ಈ ರಾತ್ರಿ ಕಳೆದರೆ ವೀಕೆಂಡ್ ಬರಲಿದೆ. ಇದಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ವಾರಾಂತ್ಯದ ವೈಭವವನ್ನು ನೀವು ಆನಂದಿಸುತ್ತಿರುವಾಗ ನಾವು ನಿಮಗಾಗಿ ವಿಡಿಯೋವೊಂದನ್ನು ಹಂಚಿಕೊಳ್ಳುತ್ತಿದ್ದೇವೆ. ಈ ವಿಡಿಯೋ ನಿಮಗೆ ಸಂತೋಷನ್ನು ನೀಡಲಿದೆ. ಈ ವಿಡಿಯೋ ಕ್ಲಿಪ್ನಲ್ಲಿ ತನ್ನ ತಾಯಿಯ ಆಶ್ಚರ್ಯಕರ ಮದುವೆಯ ಪ್ರಸ್ತಾಪ(Proposal)ವನ್ನು 5 ವರ್ಷದ ಹುಡುಗ ವಿಡಿಯೋ ಮಾಡಿದ್ದು, ಈ ವೇಳೆ ಆತ ಯಾವ ರೀತಿ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಕೇಳಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾಲಕ ರಿಯಾಕ್ಷನ್ ವಿಡಿಯೋ ವೈರಲ್ (Video Viral) ಆಗುತ್ತಿದ್ದು, ನೆಟ್ಟಿಗರಿಗೆ ಸಖತ್ ಸಂತೋಷವನ್ನು ನೀಡುತ್ತಿದೆ. ಇದನ್ನೂ ಓದಿ: Viral Video: ಗಾಯಗೊಂಡ ತಂದೆಯನ್ನು ಆರೈಕೆ ಮಾಡಿದ ಅಂಬೆಗಾಲಿಡುವ ಮಗು! ನೆಟ್ಟಿಗರು ಫಿದಾ
ವೈರಲ್ ವಿಡಿಯೋವನ್ನು ಗಮನಿಸಿದಾಗ, ಮಹಿಳೆಯೊಬ್ಬಳು ತನ್ನ ಭಾವಿ ಪತಿಯಿಂದ ಮದುವೆಯ ಪ್ರಸ್ತಾಪವನ್ನು ಪಡೆಯುತ್ತಾಳೆ. ಅದರಂತೆ ಆ ವ್ಯಕ್ತಿ ಮೊಣಕಾಲಿನಲ್ಲಿ ಕುಳಿತುಕೊಂಡು ಪ್ರಪೋಸ್ ಮಾಡಲು ಮುಂದಾಗುತ್ತಾನೆ. ಈ ವೇಳೆ ಮಹಿಳೆಯ 5 ವರ್ಷದ ಮಗ ವಿಡಿಯೋ ಮಾಡಿದ್ದು, ಆರಂಭದಲ್ಲಿ ಆಕ್ಷನ್ ಎಂದು ಹೇಳುತ್ತಾನೆ. ನಂತರ ಕಟ್, ಕಟ್, ಕಟ್ ಹೇಳುತ್ತಾನೆ. ಈ ವೇಳೆ ಮಹಿಳೆ ಆಶ್ಚರ್ಯಗೊಂಡಳು. ಇದರ ಕೆಲವು ಸೆಕೆಂಡುಗಳಲ್ಲಿ ಮಹಿಳೆ ತನಗೆ ಪ್ರಪೊಸ್ ಮಾಡಿದ ವ್ಯಕ್ತಿಯನ್ನ ಆಲಂಗಿಸುತ್ತಾಳೆ, ನೋಡುನೋಡುತ್ತಲೇ ಆಕೆ ಚುಂಬನ ನೀಡಲು ಪ್ರಾರಂಭಿಸುತ್ತಾಳೆ. ಈ ವೇಳೆ ಬಾಲಕ ಓಹ್! ಸೋ ಸ್ವೀಟ್ ಎಂದು ಹೇಳುತ್ತಾನೆ.
ಇದನ್ನೂ ಓದಿ: Viral Video: ಗಾಯಗೊಂಡಿದ್ದ ಪಕ್ಷಿಯನ್ನು ಕಾಪಾಡಲು ಹೋಗಿ ತಾನೇ ದಾರುಣವಾಗಿ ಅಂತ್ಯ ಕಂಡ ಉದ್ಯಮಿ; ಶಾಕಿಂಗ್ ವಿಡಿಯೋ ವೈರಲ್
ಈ ವಿಡಿಯೋವನ್ನು ಗುಡ್ ನ್ಯೂಸ್ ಮೂವ್ಮೆಂಟ್ ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದೆ. ಆನ್ಲೈನ್ನಲ್ಲಿ ಹಂಚಿಕೊಂಡ ನಂತರ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ವಿಡಿಯೋ ನೋಡಿದ ನೆಟ್ಟಿಗರು, ”ಅಯ್ಯೋ”, ”ಓಹ್ ಅವನ ಕಾಮೆಂಟರಿ ತುಂಬಾ ಮುದ್ದಾಗಿದೆ” ಎಂದೆಲ್ಲಾ ಹಾಸ್ಯವಾಗಿ ಕಮೆಂಟ್ಗಳನ್ನು ಮಾಡಿದ್ದಾರೆ. ಇದನ್ನೂ ಓದಿ: Viral Video: ದೈತ್ಯಾಕಾರದ ಹೆಬ್ಬಾವನ್ನು ಭುಜದ ಮೇಲೆ ಹೊತ್ತು ತಿರುಗಾಡಿದ ವ್ಯಕ್ತಿ!
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ