Wedding Anniversary: ಊಟ ಮಾಡಿದ ನಂತರ ನನ್ನ ಬೆಡ್ರೂಮ್ಗೆ ಹೋಗಲು ಮೆಟ್ಟಿಲುಗಳನ್ನು ಏರಬೇಕು, ಅದಕ್ಕೇ ನಾನಿನ್ನೂ ಕಷ್ಟಪಡುತ್ತಿದ್ದೇನೆ. ಪ್ರತೀ ವರ್ಷ ನಾವು ಇಲ್ಲಿಗೆ ಬರುತ್ತೇವೆ ಎಂದು ಆಕೆ ಹೇಳಿದ್ದಾಳೆ, ಕೇಳಿಸಿಕೊಳ್ಳಿ. 66 ವರ್ಷ ನೀವು ದಾಂಪತ್ಯವನ್ನು ಹೇಗೆ ನಿಭಾಯಿಸಿದಿರಿ? ನನ್ನ ವಯಸ್ಸೇ 60 ಈಗಾಗಲೇ ನಾನು ನಾಲ್ಕು ಮದುವೆಗಳನ್ನು ಆದೆ. ನಿಮ್ಮ ಈ ಪ್ರೀತಿ ಮತ್ತು ಹವ್ಯಾಸವೇ (Love and Hobby) ನಿಮ್ಮ ಆಯಸ್ಸದ ಗುಟ್ಟು ಇರಬೇಕು… ಹೀಗೆ ನೆಟ್ಟಿಗರು ಈ ವಿಡಿಯೋದಡಿ ಪ್ರತಿಕ್ರಿಯಿಸಿ ಈ ಜೋಡಿಗೆ ಶುಭಹಾರೈಸಿದ್ದಾರೆ. ಅಜ್ಜನಿಗೆ 88, ಅಜ್ಜಿಗೆ 85. 66ನೇ ವಿವಾಹ ವಾರ್ಷಿಕೋತ್ಸವವನ್ನು ಇವರಿಬ್ಬರು ಮೌಂಟ್ ವಾಷಿಂಗ್ಟನ್ ಮೇಲೆ ಏರಿ ಆಚರಿಸಿಕೊಂಡಿದ್ದಾರೆ.
ಇದನ್ನೂ ಓದಿ : Viral Video: ‘ಹಸು ಸಾಕಿದ್ರೆ ಹೆಣ್ಣು ಕೊಡಲ್ಲ ಅಂತೀರಿ ಯಾಕೆ?’ ಪರವಿರೋಧ ಚರ್ಚೆ
ಇಳಿವಯಸ್ಸಿನಲ್ಲಿರುವ ಈ ದಂಪತಿ ನ್ಯೂ ಹ್ಯಾಂಪ್ಶೈರ್ನಲ್ಲಿ ಮೌಂಟ್ ವಾಷಿಂಗ್ಟನ್ ಏರುವ ವಿಡಿಯೋ ಇದೀಗ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ. 3 ದಿನಗಳ ಹಿಂದೆ ಪೋಸ್ಟ್ ಮಾಡಿದ ಈ ವಿಡಿಯೋ ಅನ್ನು ಈತನಕ 8 ಲಕ್ಷ ಜನರು ನೋಡಿದ್ದಾರೆ. 55,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಸಿದ್ದಾರೆ.
ಈ ಅಜ್ಜಿ ನಿಜಕ್ಕೂ ತುಂಬಾ ಸುಂದರವಾಗಿದ್ದಾರೆ ಎಂದಿದ್ದಾರೆ ಒಬ್ಬರು. ಎಂಥ ಅದ್ಭುತವಾದ ಜೋಡಿ ಇವರು ಎಂದಿದ್ದಾರೆ ಮತ್ತೊಬ್ಬರು. ನನಗೂ ಮತ್ತು ನನ್ನ ಪತಿಗೂ ಈ ವಿಡಿಯೋ ಸ್ಫೂರ್ತಿ ನೀಡಿತು ಎಂದಿದ್ದಾರೆ ಇನ್ನೊಬ್ಬರು. ಮದುವೆಯ ವಾರ್ಷಿಕೋತ್ಸವದ ಶುಭಾಷಯಗಳು ನಿಮಗೆ ಎಂದು ಅನೇಕರು ಹಾರೈಸಿದ್ದಾರೆ. ನಿಮ್ಮ ಆರೋಗ್ಯ, ಆತ್ಮವಿಶ್ವಾಸ ಮತ್ತು ಉತ್ಸಾಹ ನಮಗೆಲ್ಲರಿಗೂ ಮಾದರಿ ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ : Viral Video: ಮುಂಬೈ; ತನ್ನ ಬೆಕ್ಕನ್ನು ಬೆನ್ನಟ್ಟಿದ್ದಕ್ಕಾಗಿ ನೆರೆಮನೆಯ ನಾಯಿಯ ಮೇಲೆ ಎಸಿಡ್ ಎರಚಿದ ಮಹಿಳೆಯ ಬಂಧನ
ಆಧುನಿಕ ಕಾಲದಲ್ಲಿ ದಾಂಪತ್ಯವು ಅರ್ಥವನ್ನೇ ಕಳೆದುಕೊಂಡಿದೆ ನಿಮ್ಮನ್ನು ನೋಡಿ ನಾವೆಲ್ಲ ಪಾಠ ಕಲಿಯಬೇಕಿದೆ, ಆದರೆ ಅದು ಬಹುಶಃ ಕಷ್ಟವೆನ್ನಿಸುತ್ತದೆ ಎಂದಿದ್ದಾರೆ ಒಬ್ಬರು. ಆಕೆ 85 ಅಕ್ಕ 58ರಂತೆ ಕಾಣುತ್ತಿದ್ದಾರೆ, ಆತನೂ ಕೂಡ ಆಕರ್ಷಕವಾಗಿದ್ದಾನೆ ಎನ್ನುತ್ತಿದ್ದಾರೆ ಇನ್ನೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:57 pm, Sat, 19 August 23