ದಾರಿಯಲ್ಲಿ ಮಹಿಳೆಗೆ ಸಿಕ್ತು 10 ಲಕ್ಷ ರೂ.ಹಣ ಇದ್ದ ಬ್ಯಾಗ್: ಬಳಿಕ ಆಕೆ ಮಾಡಿದ್ದೇನು?

ಪುಣೆಯ ನೈರ್ಮಲ್ಯ ಕಾರ್ಯಕರ್ತೆ ಅಂಜು ಮಾನೆ ಅವರ ಪ್ರಾಮಾಣಿಕತೆ ಎಲ್ಲರಿಗೂ ಮಾದರಿಯಾಗಿದೆ. ರಸ್ತೆಯಲ್ಲಿ ಸಿಕ್ಕ 10 ಲಕ್ಷ ರೂಪಾಯಿ ಹಣದ ಬ್ಯಾಗನ್ನು ಅವರು ಯಾವುದೇ ಅಳುಕಿಲ್ಲದೆ ಅದರ ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇಂತಹ ವಿರಳ ಪ್ರಾಮಾಣಿಕತೆಯು ಸಮಾಜದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.

ದಾರಿಯಲ್ಲಿ ಮಹಿಳೆಗೆ ಸಿಕ್ತು 10 ಲಕ್ಷ ರೂ.ಹಣ ಇದ್ದ ಬ್ಯಾಗ್: ಬಳಿಕ ಆಕೆ ಮಾಡಿದ್ದೇನು?
ವೈರಲ್​​ ಪೋಸ್ಟ್

Updated on: Nov 27, 2025 | 5:48 PM

ನೈರ್ಮಲ್ಯ ಕಾರ್ಯಕರ್ತೆಯೊಬ್ಬರು (sanitation worker) ಪ್ರಾಮಾಣಿಕತೆಗೆ ಮಾದರಿಯಾಗಿದ್ದಾರೆ. ಅವರು ಮಾಡಿದ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಈಗಿನ ಕಾಲದಲ್ಲಿ ರಸ್ತೆಯಲ್ಲಿ ಒಂದು ರೂಪಾಯಿ ಸಿಕ್ಕರು ಬಿಡುವುದಿಲ್ಲ. ಅಂತಹದರಲ್ಲಿ ಇಲ್ಲೊಬ್ಬರು ನೈರ್ಮಲ್ಯ ಕಾರ್ಯಕರ್ತೆ ತನಗೆ ಸಿಕ್ಕ ದೊಡ್ಡ ಮೊತ್ತ ಹಣವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾರೆ. ಇವರ ಪ್ರಾಮಾಣಿಕತೆ ಎಲ್ಲರಿಗೂ ಮಾದರಿಯಾಗಿದೆ ಎಂದು ನೆಟ್ಟಿಗರು ಸೋಶಿಯಲ್​​ ಮೀಡಿಯಾದಲ್ಲಿ ಹೇಳಿದ್ದಾರೆ. ಸ್ವಾರ್ಥ ಜನರ ನಡುವೆ ಇಂತಹ ವ್ಯಕ್ತಿಗಳು ಸಿಗುವುದು ತುಂಬಾ ಅಪರೂಪ ಎಂದು ನೆಟ್ಟಿಗರು ಕಮೆಂಟ್​​ ಮಾಡಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಗೆ ಸಿಕ್ಕ 10 ಲಕ್ಷ ರೂ ಹಣದ ಬ್ಯಾಗ್​​​​​ನ್ನು ವಾಪಸ್ ನೀಡಿದ್ದಾರೆ.

ನವೆಂಬರ್ 20 ರಂದು ಬೆಳಿಗ್ಗೆ 7 ಗಂಟೆಗೆ ಅಂಜು ಮಾನೆ ಎಂಬ ನೈರ್ಮಲ್ಯ ಕಾರ್ಯಕರ್ತೆ ಪುಣೆಯ ಸದಾಶಿವ ಪೇಠದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಬ್ಯಾಗ್​​ವೊಂದನ್ನು ದೂರುದಿಂದ ನೋಡಿದ್ದಾರೆ. ಅದರಲ್ಲಿ ಏನಿದೆ ಎಂದು ಆಸಕ್ತಿಯಿಂದ ಹತ್ತಿರ ಹೋಗಿ ನೋಡಿದಾಗ ಅವರಿಗೊಂದು ಅಚ್ಚರಿ ಕಾದಿತ್ತು. ಅದರಲ್ಲಿ ಕೆಲವೊಂದು ಔಷಧಿಗಳ ಜತೆಗೆ 10 ಲಕ್ಷ ರೂ. ಹಣ ಇತ್ತು. ಮಹಿಳೆ ತಕ್ಷಣ ಸಂಬಂಧಪಟ್ಟವರಿಗೆ ವಾಪಸ್ ನೀಡಿದ್ದಾರೆ. ಈ ಬಗ್ಗೆ ಮಹಿಳೆ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. “ನಾನು ಪ್ರತಿದಿನ ಈ ಬೀದಿಯಲ್ಲೇ ಕೆಲಸ ಮಾಡುವುದು, ಮನೆಯೊಂದರ ಬಳಿ ಈ ಬ್ಯಾಗ್​​ ಸಿಕ್ಕಿದೆ. ತಕ್ಷಣ ನನಗೆ ತಿಳಿದ ಮನೆಯವರ ಬಳಿ, ಇದು ನಿಮ್ಮ ಬ್ಯಾಗಾ ಎಂದು ಕೇಳಿದೆ. ಅದರಲ್ಲಿ ಒಬ್ಬರು ಈ ಬ್ಯಾಗ್​​​​ ನನ್ನದು ಎಂದು ಹೇಳಿದ್ದಾರೆ. ಇದು ಅವರದೇ ಬ್ಯಾಗ್​​ ಎಂದು ದೃಢಪಡಿಸಿದ ನಂತರ ಅವರಿಗೆ ಬ್ಯಾಗ್​​​ನ್ನು ವಾಪಸ್ ನೀಡಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಸ್ತೆ ಮಧ್ಯೆ ಪ್ಯಾಂಟ್‌ ಬಿಚ್ಚಿ ಗುಪ್ತಾಂಗ ತೋರಿಸಿದ ಯುವಕನಿಗೆ ಪೊರಕೆಯಿಂದ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ

ವೈರಲ್​​ ಪೋಸ್ಟ್​​ :

ಇದೀಗ ಈ ಮಹಿಳೆಯ ಪ್ರಾಮಾಣಿಕತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ವ್ಯಕ್ತಿಗಳಿಂದ ಈ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯ ಎಂದು ಸೋಶಿಯಲ್​​​ ಮೀಡಿಯಾದಲ್ಲಿ ಹೇಳಿದ್ದಾರೆ. ನೆಟ್ಟಿಗರು ಮಹಿಳೆ ಕಾರ್ಯಕ್ಕೆ ಅವರನ್ನು ಅಭಿನಂದಿಸುವಂತೆ ಹೇಳಿದ್ದಾರೆ. ಬ್ಯಾಗ್​​ ವಾಪಸ್ ನೀಡಿದಕ್ಕೆ ಆ ಬ್ಯಾಗ್​​ನ ಮಾಲೀಕ ಅವರಿಗೆ ಸೀರೆ ಹಾಗು ಒಂದಿಷ್ಟು ಹಣವನ್ನು ನೀಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ