ಭಿಕ್ಷುಕ ಎಂದಾಕ್ಷಣ ನಮ್ಮ ಕಣ್ಣೆದುರು ಬರುವುದು ಅಸಹಾಯಕ ಮುಖ, ಹರಕಲು ಬಟ್ಟೆ, ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೆ ಗಲ್ಲಿ ಗಲ್ಲಿಗಳಿಗೆ ತೆರಳಿ ಬೇಡುವ ಕೈ. ಆದರೆ ಇಲ್ಲೊಂದು ಅಚ್ಚರಿ ಘಟನೆ ನಡೆದಿದ್ದು, ಭಿಕ್ಷುಕರು ಹೀಗೂ ಇರ್ತಾರಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಭಿಕ್ಷುಕ ಕುಟುಂಬವೊಂದು ಒಂದು ಕೋಟಿಗೂ ಅಧಿಕ ಹಣ ಖರ್ಚು ಮಾಡಿ, 20 ಸಾವಿರ ಮಂದಿಗೆ ಔತಣಕೂಟ ಏರ್ಪಡಿಸಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಅದೂ ಮದುವೆಗಲ್ಲ ಬದಲಾಗಿ ಅವರ ಅಜ್ಜಿ ತೀರಿಕೊಂಡು 40 ದಿನಗಳು ಕಳೆದಿದ್ದು ಅವರ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕುಟುಂಬವು ಕೇವಲ ಅತಿಥಿ ಮಾತ್ರವಲ್ಲ ಸುತ್ತಮುತ್ತಲಿನ ಎಲ್ಲಾ ಜನರನ್ನು ಔತಣಕೂಟಕ್ಕೆ ಕರೆದಿದ್ದರು. ಈ ಔತಣಕೂಟವು ಶ್ರೀಮಂತರ ಹುಬ್ಬೇರುವಂತೆ ಮಾಡಿತ್ತು. ಈ ಘಟನೆಯು ಗುಜ್ರಾನ್‌ವಾಲಾದ ರಾಹ್ವಾಲಿ ರೈಲು ನಿಲ್ದಾಣದ ಬಳಿ ನಡೆದಿದ್ದು, ಪಂಜಾಬ್‌ನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದಿದ್ದರು.250 ಕುರಿಗಳನ್ನು ಹತ್ಯೆ ಮಾಡಲಾಗಿತ್ತು, ವಿವಿಧ ಮಾಂಸ ಭಕ್ಷ್ಯಗಳನ್ನು ಸಿದ್ಧಪಡಿಸಲಾಗಿತ್ತು.
گوجرانوالہ میں جھگی واسوں کینگرہ برادری کے بچوں نے اپنی والدہ کے چالیسویں کی تقریبات کو تاریخی بنا دیا
گوجرانوالہ جھگی واسوں کے چھے بچوں نے اپنی والدہ کے چالیسویں کی تقریب پر سوا کروڑ روپے خرچ کیے، 120 سالہ سکینہ بی بی کے 40 ویں کی تقریب میں250 بکرے بھی ذبح کیے گئے۔ چالیسویں کی… pic.twitter.com/ceoevkgd9M
— 365 News (@365newsdotpk) November 15, 2024
ಕೆಲವರು ವ್ಯಂಗ್ಯ ಮಾಡಿದರೆ ಇನ್ನೂ ಕೆಲವರು ಸಂತೋಷ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಲ್ಲಿ, ಆಹಾರಕ್ಕಾಗಿ ಭಿಕ್ಷೆ ಬೇಡುವ ಕಲೆಯನ್ನು ಕಲಿತವರು ಎಂದಿಗೂ ಹಸಿವಿನಿಂದ ಇರಲು ಸಾಧ್ಯವಿಲ್ಲ ಎಂಬುದು ಸತ್ಯ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಈ ದುಂದುವೆಚ್ಚವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಭಿಕ್ಷುಕರೆಂದು ಹೇಳಿಕೊಳ್ಳುವ ಕುಟುಂಬವು ಇಂತಹ ಅದ್ದೂರಿ ಕಾರ್ಯಕ್ರಮವನ್ನು ಹೇಗೆ ಭರಿಸುತ್ತದೆ ಎಂದು ಹಲವರು ಪ್ರಶ್ನಿಸಿದ್ದಾರೆ. ಕೆಲವರು ಅವರ ಔದಾರ್ಯವನ್ನು ಶ್ಲಾಘಿಸಿದರೆ, ಇತರರು ತಮ್ಮ ಹೇಳಿಕೆಯ ಆರ್ಥಿಕ ಪರಿಸ್ಥಿತಿಯಲ್ಲಿನ ವ್ಯತ್ಯಾಸಗಳನ್ನು ಎತ್ತಿ ತೋರಿಸಿದರು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ