ಎಂದು ಹೇಳುತ್ತಿದೆ ಎಂದು ಇನ್ನೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:24 pm, Tue, 9 September 25








