AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಾಳೆಯಿಂದ ಸ್ಕೂಲ್‌ಗೆ ರಜೆ, ಅಮ್ಮನಿಗೆ ಸಹಾಯ ಮಾಡ್ಬೇಕು, ಈ ಪುಟ್ಟಣ್ಣನಿಗೆ ಎಷ್ಟೊಂದು ಜವಾಬ್ದಾರಿ

ಬಡತನ, ಹೆಗಲ ಮೇಲಿನ ಜವಬ್ದಾರಿ ಮಷ್ಯನಿಗೆ ಸಣ್ಣ ವಯಸ್ಸಿನಲ್ಲಿಯೇ ಬದುಕಿನ ಪಾಠವನ್ನು ಕಲಿಸುತ್ತದೆ. ಇದಕ್ಕೆ ಉತ್ತಮ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಬಾಲಕನೊಬ್ಬ ಶಾಲೆಗೆ ರಜಾ ಸಿಕ್ಕರೂ, ಆಟವಾಡುತ್ತಾ ಸಮಯ ವ್ಯರ್ಥ ಮಾಡದೆ ಮನೆಯವರಿಗೆ ಸಹಾಯವಾಗ್ಲಿ ಎಂದು ಕೀ ಚೈನ್‌ಗಳನ್ನು ಮಾರಿ ನಾಲ್ಕು ಕಾಸು ಸಂಪಾದನೆ ಮಾಡುತ್ತಿದ್ದಾನೆ. ಈ ಬಾಲಕನ ಪ್ರಬುದ್ಧ ಮಾತುಗಳು ನಿಜಕ್ಕೂ ಸ್ಫೂರ್ತಿದಾಯಕ.

Viral Video: ನಾಳೆಯಿಂದ ಸ್ಕೂಲ್‌ಗೆ ರಜೆ, ಅಮ್ಮನಿಗೆ ಸಹಾಯ ಮಾಡ್ಬೇಕು, ಈ ಪುಟ್ಟಣ್ಣನಿಗೆ ಎಷ್ಟೊಂದು ಜವಾಬ್ದಾರಿ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 22, 2024 | 2:58 PM

Share

ಬಡತನ, ಹಸಿವು, ಹೆಗಲ ಮೇಲಿನ ಜವಬ್ದಾರಿಗಳು ಸಣ್ಣ ವಯಸ್ಸಿನಲ್ಲಿಯೇ ಮನುಷ್ಯನಿಗೆ ಬದುಕಿ ಪಾಠ, ಜವಬ್ದಾರಿಯನ್ನು ಕಲಿಸುತ್ತೆ ಅಂತ ಹೇಳುವ ಮಾತೊಂದಿದೆ. ಈ ಮಾತು ಅಕ್ಷರಶಃ ನಿಜ ಅಲ್ವಾ. ಸಣ್ಣ ವಯಸ್ಸಿನಲ್ಲಿಯೇ ಜವಬ್ದಾರಿಯನ್ನು ಹೊತ್ತು ತಮ್ಮ ಸಂತೋಷವನ್ನೆಲ್ಲಾ ಬದುಕಿಟ್ಟು ಕುಟುಂಬಕ್ಕಾಗಿ ಶ್ರಮಿಸಿದ ಅದೆಷ್ಟೋ ಜನರಿದ್ದಾರೆ. ಅದೇ ರೀತಿ ಇಲ್ಲೊಬ್ಬ ಬಾಲಕ ಕೂಡಾ ರಜಾ ದಿನವನ್ನು ಆಡುತ್ತಾ ವ್ಯರ್ಥ ಮಾಡದೇ ಮನೆಯವರಿಗೆ ಸಹಾಯವಾಗಲಿ ಎಂದು ಕೀ ಚೈನ್‌ಗಳನ್ನು ಮಾರಿ ನಾಲ್ಕು ಕಾಸು ಸಂಪಾದನೆ ಮಾಡುತ್ತಿದ್ದಾನೆ. ಈ ಬಾಲಕನ ಪ್ರಬುದ್ಧ ಮಾತುಗಳು ನಮಗೆಲ್ಲರಿಗೂ ಬದುಕಿನ ಪಾಠವನ್ನು ಕಲಿಸುವಂತಿದೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ಕುರಿತ ಪೋಸ್ಟ್‌ ಒಂದನ್ನು ಮಂಜುನಾಥ್‌ ಹೊಸಹಳ್ಳಿ (manjunath_hosahalli) ಎಂಬವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಅಂಬಾನಿ, ಟಾಟಾ ಆಗೋ ಎಲ್ಲಾ ಲಕ್ಷಣ ಕಾಣ್ತಿಲ್ವಾ?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ಪ್ರಬುದ್ಧ ಜವಬ್ದಾರಿಯುತ ಮಾತುಗಳನ್ನಾಡುವ ದೃಶ್ಯವನ್ನು ಕಾಣಬಹುದು. ನಾಳೆಯಿಂದ ಸ್ಕೂಲ್‌ಗೆ ರಜೆ, 5 ನೇ ಕ್ಲಾಸ್‌ ಅವರಿಗೆ ಪಬ್ಲಿಕ್‌ ಪರೀಕ್ಷೆ. ಬೇಕಾದ್ರೆ ನಾವು ಕೂಡಾ ಸ್ಕೂಲ್‌ಗೆ ಹೋಗ್ಬೋದು, ಆದ್ರೆ ಪಾಠ ಇಲ್ಲ ಸುಮ್ನೆ ಹೋಗಿ ಬರ್ಬೇಕು ಅಷ್ಟೆ. ಅದಕ್ಕಾಗಿ ನಾನು ಮನೇಲೇ ಇರ್ತೀನಿ ಅಮ್ಮನಿಗೆ ಕೆಲಸಕ್ಕೆ ಸಹಾಯವಾಗ್ಲಿ ಅಂತ ಬಾಲಕ ಜವಬ್ದಾರಿಯುತ ಮಾತುಗಳನ್ನಾಡಿದ್ದಾನೆ.

ಇದನ್ನೂ ಓದಿ: ಕಸದ ತೊಟ್ಟಿಯಲ್ಲಿ ಸಿಕ್ಕ ಡೈಮಂಡ್‌ ನೆಕ್ಲೇಸ್;‌ ಮಾಲೀಕರಿಗೆ ಹಿಂದಿರುಗಿಸಿ ಸ್ವಚ್ಛತಾ ಸಿಬ್ಬಂದಿ

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.9 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕಷ್ಟದಲ್ಲಿ ಜೀವನ ಮಾಡುವ ಮಕ್ಕಳಿಗೆ ಮಾತ್ರ ಈ ತರ ಬುದ್ಧಿ ಇರತ್ತೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಚಿಕ್ಕ ವಯಸ್ಸಿನಲ್ಲಿಯೇ ಬದುಕುವ ಪಾಠ ಕಲಿತಿದ್ದಾನೆ, ಖಂಡಿತವಾಗಿಯೂ ಈ ಮಗು ಯಶಸ್ಸಿನ ಉತ್ತುಂಗಕ್ಕೆ ತಲುಪಬೇಕುʼ ಎಂದು ಆಶೀರ್ವಾದಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು