ಮಂಟಪದಲ್ಲಿ ಎಡವಿ ಬಿದ್ದ ವಧುವಿಗೆ ಎಲ್ಲರ ಮುಂದೆ ಅವಮಾನಿಸಿದ ವರ, ಮದುವೆಯಾದ ಮೂರೇ ನಿಮಿಷಕ್ಕೆ ತಲಾಖ್

ವರದಿಗಳ ಪ್ರಕಾರ, ಮದುವೆ ಸಮಾರಂಭದ ವೇಳೆ ವಧು ಎಡವಿ ಬಿದ್ದಿದ್ದು, ಈ ಸಮಯದಲ್ಲಿ ವರ ತನ್ನ ಕುಟುಂಬದಲ್ಲಿ ಸಮ್ಮುಖದಲ್ಲಿ ಆಕೆಯನ್ನು ಹೀಯಾಳಿಸಿದ್ದಾನೆ. ಎಲ್ಲರ ಮುಂದೆ ಅವಮಾನಕ್ಕೊಳಗಾದ ಯುವತಿ ಅದೇ ಮಂಟಪದಲ್ಲಿ ತನ್ನ ಪತಿಗೆ ತಲಾಖ್​ ನೀಡಿದ್ದಾಳೆ.

ಮಂಟಪದಲ್ಲಿ ಎಡವಿ ಬಿದ್ದ ವಧುವಿಗೆ ಎಲ್ಲರ ಮುಂದೆ ಅವಮಾನಿಸಿದ ವರ, ಮದುವೆಯಾದ ಮೂರೇ ನಿಮಿಷಕ್ಕೆ ತಲಾಖ್
Quick Divorce
Follow us
|

Updated on: Jul 23, 2024 | 11:51 AM

ಕುವೈತ್‌: ದುಬೈ ರಾಜಕುಮಾರಿ ಶೈಖಾ ಮಹ್ರಾ ಅವರು ತಮ್ಮ ಪತಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ‘ವಿವಾಹ ವಿಚ್ಛೇದನ’ ನೀಡಿರುವುದು ಎಲ್ಲೆಡೆ ಭಾರಿ ಸುದ್ದಿಯಾಗಿತ್ತು. ಇದೀಗ ಅಂತದ್ದೇ ಘಟನೆ ನಡೆದಿದ್ದು, ಆದರೆ ಇಲ್ಲೊಬ್ಬಳು ಯುವತಿ ಮದುವೆಯಾದ ಮೂರೇ ನಿಮಿಷಕ್ಕೆ ಮದುವೆ ಮಂಟಪದಲ್ಲಿ ತನ್ನ ಪತಿಗೆ ತಲಾಖ್​​ ನೀಡಿದ್ದಾಳೆ. ಸದ್ಯ ಈ ಘಟನೆ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆ ಕುವೈತ್‌ನಲ್ಲಿ ನಡೆದಿದೆ.

ವರದಿಗಳ ಪ್ರಕಾರ, ಮದುವೆ ಸಮಾರಂಭದ ವೇಳೆ ವಧು ಎಡವಿ ಬಿದ್ದಿದ್ದು, ಈ ಸಮಯದಲ್ಲಿ ವರ ತನ್ನ ಕುಟುಂಬದಲ್ಲಿ ಸಮ್ಮುಖದಲ್ಲಿ ಆಕೆಯನ್ನು ಹೀಯಾಳಿಸಿದ್ದಾನೆ. ಎಲ್ಲರ ಮುಂದೆ ಅವಮಾನಕ್ಕೊಳಗಾದ ಯುವತಿ ಅದೇ ಮಂಟಪದಲ್ಲಿ ತನ್ನ ಪತಿಗೆ ತಲಾಖ್​ ನೀಡಿ ಅಲ್ಲಿಂದ ಓಡಿ ಹೋಗಿದ್ದಾಳೆ.

ಇದನ್ನೂ ಓದಿ: ಹೀರೋನಂತೆ ಗುಂಡಿನ ದಾಳಿಯನ್ನು ಮೆಟ್ಟಿ ನಿಂತ ಡೊನಾಲ್ಡ್‌ ಟ್ರಂಪ್

ಇಸ್ಲಾಮಿಕ್ ಕಾನೂನಿನಲ್ಲಿ, ತ್ವರಿತ ವಿಚ್ಛೇದನದ ಪ್ರಕ್ರಿಯೆಯನ್ನು “ತಲಾಕ್-ಎ-ಬಿದ್ದತ್” ಎಂದು ಕರೆಯಲಾಗುತ್ತದೆ. ಅಲ್ಲಿ ಪತಿ ತಕ್ಷಣವೇ ಮದುವೆಯನ್ನು ರದ್ದು ಮಾಡಲು “ತಲಾಕ್” ಅನ್ನು ಮೂರು ಬಾರಿ ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪತ್ನಿಯರು ತಲಾಖ್​​ ನೀಡುವ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಸದ್ಯ ಈ ಮೂರು ನಿಮಿಷದ ಮದುವೆ ಹಾಗೂ ವಿವಾಹ ವಿಚ್ಛೇದನ ಇತಿಹಾಸದಲ್ಲೇ ಅತ್ಯಂತ ಚಿಕ್ಕ ಮದುವೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ