
ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ (optical illusion) ಒಗಟಿನ ಚಿತ್ರಗಳನ್ನು ಬಿಡಿಸುತ್ತ ಕುಳಿತರೆ ಸಮಯ ಕಳೆದಿದ್ದೇ ತಿಳಿಯಲ್ಲ. ಈ ಟ್ರಿಕ್ಕಿ ಒಗಟಿನ ಚಿತ್ರ ಬಿಡಿಸುವುದು ಅಷ್ಟು ಸುಲಭವಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳತ್ತ ಒಮ್ಮೆ ಕಣ್ಣಾಯಿಸಿ. ಎರಡು ಚಿತ್ರಗಳ ನಡುವಿನ ಮೂರು ವ್ಯತ್ಯಾಸಗಳನ್ನು 35 ಸೆಕೆಂಡುಗಳ ಒಳಗೆ ಗುರುತಿಸಿದರೆ ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ಅತ್ಯುತ್ತಮ ಎಂದರ್ಥ.
ಈ ಆಪ್ಟಿಕಲ್ ಇಲ್ಯೂಷನ್‌ನಂತಹ ಒಗಟಿನ ಚಿತ್ರಗಳು ಟ್ರಿಕ್ಕಿಯಾಗಿರುವಂತೆ ಕಾಣುತ್ತದೆ. ಪುಟ್ಟ ಹುಡುಗನು ಸೋಫಾ ಮೇಲೆ ಮಲಗಿಕೊಂಡಿದ್ದಾನೆ. ಸಿಡಿಲಿಗೆ ಭಯ ಪಡುವಂತೆ ಈ ಪುಟ್ಟ ಹುಡುಗನ ಮುಖಭಾವವಿದೆ. ಆದರೆ ಈ ಚಿತ್ರಗಳಲ್ಲಿನ ಮೂರು ವ್ಯತ್ಯಾಸಗಳನ್ನು ಕಂಡುಹಿಡಿಯುವುದೇ ನಿಮ್ಮ ಮುಂದಿರುವ ಸವಾಲು ಆಗಿದೆ. ನೀವು 35 ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ನೋಡಿ.
ಇದನ್ನೂ ಓದಿ: ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್; ಈ ಮೂವರಲ್ಲಿ ಬಾಸ್ ಯಾರೆಂದು ಹೇಳಬಲ್ಲಿರಾ
ಇಲ್ಯೂಷನ್ ಚಿತ್ರಗಳಲ್ಲಿನ ಮೂರು ವ್ಯತ್ಯಾಸಗಳನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಸಮಯದ ಮಿತಿಯಿಂದಾಗಿ ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ಈ ಪುಟ್ಟ ಮುಖಭಾವಗಳು, ಅವನ ಕೈಗಳ ಬಳಿ ಇರುವ ವಿವರಗಳು, ಬಟ್ಟೆಗಳ ಆಕಾರ, ಕೋಣೆ ಅಥವಾ ಹಿನ್ನೆಲೆಯಲ್ಲಿ ಇರುವ ಸಣ್ಣ ವಸ್ತುಗಳನ್ನು ಪ್ರತ್ಯೇಕವಾಗಿ ನೋಡಿದರೆ ಮಾತ್ರ ಈಚಿತ್ರಗಳಲ್ಲಿನ ಮೂರು ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯ. ಈ ಕೆಳಗಿನ ಚಿತ್ರದಲ್ಲಿ ಮೂರು ವ್ಯತ್ಯಾಸಗಳನ್ನು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ