Pumpwell flyover: ಮತ್ತೆ ಟ್ರೋಲ್​​ ಆಗುತ್ತಿದೆ ಪಂಪ್ವೆಲ್​ ಮೇಲ್ಸೇತುವೆ, ಸಖತ್​ ಮೀಮ್ಸ್​ ಇಲ್ಲಿದೆ ನೋಡಿ

|

Updated on: Jul 04, 2023 | 6:59 PM

ನೆನ್ನೆ ಸುರಿದ ಭಾರಿ ಮಳೆಗೆ ಮಂಗಳೂರಿನ ಹೃದಯ ಭಾಗವಾದ ಪಂಪ್ವೆಲ್​​ ಅಂಡರ್​ ಪಾಸ್​​ ಜಲಾವೃತಗೊಂಡಿದೆ, ಇದೀಗ ಈ ಬಗ್ಗೆ ಅನೇಕ ಮೀಮ್ಸ್​​ಗಳು ವೈರಲ್​ ಆಗುತ್ತಿದೆ.

Pumpwell flyover: ಮತ್ತೆ ಟ್ರೋಲ್​​ ಆಗುತ್ತಿದೆ ಪಂಪ್ವೆಲ್​ ಮೇಲ್ಸೇತುವೆ, ಸಖತ್​ ಮೀಮ್ಸ್​ ಇಲ್ಲಿದೆ ನೋಡಿ
ವೈರಲ್​​ ವೀಡಿಯೊ
Follow us on

ಕರ್ನಾಟಕದ ಅನೇಕ ಕಡೆ ಮಳೆರಾಯನ ಆರ್ಭಟ ಜೋರಾಗಿದೆ. ಮಳೆ ಬಂದರೆ ಬೆಂಗಳೂರು ಮಾತ್ರ ಮುಳುಗುತ್ತದೆ ಎಂದುಕೊಂಡಿದ್ದೇವು ಆದರೆ ಈಗ ಮಂಗಳೂರು ಕೂಡ ಮುಳುಗುವಂತೆ ದಕ್ಷಿಣ ಕನ್ನಡ ಸಂಸದರು ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪಂಪ್ವೆಲ್ ಮೇಲ್ಸೇತುವೆ ಬಗ್ಗೆ (Pumpwell flyover)  ಮೀಮ್ಸ್​​​​ ಮಾಡುತ್ತಿದ್ದಾರೆ. ಹೌದು ಪಂಪ್​ವೆಲ್​​ ಮಂಗಳೂರಿನ ಹೃದಯ ಭಾಗ, ಒಂದು ಕಡೆಯಿಂದ ಕೇರಳಕ್ಕೆ, ಇನ್ನೊಂದು ಕಡೆಯಿಂದ ಉಡುಪಿಗೆ, ಇನ್ನೂ ಅನೇಕ ರಾಜ್ಯ, ಜಿಲ್ಲೆಗಳಿಗೆ ಸಂಪರ್ಕ ಬೆಳೆಸುವ ಕೇಂದ್ರ ಪಂಪ್​​ವೆಲ್​,

ದಕ್ಷಿಣ ಕನ್ನಡದ ಸಂಸದರು ನಳಿನ್​​ ಕುಮಾರ್​​ ಕಟೀಲ್​​ ಅವರು ಈ ಜಿಲ್ಲೆಯಲ್ಲಿ ಮೂರನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ಈಗ ಬಿಜೆಪಿ ರಾಜ್ಯಾಧ್ಯಕ್ಷರು ಕೂಡ ಆಗಿದ್ದಾರೆ, ಈ ಹಿಂದೆ ಪಂಪ್ವೆಲ್​​ನಲ್ಲಿದ್ದ ಸುಂದರವಾದ ಕಲಶವನ್ನು ತೆಗೆದು ಮಂಗಳೂರಿನ ನಂತೂರು ಕಡೆಯಿಂದ ತಲಪಾಡಿಯ ಕಡೆಗೆ ಸಂಪರ್ಕ ಸಾಧಿಸುವ ಪಂಪ್ವೆಲ್ ಮೇಲ್ಸೇತುವೆ ನಿರ್ಮಾಣಕ್ಕೆ 10 ವರ್ಷ ತೆಗೆದುಕೊಂಡು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಾರೆ. ಇದನ್ನು ಭಾರೀ ಟ್ರೋಲ್​​ ಮಾಡಲಾಗಿತ್ತು, ನಂತರ ಮಂಗಳೂರಿನ ಜನರ ಬಾಯಿಯಲ್ಲಿ ಪಂಪ್ವೆಲ್​​ ಮೇಲ್ಸೇತುವೆ ಬಗ್ಗೆಯೇ ಮಾತು, ಇದಕ್ಕೆ ಒಂದು ಹಾಡು ಕೂಡ ರಚನೆಯಾಗಿತ್ತು. “ಪಂಪ್ ವೆಲ್​​ ಗ್​ ಬಲೆ ಪಂಪ್ ವೆಲ್​​ ಗ್ ಬಲೆ” ಎಂದು, ಇದು ಸಂಸದರಿಗೆ ಮುಜುಗರ ತಂದರು, ಈ ಯಾವುದಕ್ಕೂ ಕ್ಯಾರ್​​ ಎನ್ನದೇ ಕೊನೆಗೂ ಪಂಪ್ವೆಲ್​​ ಮೇಲ್ಸೇತುವೆ ಲೋಕರ್ಪಣೆ ಮಾಡಿದರು.

ಆದರೆ ಪಂಪ್ವೆಲ್​​ ಮೇಲ್ಸೇತುವೆ ಉದ್ಘಾಟನೆಗೊಂಡ ನಂತರ ಬಂದ ಮೊದಲ ಮಳೆಗೆ ಪಂಪ್ವೆಲ್ ಅಂಡರ್​ ಪಾಸ್​​​ ಜಲಾವೃತಗೊಂಡಿತ್ತು, ಮತ್ತೆ ಟ್ರೋಲ್​​ ಆಗಿತ್ತು. ಇದೀಗ ಪ್ರತಿ ಮಳೆಗೂ ಈ ಅಂಡರ್​ ಪಾಸ್ ನೀರಿನಿಂದ ತುಂಬುತ್ತದೆ, ಮತ್ತೆ ಅದೇ ಟ್ರೋಲ್, ಆದರೆ ಈ ಅವೈಜ್ಞಾನಿಕ ಕಾರ್ಯದಿಂದ ಸ್ಥಳೀಯ ಜನರು ಮತ್ತು ಬೆಂಗಳೂರು ಕಡೆಗೆ ಹೋಗುವ ಜನರಿಗೆ ತೊಂದರೆಯಾಗುತ್ತಿದೆ, ಇದರಿಂದ 3-4 ತಾಸುಗಳ ಕಾಲ ಇಲ್ಲಿ ಟ್ರಾಪಿಕ್​​ ಜಾವ್ ​ ಆಗುವ ಪರಿಸ್ಥಿತಿ ಬಂದಿದೆ. ಇದರ ಜತೆಗೆ ಸಂಸದರನ್ನು ಕೂಡ ಟ್ರೋಲ್​​ ಮಾಡುತ್ತಿದ್ದಾರೆ. ಈ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್​​ ಮಾಡುವ ಮೂಲಕ ಪಂಪ್ವೆಲ್​​ ಪರಿಸ್ಥಿತಿಯನ್ನು ಸಂಸದರಿಗೆ ತಿಳಿಸುತ್ತಿದ್ದಾರೆ.

ಇದನ್ನೂ ಓದಿ: Karnataka Rain: ಮಂಗಳೂರಿನಲ್ಲಿ ವರುಣನ ಆರ್ಭಟ; ಕರಾವಳಿ, ಮಲೆನಾಡಿನಲ್ಲಿ ಇಂದು ಆರೆಂಜ್ ಅಲರ್ಟ್​ ಘೋಷಣೆ

ಪಂಪ್ವೆಲ್ ಅಂಡರ್​ ಪಾಸ್​​​ ಸಖತ್​​ ಮೀಮ್ಸ್​​

ನೆನ್ನೆ (ಜುಲೈ 30) ಸುರಿದ ಭಾರೀ ಮಳೆಗೆ ಪಂಪ್ವೆಲ್ ಅಂಡರ್​ ಪಾಸ್​​ನಲ್ಲಿ ನೀರು ತುಂಬಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡಿದ್ದಾರೆ. ಇನ್ಸ್ಟಾಗ್ರಾಮ್​​ನಲ್ಲಿ ಕಂಬಳದ ಹಾಡನ್ನು ಬಳಸಿ ಮೀಮ್ಸ್​ ಮಾಡಿದ್ದಾರೆ. ಇಲ್ಲಿದೆ ನೋಡಿ

ಇನ್ನೊಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದು ನಮ್ಮ ಪಂಪ್ವೆಲ್​​ನ ಸದ್ಯದ ಪರಿಸ್ಥಿತಿ ಎಂದು ವೀಡಿಯೊ ಹಾಕಿ ಬರೆದುಕೊಂಡಿದ್ದಾರೆ.

ಇನ್ನೊಬ್ಬ ಇನ್ಸ್ಟಾಗ್ರಾಮ್ ಬಳಕೆದಾರ, ಇದು ಇತಿಹಾಸ ಪ್ರಸಿದ್ಧಿ ನಮ್ಮ ನಳಿನ್ ಅಣ್ಣನ ಬಹುದಿನದ ಕನಸು, ಪಂಪ್ವೆಲ್ ಉಚಿತ ಬೋಟಿಂಗ್ ವ್ಯವಸ್ಥೆ, ವಿ ಸೂ: ವಾಹನ ನಿಮ್ಮದೇ ಎಂದು ಟ್ರೋಲ್​​ ಮಾಡಿದ್ದಾರೆ.

ಫೇಸ್​​ಬುಕ್​​ನಲ್ಲೂ ಪಂಪ್ವೆಲ್​ ಟ್ರೋಲ್​​ ಆಗಿದ್ದು, ಇಲ್ಲಿ ಅನೇಕರು ವೀಡಿಯೊವನ್ನು ಹಂಚಿಕೊಂಡಿದ್ದಾರೆ, WTN ಮೀಡಿಯಾ ಎಂಬ ಪೇಜ್​​ನಲ್ಲಿ ಪಂಪ್ವೆಲ್ ಅಂಡರ್​ ಪಾಸ್​​ನಲ್ಲಿ ತುಂಬಿಕೊಂಡಿರುವ ನೀರಿನಲ್ಲಿ ​​ಈಜುತ್ತಿರುವುದನ್ನು ನೋಡಬಹುದು, ಇದನ್ನೂ ವೀಡಿಯೊ ಮಾಡಿ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ, ಇದು ಮಂಗಳೂರಿನ ಹೊಸ ಈಜುಕೊಳ ಎಂದು ಬರೆದುಕೊಂಡಿದ್ದಾರೆ.

 

ಒಬ್ಬ ಆಟೋ ಚಾಲಕ ತನ್ನ ರಿಕ್ಷಾವನ್ನು ನಿಲ್ಲಿಸಿ ಡ್ಯಾನ್ಸ್​​ ಮಾಡುವುದು ಕೂಡ ವೈರಲ್​​ ಆಗಿದೆ, ಒಟ್ಟಿನಲ್ಲಿ ಪಂಪ್ವೆಲ್ ಅಂಡರ್​ ಪಾಸ್​​ ಈಗ​​ ಹ್ಯಾಸಕ್ಕೆ ಕಾರಣವಾಗಿದೆ, ಇದು ಮಂಗಳೂರಿನ ಜನರಿಗೆ ಬೇಸರ ತಂದಿದೆ, ಇಂತಹ ಅವೈಜ್ಞಾನಿಕ ಕೆಲಸದಿಂದ ಜನರು ಕಷ್ಟ ಅನುಭವಿಸುವ ಸ್ಥಿತಿ ಬಂದಿದೆ ಎಂದು ಹೇಳಲಾಗಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:47 pm, Tue, 4 July 23