ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್, ಮನೆ ಬೆಳಗಲು ಜೀವವನ್ನೇ ಒತ್ತೆಯಿಟ್ಟ ವಿಡಿಯೋ ನೋಡಿ
ಐದು ನಿಮಿಷ ಕರೆಂಟ್ ಹೋಯ್ತು ಅಂದರೆ ಸಾಕು ಜನ ಲೈನ್ಮ್ಯಾನ್ಗಳಿಗೆ ಫೋನ್ ಹಾಕ್ತಾರೆ, ಅಧಿಕಾರಿಗಳಿಗೆ ತರಾಟೆ ತೆಗೆದುಕೊಳ್ತಾರೆ. ಆದ್ರೆ, ಪವರ್ ಮ್ಯಾನ್ ಒಬ್ಬರು ಜೀವವನ್ನೇ ಅಡವಿಟ್ಟು ನೆರೆಪೀಡಿತ ಪ್ರದೇಶದಲ್ಲಿ ನೀರಿನಲ್ಲೇ ಈಜಿಕೊಂಡು ಹೋಗಿ ವಿದ್ಯುತ್ ಸರಿಪಡಿಸಿದ್ದಾರೆ.
ಶಿವಮೊಗ್ಗ, (ಜುಲೈ 21): ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಮಾಡುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ಈ ಭಾಗಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮನೆ, ಮಠ, ಹೊಲ, ಗದ್ದೆಗಳನ್ನು ಕಳೆದುಕೊಂಡು ಗೋಳಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ರಣ ಭಯಂಕರ ಮಳೆಯ ನಡುವೆಯೂ ವಿದ್ಯುತ್ ಇಲಾಖೆಯ ಪ್ರಾಮಾಣಿಕ ಸಿಬ್ಬಂದಿ ಬೆಳಕು ನೀಡುವ ಕೆಲಸ ಮಾಡುತ್ತಿದ್ದಾರೆ. ಬದುಕನ್ನು ತಂತಿಯ ಮೇಲಿನ ನಡುಗೆಯಂತೆ ಇಟ್ಟು, ಜೀವದ ಹಂಗು ತೊರೆದು ಲೈನ್ಗಳಲ್ಲಿ ಸುಗಮ ವಿದ್ಯುತ್ ಪ್ರಸರಣಕ್ಕೆ ಕಷ್ಟ ಪಡುತ್ತಿದ್ದಾರೆ. ಅಂತೆಯೇ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ನೆರೆ ಉಂಟಾಗಿದ್ದು,
ಈ ನೆರೆ ನೀರಿನಲ್ಲೇ ಪ್ರಾಣದ ಹಂಗು ತೊರೆದು ಪವರ್ ಮ್ಯಾನ್ ಈಜಿಕೊಂಡು ತೆರಳಿ ವಿದ್ಯುತ್ ದುರಸ್ತಿಪಡಿಸಿದ್ದಾರೆ.
ಧಾರಾಕಾರ ಗಾಳಿ ಮಳೆಗೆ ಕಳೆದ ಐದಾರು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಇದನ್ನ ಅರಿತ ಪವರ್ ಮ್ಯಾನ್ ಸಂತೋಷ್ ಕಲ್ಬುರ್ಗಿ ಎನ್ನುವರು ನೀರಿನಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ಸರಿ ಮಾಡಿದ್ದು, ಇದೀಗ ಈ ವಿಡಿಯೋ ವೈರಲ್ ಅಗಿದೆ. ಸಂತೋಷ್ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.