ಜೆಸಿಬಿ ಮೂಲಕ 20ಲಕ್ಷಕ್ಕೂ ಅಧಿಕ ಹಣದ ಸುರಿಮಳೆ: ಐಷಾರಾಮಿ ಮದುವೆಯ ವಿಡಿಯೋ ವೈರಲ್​​

ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದ ಅದ್ಧೂರಿ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೆಸಿಬಿಗಳ ಮೂಲಕ 20 ಲಕ್ಷ ರೂಪಾಯಿಗಳಿಗೂ ಅಧಿಕ ಹಣವನ್ನು ನವದಂಪತಿಗಳ ಮೇಲೆ ಸುರಿಯಲಾಗಿದೆ. ದುಡ್ಡು ಹೆಚ್ಚಾದರೆ ಬಡವರಿಗೆ ದಾನ ಮಾಡಿ ಎಂದು ಸಾಕಷ್ಟು ಜನರು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.

ಜೆಸಿಬಿ ಮೂಲಕ 20ಲಕ್ಷಕ್ಕೂ ಅಧಿಕ ಹಣದ  ಸುರಿಮಳೆ: ಐಷಾರಾಮಿ ಮದುವೆಯ ವಿಡಿಯೋ ವೈರಲ್​​
Follow us
ಅಕ್ಷತಾ ವರ್ಕಾಡಿ
|

Updated on: Nov 20, 2024 | 12:00 PM

ಉತ್ತರ ಪ್ರದೇಶದ ಸಿದ್ಧಾರ್ಥನಗರದ ಅದ್ಧೂರಿ ವಿವಾಹದ ವಿಡಿಯೋ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ಸಾಮಾನ್ಯವಾಗಿ ಮದುವೆಯಲ್ಲಿ ಹೂವಿನ ಸ್ವಾಗತ ಮಾಡಿದರೆ, ಈ ಮದುವೆಯಲ್ಲಿ ಕಂತು ಕಂತು ಹಣಗಳನ್ನು ಎಸೆದು ನವ ದಂಪತಿಗಳನ್ನು ಸ್ವಾಗತಿಸಲಾಗಿದೆ. ಸುಮಾರು 20ಲಕ್ಷಕ್ಕೂ ಅಧಿಕ ಹಣದ ಸರಿಮಳೆಯನ್ನು ಸುರಿಸಲಾಗಿದೆ ಎಂದು ವರದಿಯಾಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ವರ ಹಾಗೂ ವಧುವಿನ ಸಂಬಂಧಿಕರು ಜೆಸಿಬಿಗಳ ಮೇಲೆ ಹತ್ತಿ 100, 200 ಮತ್ತು 500 ರೂಪಾಯಿಗಳ ರಾಶಿ ರಾಶಿ ನೋಟುಗಳನ್ನು ಎಸೆಯುತ್ತಿರುವುದು ಸೆರೆಯಾಗಿದೆ. ವೀಡಿಯೊದಲ್ಲಿ, ಅತಿಥಿಗಳು ವರನನ್ನು ಹೊತ್ತ ರಥದ ಮೇಲೆ ನಗದು ಸುರಿಯಲು ಎರಡು ಜೆಸಿಬಿಗಳ ಮೇಲೆ ಹತ್ತುತ್ತಿರುವುದು ಮತ್ತು ಆಚರಣೆಯನ್ನು ವೀಕ್ಷಿಸಲು ಇತರ ಜನರು ಆವರಣದಲ್ಲಿ ಜಮಾಯಿಸಿರುವುದು. ಜನರು ತಮ್ಮ ಕಟ್ಟಡಗಳ ಟೆರೇಸ್ ಮತ್ತು ಬಾಲ್ಕನಿಯಲ್ಲಿ ನಗದು ನೋಟುಗಳನ್ನು ಸುರಿಯಲು ನಿಂತಿರುವುದು ಕಂಡುಬಂದಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಮಹಿಳಾ ರೋಗಿಗಳ ಮುಂದೆ ಹೆರಿಗೆ ವಾರ್ಡ್‌ನಲ್ಲಿ ಹಸ್ತಮೈಥುನ ಮಾಡುತ್ತಾ ವಿಕೃತಿ ಮೆರೆದ ವ್ಯಕ್ತಿ

entertainmenthers ಎಂಬ ಯೂಟ್ಯೂಬ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. ದುಡ್ಡು ಹೆಚ್ಚಾದರೆ ಬಡವರಿಗೆ ದಾನ ಮಾಡಿ ಎಂದು ಸಾಕಷ್ಟು ಜನರು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ