ಇಂದು ಫೆ, 22, 2022. ಸಾಮಾಜಿಕ ಜಾಲತಾಣ (Social Media) ಸೇರಿದಂತೆ ಎಲ್ಲೆಡೆ ಇಂದಿನ ದಿನಾಂಕದ ಬಗ್ಗೆಯೇ ಚರ್ಚೆ. ಯಾವ ಸ್ಪೆಷಲ್ ಡೇ ಇಲ್ಲದಿದ್ದರೂ ಜನ ಇಂದಿನ ದಿನಾಂಕವನ್ನು ವಿಶೇಷವಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ವಾಟ್ಸಾಪ್ (WhatsApp) , ಫೇಸ್ಬುಕ್(Facebook) ಎಲ್ಲೆಡೆ ಸ್ಟೇಟಸ್, ಸ್ಟೋರಿಗಳಲ್ಲಿ ಇಂದಿನ ದಿನಾಂಕದ್ದೇ ವಿಚಾರ. ಅರೇ ಇದೇನಪ್ಪಾ ಇವತ್ತಿನ ದಿನಾಂಕದ ಸ್ಪೆಷಾಲಿಟಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ. ಇಂದು 2022ರ ಫೆ.22 ವರ್ಷದ 2 ನೇ ತಿಂಗಳು. ಇದನ್ನು ಓದುವಾಗ 22-2-2022 ಎಂದಾಗುತ್ತದೆ. ಈ ರೀತಿ ಸೀರಿಯಲ್ ದಿನಾಂಕ ಪಡೆಯಲು ಇನ್ನು ಮುಂದಿನ ಶತಮಾನಕ್ಕೇ ಹೋಗಬೇಕು. ಯಾಕೆಂದರೆ 33-3-3033 ಬರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಇಂದಿನ ದಿನಾಂಕ ಜನರಲ್ಲಿ ಅಚ್ಚರಿ ಮೂಡಿಸಿದೆ.
ಪಾಲಿಂಡ್ರೋಮ್ ಮತ್ತು ಅಂಬಿಗ್ರಾಮ್ ದಿನ
ಸಾಮಾಜಿಕ ಜಾಲತಾಣಗಳಲ್ಲಿ ಇಂದಿನ ದಿನಾಂಕದ ಬಗ್ಗೆ ಸಿಕ್ಕಾಪಟ್ಟೆ ಪೋಸ್ಟ್ಗಳು ವೈರಲ್ ಆಗುತ್ತಿವೆ. ಈ ದಿನ ಪಾಲಿಂಡ್ರೋಮ್ ಮತ್ತು ಅಂಬಿಗ್ರಾಮ್ ಹೊಂದಿದ ವಿಶೇಷ ದಿನವಾಗಿದೆ. ಎರಡೂ ಕಡೆಯಿಂದ ಓದಿದಾಗಲು ಒಂದೇ ರೀತಿಯ ದಿನಾಂಕ ಸಿಗುತ್ತದೆ. ಇದನ್ನು ಮಿರರ್ ಡೇ ಎಂದೂ ಕರೆಯುತ್ತಾರೆ. ದಿ ಹೆರಾಲ್ಡ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ಶತಮಾನದಲ್ಲಿ ಅಂತಹ 11 ದಿನಾಂಕಗಳಿವೆ. ಇಂದು ಎಂಟನೆಯ ದಿನಾಂಕವಾಗಿದೆ. ಇನ್ನೂ ಕೊನೆಯ ಮೂರು 2080 ರ ದಶಕದಲ್ಲಿ ಬರುತ್ತವೆ ಎನ್ನಲಾಗಿದೆ.
ಜಪಾನೀಸ್ ಕ್ಯಾಲೆಂಡರ್ನಂತೆ ಬಳಸುವ DDMMYYY ರೂಪದಲ್ಲಿ ಬರೆಯಬಹುದಾದ ಇಂದಿನ ದಿನಾಂಕ ಬಗ್ಗೆ ಸಾಮಾಜಿಕ ಜಾಲತಾಣಗಳಮೆಸೇಜ್ಗಳಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ:
ಮೊದಲ ಬಾರಿ ವಿಮಾನದ ಕಾಕ್ಪಿಟ್ ಪ್ರವೇಶಿಸಿ ಅಚ್ಚರಿಗೊಂಡ 2 ವರ್ಷದ ಮಗು: ವಿಡಿಯೋ ವೈರಲ್