Video: ಶವರ್ ಇಲ್ಲದೇನೇ ಈ ಪುಟಾಣಿ ಸ್ನಾನ ಮಾಡುವ ರೀತಿ ನೋಡಿ
ಜೀವನದಲ್ಲಿ ಖುಷಿಯಾಗಿರುವುದು ಮುಖ್ಯ. ಹೀಗಾಗಿ ಸಂತೋಷವಾಗಿರಲೆಂದು ನಾನಾ ರೀತಿಯ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಆದರೆ ಈ ಪುಟಾಣಿ ಕಂಡುಕೊಂಡ ಮಾರ್ಗ ನೋಡಿದ್ರೆ ನೀವು ಶಾಕ್ ಆಗ್ತೀರಾ. ಪುಟ್ಟ ಹುಡುಗನೊಬ್ಬ ಸ್ನಾನ ಮಾಡುತ್ತಿದ್ದ ಆ ಸಮಯದಲ್ಲೂ ತಾನು ಖುಷಿಯಾಗಿರಲೆಂದು ಮಾಡಿದ ಉಪಾಯದ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಕೆಲವರ ಬದುಕಿನಲ್ಲಿ ಹಣ, ಶ್ರೀಮಂತಿಕೆಯಿದ್ದು ಖುಷಿ (happiness) ಅನ್ನೋದೆ ಇರಲ್ಲ. ಆದರೆ ಇದ್ಯಾವುದು ಇಲ್ಲದೇ ಕೆಲವರು ಬದುಕಿನಲ್ಲಿ ಸಂತೋಷದಿಂದಿರುವುದು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಇದಕ್ಕೆ ಈ ಪುಟಾಣಿಯೇ (little kids) ಸಾಕ್ಷಿ. ಹೌದು ಮನೆಯ ಹೊರಭಾಗದಲ್ಲಿ ಸ್ನಾನ ಮಾಡಿದ್ದು ಅದರಲ್ಲೇ ಖುಷಿಯನ್ನು ಕಂಡಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.
@shutupari ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟಾಣಿಯೊಂದು ಮನೆಯ ಹೊರಭಾಗದಲ್ಲಿ ಸ್ನಾನ ಮಾಡಲು ಮುಂದಾಗಿದೆ. ಈ ವೇಳೆ ಪುಟಾಣಿ ನೀರನ್ನು ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸಿ ಅದನ್ನು ಮೇಲಕ್ಕೆ ನೇತುಹಾಕಿ, ಅದರ ಕೆಳಭಾಗದಲ್ಲಿ ನಿಂತು ಸ್ನಾನ ಮಾಡುತ್ತಿರುವುದು ನೋಡಬಹುದು. ಮೈಗೆ ಸೋಪ್ ಹಚ್ಚಿಕೊಂಡು, ಪೊರಕೆಯಿಂದ ಪ್ಲಾಸ್ಟಿಕ್ ಚೀಲದಲ್ಲಿ ರಂಧ್ರ ಮಾಡಿ ಸ್ನಾನವನ್ನು ಆನಂದಿಸುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
When there is No shower 😅 pic.twitter.com/XLbV6k2IQl
— 𝓐𝓻𝓲𝓪𝓷𝓪🦋 (@shutupari_) November 25, 2025
ಇದನ್ನೂ ಓದಿ:ಕೆಸರು ಗದ್ದೆಯಲ್ಲಿ ಈಜಾಡುತ್ತಿರುವ ಪುಟಾಣಿಗಳು; ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಇದುವರೆಗೆ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮತ್ತೆ ಮಕ್ಕಳಾಗಬಹುದೇ? ನನಗೆ ಆ ದಿನಗಳು ತುಂಬಾ ನೆನಪಾಗುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ಕಡಿಮೆ ಬಜೆಟ್‌ನಲ್ಲಿ ಶವರ್ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ಇದೇ ನೋಡಿ ಬುದ್ಧಿವಂತಿಕೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




