AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹಣೆಯಲ್ಲಿ ಕುಂಕುಮ, ಕಣ್ಣಿಗೆ ಕೂಲಿಂಗ್‌ ಗ್ಲಾಸ್, AI ಫ್ಯಾಶನ್‌ ಶೋನಲ್ಲಿ ಮೋದಿ ರ‍್ಯಾಂಪ್ ವಾಕ್‌

ಫ್ಯಾಶನ್‌ ಶೋನಲ್ಲಿ ವಿಶ್ವ ನಾಯಕರು ಸ್ಟೈಲ್‌ ಆಗಿ ರ‍್ಯಾಂಪ್ ವಾಕ್‌ ಮಾಡಿದ್ರೆ ಹೇಗಿರುತ್ತದೆ ಎನ್ನುವ ಬಗ್ಗೆ ಟೆಕ್‌ ಬಿಲಿಯನೆರ್‌ ಎಲೋನ್‌ ಮಸ್ಕ್‌ ಸೋಷಿಯಲ್‌ ಮೀಡಿಯಾದಲ್ಲಿ ಒಂದು ವಿಡಿಯೋವೊವನ್ನು ಹಂಚಿಕೊಂಡಿದ್ದಾರೆ. ಈ AI ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜೋ ಬೈಡನ್, ಒಬಾಮ‌ ಸೇರಿದಂತೆ ವಿಶ್ವ ನಾಯಕರು ಫ್ಯಾಶನ್‌ ಶೋನಲ್ಲಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ರೆ ಹೇಗಿರುತ್ತೆ ಎಂಬುದನ್ನು ತೋರಿಸಲಾಗಿದೆ.

Video: ಹಣೆಯಲ್ಲಿ ಕುಂಕುಮ, ಕಣ್ಣಿಗೆ ಕೂಲಿಂಗ್‌ ಗ್ಲಾಸ್, AI ಫ್ಯಾಶನ್‌ ಶೋನಲ್ಲಿ ಮೋದಿ ರ‍್ಯಾಂಪ್ ವಾಕ್‌
ವೈರಲ್​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 22, 2024 | 5:56 PM

Share

ಈ ಡಿಜಿಟಲ್‌ ಯುಗದಲ್ಲಿ ಆರ್ಟಿಫೀಷಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ) ಬಹಳ ಸದ್ದು ಮಾಡುತ್ತಿದೆ. ಹಲವರು AI ತಂತ್ರಜ್ಞಾನದ ಸಹಾಯದಿಂದ ರಾಜಕೀಯ ನಾಯಕರು, ಕ್ರಿಕೆಟಿಗರು, ಸಿನಿಮಾ ತಾರೆಯರು ಸೇರಿದಂತೆ ಸೆಲೆಬ್ರಿಟಿಗಳ ಫೋಟೋಗಳನ್ನು ಭಿನ್ನ ವಿಭಿನ್ನವಾಗಿ ರಚಿಸಿ, ಅಥವಾ ವಿಡಿಯೋ ಮಾಡಿ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಇದೀಗ ಅದೇ ರೀತಿ ಟೆಕ್‌ ಬಿಲಿಯನೆರ್‌ ಎಲೋನ್‌ ಮಸ್ಕ್‌ ಕೂಡಾ ವಿಶ್ವ ನಾಯಕರುಗಳು ಫ್ಯಾಶನ್‌ ಶೋನಲ್ಲಿ ಹೆಜ್ಜೆ ಹಾಕಿದ್ರೆ ಹೇಗಿರುತ್ತೆ ಎಂಬುದನ್ನು ತೋರಿಸುವ ಚಂದದ ವಿಡಿಯೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ AI ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜೋ ಬೈಡನ್‌ ಸೇರಿದಂತೆ ವಿಶ್ವ ನಾಯಕರು ಫ್ಯಾಶನ್‌ ಶೋನಲ್ಲಿ ಹೆಜ್ಜೆ ಹಾಕಿದ್ರೆ ಹೇಗಿರುತ್ತೆ ಎಂಬುದನ್ನು ತೋರಿಸಲಾಗಿದೆ.

ಎಲೋನ್‌ ಮಸ್ಕ್‌ (elonmusk) ತಮ್ಮ ಅಧೀಕೃತ ಎಕ್ಸ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಫ್ಯೂಚರಿಸ್ಟಿಕ್‌ ಉಡುಗೆಯಲ್ಲಿ ಕಮಲಾ ಹ್ಯಾರಿಸ್‌, ಬರಕ್‌ ಒಬಾಮಾ, ಪೋಪ್‌ ಪ್ರಾನ್ಸಿಸ್‌, ಉತ್ತರ ಕೊರಿಯಾದ ಕಿಮ್‌ ಜಾಂಗ್‌ ಉನ್‌, ಪ್ರಧಾನಿ ನರೇಂದ್ರ ಮೋದಿ, ಎಲಾನ್‌ ಮಸ್ಕ್‌, ಬಿಲ್‌ ಗೇಟ್ಸ್‌ ಸೇರಿದಂತೆ ಹಲವು ವಿಶ್ವ ನಾಯಕರು ರ್ಯಾಂಪ್‌ ಮೇಲೆ ಸ್ಟೈಲ್‌ ಆಗಿ ಹೆಜ್ಜೆ ಹಾಕಿದ್ರೆ ಹೇಗಿರುತ್ತೆ ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ವೈರಲ್​​ ವಿಡಿಯೋ:

ವೈರಲ್‌ ವಿಡಿಯೋದಲ್ಲಿ ಮೊದಲಿಗೆ ಪೋಪ್‌ ಪ್ರಾನ್ಸಿಸ್‌ ಅವರು ಬಿಳಿ ಬಣ್ಣದ ಪಫರ್‌ ಜಾಕೆಟ್‌ ಧರಿಸಿ ರ್ಯಾಂಪ್‌ ಮೇಲೆ ಹೆಜ್ಜೆ ಹಾಕಿದ್ರೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಆಫ್‌ ಶೋಲ್ಡರ್‌ ಲೂಯಿ ವಿಟನ್‌ ಉಡುಪು ಧರಿಸಿ ಮಿಂಚಿದರು. ಇನ್ನೂ ಪ್ರಧಾನಿ ಮೋದಿ ಹಣೆಗೆ ಕುಂಕುಮ, ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಹಾಕಿ, ಸ್ಟೈಲಿಶ್‌ ಬಟ್ಟೆಯನ್ನು ತೊಟ್ಟು ರ್ಯಾಂಪ್‌ ಮೇಲೆ ಹೆಜ್ಜೆ ಹಾಕುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ನಾಳೆಯಿಂದ ಸ್ಕೂಲ್‌ಗೆ ರಜೆ, ಅಮ್ಮನಿಗೆ ಸಹಾಯ ಮಾಡ್ಬೇಕು, ಈ ಪುಟ್ಟಣ್ಣನಿಗೆ ಎಷ್ಟೊಂದು ಜವಾಬ್ದಾರಿ

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 59.1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ವಿಡಿಯೋವಂತೂ ತುಂಬಾ ಚೆನ್ನಾಗಿದೆ, ನನ್ಗೆ ಮೋದಿಯವರ ಲುಕ್‌ ತುಂಬಾನೇ ಇಷ್ಟವಾಯಿತುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ವಿಡಿಯೋಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್