ಕುವೈತ್: ದುಬೈ ರಾಜಕುಮಾರಿ ಶೈಖಾ ಮಹ್ರಾ ಅವರು ತಮ್ಮ ಪತಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ‘ವಿವಾಹ ವಿಚ್ಛೇದನ’ ನೀಡಿರುವುದು ಎಲ್ಲೆಡೆ ಭಾರಿ ಸುದ್ದಿಯಾಗಿತ್ತು. ಇದೀಗ ಅಂತದ್ದೇ ಘಟನೆ ನಡೆದಿದ್ದು, ಆದರೆ ಇಲ್ಲೊಬ್ಬಳು ಯುವತಿ ಮದುವೆಯಾದ ಮೂರೇ ನಿಮಿಷಕ್ಕೆ ಮದುವೆ ಮಂಟಪದಲ್ಲಿ ತನ್ನ ಪತಿಗೆ ತಲಾಖ್ ನೀಡಿದ್ದಾಳೆ. ಸದ್ಯ ಈ ಘಟನೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆ ಕುವೈತ್‌ನಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಮದುವೆ ಸಮಾರಂಭದ ವೇಳೆ ವಧು ಎಡವಿ ಬಿದ್ದಿದ್ದು, ಈ ಸಮಯದಲ್ಲಿ ವರ ತನ್ನ ಕುಟುಂಬದಲ್ಲಿ ಸಮ್ಮುಖದಲ್ಲಿ ಆಕೆಯನ್ನು ಹೀಯಾಳಿಸಿದ್ದಾನೆ. ಎಲ್ಲರ ಮುಂದೆ ಅವಮಾನಕ್ಕೊಳಗಾದ ಯುವತಿ ಅದೇ ಮಂಟಪದಲ್ಲಿ ತನ್ನ ಪತಿಗೆ ತಲಾಖ್ ನೀಡಿ ಅಲ್ಲಿಂದ ಓಡಿ ಹೋಗಿದ್ದಾಳೆ.
ಇದನ್ನೂ ಓದಿ: ಹೀರೋನಂತೆ ಗುಂಡಿನ ದಾಳಿಯನ್ನು ಮೆಟ್ಟಿ ನಿಂತ ಡೊನಾಲ್ಡ್ ಟ್ರಂಪ್
ಇಸ್ಲಾಮಿಕ್ ಕಾನೂನಿನಲ್ಲಿ, ತ್ವರಿತ ವಿಚ್ಛೇದನದ ಪ್ರಕ್ರಿಯೆಯನ್ನು “ತಲಾಕ್-ಎ-ಬಿದ್ದತ್” ಎಂದು ಕರೆಯಲಾಗುತ್ತದೆ. ಅಲ್ಲಿ ಪತಿ ತಕ್ಷಣವೇ ಮದುವೆಯನ್ನು ರದ್ದು ಮಾಡಲು “ತಲಾಕ್” ಅನ್ನು ಮೂರು ಬಾರಿ ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪತ್ನಿಯರು ತಲಾಖ್ ನೀಡುವ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಸದ್ಯ ಈ ಮೂರು ನಿಮಿಷದ ಮದುವೆ ಹಾಗೂ ವಿವಾಹ ವಿಚ್ಛೇದನ ಇತಿಹಾಸದಲ್ಲೇ ಅತ್ಯಂತ ಚಿಕ್ಕ ಮದುವೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ