AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳೆಯನ ಹೆಂಡತಿಯನ್ನು ತಾನಿಟ್ಟುಕೊಂಡು ತನ್ನ ಪತ್ನಿಯನ್ನು ಆತನಿಗೆ ಕೊಟ್ಟ ಸ್ನೇಹಿತ!

ಗೆಳೆಯರ ನಡುವೆ ಹಣ, ವಸ್ತುಗಳ ವಿನಿಯಮ, ಕಾರುಗಳ ವಿನಿಮಯವೂ ನಡೆದ ಉದಾಹರಣೆಗಳಿವೆ. ಆದರೆ, ಹೆಂಡತಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡ ಘಟನೆಯನ್ನು ಎಲ್ಲಾದರೂ ಕೇಳಿದ್ದೀರಾ? ಉತ್ತರ ಪ್ರದೇಶದಲ್ಲಿ ನಡೆದ ಅಂತಹ ಪತ್ನಿ ವಿನಿಮಯದ ಕಥೆಯೊಂದು ಬಹಳ ಅದ್ಭುತವಾಗಿದೆ.  ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಒಬ್ಬ ಯುವಕ ತನ್ನ ಹೆಂಡತಿಯನ್ನು ತನ್ನ ಸ್ನೇಹಿತನ ಮನೆಗೆ ಕಳುಹಿಸಿದ್ದು, ಈಗ ಅವನು ತನ್ನ ಸ್ನೇಹಿತನ ಹೆಂಡತಿಯೊಂದಿಗೆ ವಾಸಿಸುತ್ತಿದ್ದಾನೆ. ಇಬ್ಬರೂ 7 ವರ್ಷಗಳಿಂದ ಪರಸ್ಪರ ಸ್ನೇಹಿತರಾಗಿದ್ದಾರೆ. ಅವರಿಬ್ಬರೂ ಅಹಮದಾಬಾದ್‌ನಲ್ಲಿ ಕೆಲಸ ಮಾಡುತ್ತಾರೆ. ಇಬ್ಬರೂ ಒಂದೇ ಹಳ್ಳಿಯವರು. ಆದ್ದರಿಂದ, ಇಬ್ಬರೂ ಪರಸ್ಪರರ ಮನೆಗೆ ಭೇಟಿ ನೀಡುತ್ತಿದ್ದರು.

ಗೆಳೆಯನ ಹೆಂಡತಿಯನ್ನು ತಾನಿಟ್ಟುಕೊಂಡು ತನ್ನ ಪತ್ನಿಯನ್ನು ಆತನಿಗೆ ಕೊಟ್ಟ ಸ್ನೇಹಿತ!
Representative Image
ಸುಷ್ಮಾ ಚಕ್ರೆ
|

Updated on:Aug 20, 2025 | 4:45 PM

Share

ನೊಯ್ಡಾ, ಆಗಸ್ಟ್ 20: ಇದು ನೀವು ಯಾವ ಸಿನಿಮಾದಲ್ಲೂ ನೋಡಿರದ ವಿಚಿತ್ರವಾದ ಕತೆ. ಒಂದೇ ಹಳ್ಳಿಯ ಸ್ನೇಹಿತರಿಬ್ಬರು ತಮ್ಮ ಹೆಂಡತಿಯರನ್ನು ಪರಸ್ಪರ ವಿನಿಯಮ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ (Uttar Pradesh) ಬಾರಾಬಂಕಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಆಗಾಗ ಗೆಳೆಯನ ಮನೆಗೆ ಹೋಗುತ್ತಿದ್ದ ಯುವಕನಿಗೆ ತನ್ನ ಹೆಂಡತಿಗಿಂತ ಆಕೆಯೇ ತನಗೆ ಒಳ್ಳೆಯ ಜೋಡಿ ಎನಿಸಿತ್ತು. ಹೀಗಾಗಿ, ಆತ ಗೆಳೆಯನ ಹೆಂಡತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ ಆಕೆಯೊಂದಿಗೆ ವಾಸವಾಗಿದ್ದಾನೆ. ಅದೇರೀತಿ ಆತನ ಗೆಳೆಯ ಕೂಡ ಇವನ ಹೆಂಡತಿಯೊಂದಿಗೆ ಸಂಸಾರ ನಡೆಸುತ್ತಿದ್ದಾನೆ! ನಿಮಗೆ ಇದೆಂಥಾ ಎಕ್ಸ್​ಚೇಂಜ್ ಆಫರ್ ಎಂದು ಅಚ್ಚರಿಯಾಗುವುದರಲ್ಲಿ ಅನುಮಾನವೇ ಇಲ್ಲ. ಗೆಳೆಯನ ಹೆಂಡತಿಯನ್ನು ಕೋರ್ಟ್​ನಲ್ಲಿ ಮದುವೆಯಾಗಿರುವ ಯುವಕ ಆಕೆಯೊಂದಿಗೆ ಜೀವನ ನಡೆಸುತ್ತಿದ್ದಾನೆ. ಹೀಗಾಗಿ, ಅನಿವಾರ್ಯವಾಗಿ ಗಂಡನಿಗೆ ಬೇಡವಾದ ಹೆಂಡತಿ ಹಾಗೂ ಹೆಂಡತಿಗೆ ಬೇಡವಾದ ಗಂಡ ಇಬ್ಬರೂ ಸೇರಿ ಈಗ ದಾಂಪತ್ಯ ನಡೆಸುತ್ತಿದ್ದಾರೆ!

ಅನೂಪ್ ಎಂಬ ಯುವಕ ಈ ಬಗ್ಗೆ ದೂರು ನೀಡಿದ್ದಾನೆ. ತನ್ನ ಹೆಂಡತಿಯನ್ನು ತನ್ನ ಸ್ನೇಹಿತ ಪಪ್ಪು ಆತನ ಜೊತೆ ವಾಸಿಸುವಂತೆ ಒತ್ತಾಯಿಸಿ ಕರೆದುಕೊಂಡು ಹೋಗಿದ್ದಾನೆ. ಹೀಗಾಗಿ, ನಾನು ಅನಿವಾರ್ಯವಾಗಿ ಪಪ್ಪುವಿನ ಹೆಂಡತಿಯೊಂದಿಗೆ 4 ತಿಂಗಳಿನಿಂದ ವಾಸಿಸುತ್ತಿದ್ದೇನೆ ಎಂದು ಅನೂಪ್ ಹೇಳಿದ್ದಾನೆ. ಪಪ್ಪು ಇದಕ್ಕೆ ಪ್ರತಿಕ್ರಿಯಿಸಿದ್ದು, ಅನೂಪ್​ನ ಹೆಂಡತಿಯನ್ನು ಅವನ ಮನೆಗೆ ಕಳುಹಿಸಿದಾಗಲೆಲ್ಲಾ ಆತ ಆಕೆಗೆ ಹೊಡೆಯುತ್ತಾನೆ. ನನ್ನ ಹೆಂಡತಿ ಸವಿತಾ ಕೂಡ ಇದಕ್ಕೆ ಬೆಂಬಲ ನೀಡುತ್ತಿದ್ದಾಳೆ. ನನ್ನ ಹೆಂಡತಿಯೂ ಅನೂಪ್ ಹೆಂಡತಿಯೊಂದಿಗೆ ನಾನು ಕೋರ್ಟ್​ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾಳೆ. ಹೀಗಾಗಿ, ನಾನು ಮತ್ತು ಅನೂಪನ ಹೆಂಡತಿ 4 ತಿಂಗಳಿನಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಇದೆಂಥಾ ಹುಚ್ಚು ಪ್ರೀತಿ, ಶಿಕ್ಷಕಿ ಮೇಲೆ ಲವ್, ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ

ಅನೂಪ್ ಪತ್ನಿ ಲೋನಿ ಕತ್ರಾ ನಿವಾಸಿ. ತಾನು ಅನುಪ್ ಜೊತೆ ಎರಡು ವರ್ಷಗಳ ಹಿಂದೆ ಮದುವೆಯಾಗಿರುವುದಾಗಿ ಆಕೆ ಹೇಳಿದ್ದಾಳೆ. ಮದುವೆಯಾದ ಕೆಲವು ದಿನಗಳ ನಂತರ ಅನೂಪ್ ನನ್ನುನ್ನು ಹೊಡೆಯಲು ಪ್ರಾರಂಭಿಸಿದ. ಜಗಳ ಮತ್ತು ಹಲ್ಲೆಯ ನಂತರ ಅನೂಪ್ ನನ್ನನ್ನು ನನ್ನ ತಾಯಿಯ ಮನೆಯಲ್ಲಿ ಬಿಟ್ಟು ಹೋಗಿದ್ದಾಗಿ ಆಕೆ ಹೇಳಿದ್ದಾಳೆ. ಇದಾದ ನಂತರ, ನಾನು ಸುಮಾರು ಒಂದೂವರೆ ವರ್ಷಗಳ ಕಾಲ ನನ್ನ ತಾಯಿಯ ಮನೆಯಲ್ಲಿದ್ದೆ. ನಂತರ ನನ್ನ ತಾಯಿಯ ಮನೆಯವರು ನನ್ನ ಮನವೊಲಿಸಿ ಅತ್ತೆಯ ಮನೆಗೆ ಕಳುಹಿಸಿದರು. ನಾನು ನನ್ನ ತಾಯಿಯ ಮನೆಯಿಂದ ಬಂದಾಗಿನಿಂದ, ಅನೂಪ್ ಪಪ್ಪು ಜೊತೆ ವಾಸಿಸಲು ನನ್ನ ಮೇಲೆ ಒತ್ತಡ ಹೇರುತ್ತಿದ್ದಾನೆ ಎಂದು ಆಕೆ ಹೇಳಿದ್ದಾಳೆ. ನಾನು ಪಪ್ಪು ಜೊತೆ ಹೋಗಲು ಒಪ್ಪದಿದ್ದರೆ ನನ್ನನ್ನು ಕೊಲ್ಲುವುದಾಗಿ ಗಂಡ ಬೆದರಿಕೆ ಹಾಕುತ್ತಾನೆ. ನೀನು ಪಪ್ಪು ಜೊತೆ ಗಂಡ ಹೆಂಡತಿಯಂತೆ ಬದುಕಬೇಕು ಎಂದು ಹೆದರಿಸಿದ್ದಾನೆ ಎಂದು ಆಕೆ ಹೇಳಿದ್ದಾಳೆ.

ಇದನ್ನೂ ಓದಿ: ಜೈಪುರ: ಮನೆಯ ತಾರಸಿ ಮೇಲೆ ಡ್ರಮ್​​ನಲ್ಲಿತ್ತು ಮನೆ ಮಾಲೀಕನ ಶವ, ಹೆಂಡತಿ, ಮಕ್ಕಳು ನಾಪತ್ತೆ

ನಾನು ಮನೆಯಲ್ಲಿ ಇಲ್ಲದಿದ್ದಾಗ ಅನೂಪ್ ಆಗಾಗ ನನ್ನ ಮನೆಗೆ ಬರುತ್ತಿದ್ದ. ಈ ಮಧ್ಯೆ, ನನ್ನ ಹೆಂಡತಿ ಮತ್ತು ಅನೂಪ್ ನಡುವೆ ಆತ್ಮೀಯತೆ ಹೆಚ್ಚಾಯಿತು. ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಅನೂಪ್ ನನ್ನ ಹೆಂಡತಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗುತ್ತಿಲ್ಲ. ಇಬ್ಬರೂ 4 ತಿಂಗಳಿನಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ. ಇಬ್ಬರೂ ಕೋರ್ಟ್ ಮದುವೆಯನ್ನೂ ಮಾಡಿಕೊಂಡಿದ್ದಾರೆ. ನನ್ನ ಹೆಂಡತಿ ನನಗೆ 10 ಸಾವಿರ ರೂಪಾಯಿಗಳನ್ನು ನೀಡಿ, ನಾನು ಕೂಡ ಅನೂಪನ ಪತ್ನಿಯೊಂದಿಗೆ ಕೋರ್ಟ್ ಮದುವೆ ಮಾಡಿಕೊಳ್ಳಬೇಕೆಂದು ಒತ್ತಡ ಹಾಕುತ್ತಿದ್ದಾಳೆ ಎಂದು ಪಪ್ಪು ಆರೋಪಿಸಿದ್ದಾರೆ. ಹೀಗಾಗಿ, ಈ ಕತೆಗಳಲ್ಲಿ ಯಾವುದು ನಿಜ ಎಂಬುದು ಪೊಲೀಸರಿಗೂ ತಲೆನೋವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:43 pm, Wed, 20 August 25

S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?