19ನೇ ವಯಸ್ಸಿಗೆ ಮದುವೆ 23ಕ್ಕೆ ಗರ್ಭಿಣಿ; ವರದಕ್ಷಿಣೆಗಾಗಿ ಕೈ ಕಾಲು ಕತ್ತರಿಸಿ ಗರ್ಭಿಣಿಯ ಬರ್ಬರ ಹತ್ಯೆ
ಗರ್ಭಿಣಿಯ ಕೈ ಮತ್ತು ಕಾಲುಗಳನ್ನು ತುಂಡರಿಸಿ, ಹತ್ಯೆಗೈದು ಮತ್ತು ಆಕೆಯ ವಿರೂಪಗೊಂಡ ದೇಹಕ್ಕೆ ಬೆಂಕಿ ಹಚ್ಚಲಾಗಿದೆ. ಯುವತಿಯ ತಂದೆ ರಾಮಪ್ರಸಾದ್ ತನ್ವಾರ್ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದಾಗ, ಆಕೆಯ ಗಂಡ ಹಾಗೂ ಅತ್ತೆ ಆಕೆಯ ಉರಿಯುತ್ತಿರುವ ಚಿತೆಯನ್ನು ಬಿಟ್ಟು ಓಡಿಹೋಗಿದ್ದಾರೆ.
ಮಧ್ಯಪ್ರದೇಶ: ತುಂಬು ಗರ್ಭಿಣಿಯ ಕೈ ಕಾಲುಗಳನ್ನು ಕತ್ತರಿಸಿ ಸಜೀವವಾಗಿ ದಹನ ಮಾಡಿರುವ ಬೀಕರ ಹತ್ಯೆ ಪ್ರಕರಣ ಮಧ್ಯಪ್ರದೇಶದ ರಾಜ್‌ಗರ್‌ನಲ್ಲಿ ನಡೆದಿದಿ. ರೀನಾ ತನ್ವರ್(23) ಕೊಲೆಯಾದ ಗರ್ಭಿಣಿ. ವರದಕ್ಷಿಣೆ ತರುವಂತೆ ಗಂಡ ಹಾಗೂ ಮನೆಯವರು ನಮ್ಮ ಮಗಳನ್ನು ವರ್ಷಗಳಿಂದ ಪೀಡಿಸುತ್ತಿದ್ದು, ಇದೀಗ ತುಂಬು ಗರ್ಭಿಣಿಯಾಗಿರುವಾಗಲೇ ಬರ್ಬರವಾಗಿ ಕೊಲೆ ಮಾಡಿರುವುದಾಗಿ ಯುವತಿ ಪೋಷಕರು ಆರೋಪಿಸಿದ್ದಾರೆ.
ಕಾಳಿಪೀತ್ ಪೊಲೀಸ್ ಠಾಣೆ ವ್ಯಾಪ್ತಿಯ ತಂಡಿ ಖುರ್ದ್ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ನಿನ್ನೆ ಕೊಲೆಯಾದ ಬಗ್ಗೆ ರೀನಾ ಕುಟುಂಬಕ್ಕೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಗರ್ಭಿಣಿ ಯುವತಿಯ ಕೈ ಮತ್ತು ಕಾಲುಗಳನ್ನು ತುಂಡರಿಸಿ, ಹತ್ಯೆಗೈದು ಮತ್ತು ಆಕೆಯ ವಿರೂಪಗೊಂಡ ದೇಹಕ್ಕೆ ಬೆಂಕಿ ಹಚ್ಚಲಾಗಿದೆ. ಯುವತಿಯ ತಂದೆ ರಾಮಪ್ರಸಾದ್ ತನ್ವಾರ್ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದಾಗ, ಆಕೆಯ ಗಂಡ ಹಾಗೂ ಅತ್ತೆ ಆಕೆಯ ಉರಿಯುತ್ತಿರುವ ಚಿತೆಯನ್ನು ಬಿಟ್ಟು ಓಡಿಹೋಗಿದ್ದಾರೆ.
ರೀನಾ ಅವರ ಕುಟುಂಬ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿತ್ತು. ಆಕೆಯ ಅರ್ಧ ಸುಟ್ಟ ದೇಹವನ್ನು ಹೊರತೆಗೆದು ನಂತರ ಅದನ್ನು ಬಟ್ಟೆಯಲ್ಲಿ ಸುತ್ತಿ ಶವಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಒಂಟಿತನವನ್ನು ಹೋಗಲಾಡಿಸಲು ವೀಕೆಂಡ್‌ನಲ್ಲಿ ಆಟೋ ಓಡಿಸುವ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್
5 ವರ್ಷದ ಹಿಂದೆ ಆಗಷ್ಟೇ 19ವರ್ಷ ತುಂಬಿದ್ದ ಮಗಳು ರೀನಾಳನ್ನು ಪೋಷಕರು ಮಿಥುನ್‌ಗೆ ಮದುವೆ ಮಾಡಿ ಕೊಟ್ಟಿದ್ದರು. ಈ ಜೋಡಿಗೆ ಒಂದು ಹೆಣ್ಣು ಮಗು ಇದ್ದು, ರೀನಾ 2ನೇ ಮಗುವಿಗಾಗಿ ಮತ್ತೆ ಗರ್ಭಿಣಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಕಾಳಿಪೀಠ್ ಪೊಲೀಸ್ ಠಾಣೆ ಇನ್‌ಚಾರ್ಜ್ ರಜನೀಶ್ ಸಿರೊಥಿಯಾ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಹೀನಾ ಕೃತ್ಯಗೈದವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ