Video: ಹೆರಿಗೆ ನೋವಿನಲ್ಲೂ ಹೆಂಡ್ತಿ ಮೊಗದಲ್ಲಿ ನಗು ಮೂಡಿಸಲು ವಿಚಿತ್ರ ಡ್ಯಾನ್ಸ್ ಮಾಡಿದ ಪತಿ
ಗಂಡನಾದವನು ಮಡದಿಯ ನೋವು ನಲಿವಿನಲ್ಲಿ ಜೊತೆಗೆ ನಿಲ್ಬೇಕು. ಎಷ್ಟೇ ಕಷ್ಟದ ಸಂದರ್ಭವೇ ಬರಲಿ ಆಕೆಯ ಮುಖದಲ್ಲಿ ನಗು ಮಾಸದಂತೆ ನೋಡಿಕೊಳ್ಳಬೇಕು. ಇದಕ್ಕೆ ಪರ್ಫೆಕ್ಟ್ ಉದಾಹರಣೆಯಂತಿದೆ ಈ ವಿಡಿಯೋ. ಪತ್ನಿಯೂ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದರೆ ಪತಿ ವಿಚಿತ್ರ ಡ್ಯಾನ್ಸ್ ಮಾಡಿ ಆಕೆಯ ಮುಖದಲ್ಲಿ ನಗು ಮೂಡಿಸಲು ಪ್ರಯತ್ನಿಸಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹೃದಯವನ್ನು ಗೆದ್ದಿದೆ.

ಹೆರಿಗೆ (childbirth) ಎನ್ನುವುದು ಹೆಣ್ಣಿಗೆ ಪುನರ್ಜನ್ಮವಿದ್ದಂತೆ. ಈ ಸಮಯದಲ್ಲಿ ಹೆಣ್ಣು ಅನುಭವಿಸುವ ನೋವನ್ನು ಹೇಳಲು ಅಸಾಧ್ಯ. ಜೀವನದ ಪ್ರತಿಕ್ಷಣದಲ್ಲಿ ಜೊತೆಯಾಗುವ ಪತಿಯೂ ಕಂದಮ್ಮನಿಗೆ ಜನ್ಮ ನೀಡುವ ಸಮಯದಲ್ಲೂ ತನ್ನ ಜೊತೆಗೆ ಇರಬೇಕು. ತನಗೆ ಧೈರ್ಯ ತುಂಬಬೇಕು ಎಂದು ಹೆಣ್ಣು ಬಯಸುತ್ತಾಳೆ. ಅಂತಹ ಪತಿ ಸಿಕ್ಕರೆ ಆಕೆಯಷ್ಟು ಅದೃಷ್ಟವಂತೆ ಬೇರೆ ಯಾರು ಇಲ್ಲ. ಪತಿಯೂ ಪತ್ನಿಯ ಮೊಗದಲ್ಲಿ ನಗು ತರಿಸಲು ಎಷ್ಟು ಕಷ್ಟ ಪಡುತ್ತಿದ್ದಾನೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ ಹೌದು, ಆಸ್ಪತ್ರೆಯ ಹಾಸಿಗೆಯ ಮೇಲೆ ಹೆರಿಗೆ ನೋವು ತಾಳಲಾರದೇ ಮಲಗಿರುವ ತನ್ನ ಮಡದಿಯ ಮೊಗದಲ್ಲಿ ನಗು ತರಿಸಲು ವ್ಯಕ್ತಿಯೊಬ್ಬ ತನ್ನಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದಾನೆ. ವಿಚಿತ್ರವಾಗಿ ಡ್ಯಾನ್ಸ್ (Dance) ಮಾಡುವ ಆಕೆಯ ನಗುವಿಗೆ ಕಾರಣವಾಗಿದ್ದಾನೆ. ಈ ಕ್ಲಿಪಿಂಗ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
kaippan ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋ ಪರ್ಫೆಕ್ಟ್ ಪತಿಯು ಹೇಗಿರಬೇಕು ಎನ್ನುವುದಕ್ಕೆ ಸಾಕ್ಷಿಯಂತಿದೆ ಈ ದೃಶ್ಯ. ಈ ವಿಡಿಯೋಗೆ ಲೇಬರ್ ರೂಮ್ ಮೋಜಿನ ಸಮಯ, ಒತ್ತಡ ರಹಿತ ಮನರಂಜನೆ” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಆಸ್ಪತ್ರೆಯ ಹಾಸಿಗೆಯ ಮೇಲೆ ಹೆರಿಗೆ ನೋವು ಅನುಭವಿಸುತ್ತಿರುವ ಪತ್ನಿಯನ್ನು ಕಂಡು ಪತಿಯೂ ಡ್ಯಾನ್ಸ್ ಮಾಡುತ್ತಿದ್ದಾನೆ. ಆಕೆಯ ನೋವನ್ನು ಕಂಡು ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದಾನೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಪತ್ನಿಯ ಹೆರಿಗೆ ನೋವಿನ ನಡುವೆ ಜೊತೆಗೆ ನಿಂತ ಪತಿಯು ಆಕೆಯ ಮೊಗದಲ್ಲಿ ನಗು ಮೂಡಿಸಲು ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಬಹುದು. ಕೊನೆಗೆ ಆಕೆಯ ಮೊಗದಲ್ಲಿ ನಗು ತರಿಸುವಲ್ಲಿ ಯಶಸ್ವಿಯಾಗಿದ್ದು, ಮಡದಿಯ ಹಣೆಗೆ ಪ್ರೀತಿಯಿಂದ ಮುತ್ತಿಟ್ಟು ನಾನು ನಿನ್ನ ಜೊತೆಗೆ ಇದ್ದಾನೆ ಎನ್ನುವುದನ್ನು ಈ ಸಿಹಿ ಮುತ್ತಿನ ಮೂಲಕ ಹೇಳುವಂತೆ ಇದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:Viral: ಜೀವಂತ ಕಂದಮ್ಮನಿಗೆ ಜನ್ಮ ನೀಡುವ ರೋಬೋಟ್, ಇನ್ನು ಮಹಿಳೆಯರ ಅಗತ್ಯವಿಲ್ಲ
ಈ ವಿಡಿಯೋ ಐದು ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ವಿಡಿಯೋಗೆ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಳಕೆದಾರರೊಬ್ಬರು, ಈ ಜೋಡಿಗೆ ದೃಷ್ಟಿಯಾಗದಿರಲಿ , ಯಾರಾದರೂ ದಯವಿಟ್ಟು ಇವರಿಬ್ಬರನ್ನು ಕೆಟ್ಟ ದೃಷ್ಟಿಯಿಂದ ದೂರವಿಡಿ ಎಂದು ಹೇಳಿದ್ದಾರೆ. ಅದ್ಭುತ ಪ್ರಯತ್ನ ಎಂದು ಮತ್ತೊಬ್ಬರು ಹೇಳಿದರೆ, ಈ ರೀತಿ ಗಂಡ ಸಿಕ್ಕರೆ ಮತ್ತೇನು ಬೇಕು ಈ ಜಗದಲ್ಲಿ, ಆಕೆ ನಿಜಕ್ಕೂ ಅದೃಷ್ಟವಂತೆ. ನಿಮ್ಮ ಪ್ರೀತಿಯೂ ಹೀಗೆ ಜೀವನ ಪರ್ಯಂತ ಇರಲಿ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








