Video: ಹೀರೋನಂತೆ ಗುಂಡಿನ ದಾಳಿಯನ್ನು ಮೆಟ್ಟಿ ನಿಂತ ಡೊನಾಲ್ಡ್‌ ಟ್ರಂಪ್

ಇತ್ತೀಚಿನ ದಿನಗಳಲ್ಲಿ AI ತಂತ್ರಜ್ಞಾನ ಬಳಸಿ ಸೆಲಬ್ರಿಟಿಗಳ ಹಲವಾರು ಭಿನ್ನ ವಿಭಿನ್ನ ವಿಡಿಯೋ, ಫೋಟೋಗಳನ್ನು ರಚಿಸಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಇದೀಗ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ AI ವಿಡಿಯೋವೊಂದು ವೈರಲ್‌ ಆಗಿದ್ದು, ದಿ ಮ್ಯಾಟ್ರಿಕ್ಸ್‌ ಮೂವಿಯ ಈ ಸ್ಪೂಫ್‌ ದೃಶ್ಯದಲ್ಲಿ ಶತ್ರುಗಳ ಗುಂಡಿನ ದಾಳಿಯನ್ನು ಟ್ರಂಪ್‌ ಅವರು ಹೇಗೆ ಮೆಟ್ಟಿ ನಿಂತರು ಎಂಬುದನ್ನು ತೋರಿಸಲಾಗಿದೆ.

Video: ಹೀರೋನಂತೆ ಗುಂಡಿನ ದಾಳಿಯನ್ನು ಮೆಟ್ಟಿ ನಿಂತ ಡೊನಾಲ್ಡ್‌ ಟ್ರಂಪ್
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 22, 2024 | 6:26 PM

ಅಮೇರಿಕದ ಪೆನ್ಸಿಲ್ವೇನಿಯಾದ ಬಟ್ಲರ್‌ ಪ್ರದೇಶದಲ್ಲಿ ಜುಲೈ‌ 13 ಭಾನುವಾರದಂದು ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಟ್ರಂಪ್‌ ಅವರ ಬಲ ಕಿವಿಗೆ ಗಂಭೀರವಾದ ಗಾಯವಾಗಿತ್ತು. ಇದೀಗ ಡೊನಾಲ್ಡ್‌ ಟ್ರಂಪ್‌ ಅವರು ಹೀರೋನಂತೆ ಶತ್ರುಗಳ ಗುಂಡಿನ ದಾಳಿಯನ್ನು ಮೆಟ್ಟಿ ನಿಲ್ಲುವ AI ರಚಿತ ವಿಡಿಯೋವೊಂದು ಭಾರೀ ವೈರಲ್‌ ಅಗುತ್ತಿದ್ದು, ಎಲೋನ್‌ ಮಸ್ಕ್‌ ಕೂಡಾ ಈ ವಿಡಿಯೋಗೆ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ.

AI ತಂತ್ರಜ್ಞಾನದ ಸಹಾಯದಿಂದ 1999 ರ ಹಾಲಿವುಡ್ ‌ ಹಿಟ್‌ ಮೂವಿ “ದಿ ಮ್ಯಾಟ್ರಿಕ್ಸ್”‌ನ ಸ್ಪೂಫ್‌ ವಿಡಿಯೋವನ್ನು ರಚಿಸಲಾಗಿದ್ದು, ಈ ವಿಡಿಯೋದಲ್ಲಿ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶತ್ರುಗಳ ದಾಳಿಯನ್ನು ಮೆಟ್ಟಿ ನಿಲ್ಲುವ ದೃಶ್ಯವನ್ನು ಕಾಣಬಹುದು. ಈ ಕುರಿತ ಪೋಸ್ಟ್‌ ಒಂದನ್ನು phsjr1 ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಈ ಪೋಸ್ಟ್‌ ಅನ್ನು ಟೆಕ್‌ ಬಿಲಿಯನೇರ್‌ ಎಲೋನ್‌ ಮಸ್ಕ್‌ ರಿಪೋಸ್ಟ್‌ ಮಾಡಿದ್ದು, “ಇದು ಇಲ್ಲಿಯವರೆಗಿನ ಅತ್ಯುತ್ತಮ AI ವಿಡಿಯೋ ಆಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ

AI ವಿಡಿಯೋದಲ್ಲಿ ದಿ ಮ್ಯಾಟ್ರಿಕ್ಸ್‌ ಸಿನೆಮಾದ ನಾಯಕ ನಿಯೋನಂತೆ ಡೊನಾಲ್ಡ್‌ ಟ್ರಂಪ್‌ ಅವರನ್ನು ತೋರಿಸಲಾಗಿದೆ. ಹಾಗೂ ಜೋ ಬಿಡನ್‌, ಬರಾಕ್‌ ಒಬಾಮಾ ಮತ್ತು ಫೆಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಅವರನ್ನು ವಿಲನ್‌ ಏಜೆಂಟ್‌ಗಳಂತೆ ತೋರಿಸಲಾಗಿದೆ. ಈ ವೈರಲ್‌ ವಿಡಿಯೋದಲ್ಲಿ ಡೊನಾಲ್ಡ್‌ ಟ್ರಂಪ್‌ ಹಿರೋನಂತೆ ಶತ್ರುಗಳ ದುಂಡಿನ ದಾಳಿಯಿಂದ ಪಾರಾಗುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಹಣೆಯಲ್ಲಿ ಕುಂಕುಮ, ಕಣ್ಣಿಗೆ ಕೂಲಿಂಗ್‌ ಗ್ಲಾಸ್, AI ಫ್ಯಾಶನ್‌ ಶೋನಲ್ಲಿ ಮೋದಿ ರ‍್ಯಾಂಪ್ ವಾಕ್‌

ಜುಲೈ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 148 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼದಿ ಮ್ಯಾಟ್ರಿಕ್ಸ್‌ ಮೂವಿಗಿಂತ ಈ ಎಐ ವಿಡಿಯೋ ಬಹಳ ಥ್ರಿಲ್‌ ಆಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಜವಾಗಿಯೂ ಮೊನ್ನೆ ಗುಂಡಿನ ದಾಳಿ ನಡೆದಾಗ ಹೀರೋ ನಿಯೋನಂತೆಯೇ ಟ್ರಂಪ್‌ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ