Viral: ಒಂಟಿತನವನ್ನು ಹೋಗಲಾಡಿಸಲು ವೀಕೆಂಡ್‌ನಲ್ಲಿ ಆಟೋ ಓಡಿಸುವ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್
ಸಾಮಾನ್ಯವಾಗಿ ಹೆಚ್ಚಿನವರು ವಾರಪೂರ್ತಿ ದುಡಿದು, ವಾರಾಂತ್ಯದಲ್ಲಿ ಪಬ್, ಪಾರ್ಟಿ, ಟ್ರಿಪ್ ಅಂತ ಎಂಜಾಯ್ ಮಾಡುತ್ತಾ ಒಂಟಿತನದಿಂದ ದೂರವಿರಲು ಪ್ರಯತ್ನಿಸುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬ ಮೈಕ್ರೋಸಾಫ್ಟ್ ಟೆಕ್ಕಿ ತನ್ನ ಒಂಟಿತನವನ್ನು ಹೋಗಲಾಡಿಸಲು ವಾರಾಂತ್ಯದಲ್ಲಿ ಆಟೋ ಓಡಿಸುವ ಕೆಲಸ ಮಾಡುತ್ತಾರಂತೆ. ಈ ಕುರಿತ ಸುದ್ದಿಯೊಂದು ಇದೀಗ ವೈರಲ್ ಆಗುತ್ತಿದೆ.
ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಸಮಯದಲ್ಲಿ ಒಂಟಿತನ ಎಂಬುದು ಕಾಡುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು. ಇದರಿಂದ ಹೊರಬರಲು ಹೆಚ್ಚಿನವರು ಸ್ನೇಹಿತರೊಂದಿಗೆ ಟ್ರಿಪ್ ಹೋಗುವಂತಹದ್ದು, ಆಪ್ತರೊಂದಿಗೆ ಹೆಚ್ಚು ಮಾತನಾಡುವಂತಹದ್ದು ಮಾಡುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬರು ಟೆಕ್ಕಿ ವೀಕೆಂಡ್‌ನಲ್ಲಿ ಆಟೋ ಓಡಿಸುವ ಮೂಲಕ ತನ್ನ ಒಂಟಿತನದ ಭಾವನೆಯನ್ನು ಹೋಗಲಾಡಿಸಲು ವಿಭಿನ್ನ ದಾರಿಯನ್ನು ಕಂಡುಕೊಂಡಿದ್ದಾರೆ. ಇವರ ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಇದು ಬೆಂಗಳೂರಿನ ಮೈಕ್ರೋಸಾಫ್ಟ್ ಇಂಜಿನಿಯರ್ ಒಬ್ಬರ ಕಥೆ. ವಾರಪೂರ್ತಿ ಸಾಫ್ಟ್‌ವೇರ್ ಕಂಪೆನಿಯಲ್ಲಿ ಲಕ್ಷಾಂತರ ಸಂಬಳ ಸಿಗುವ ಕೆಲಸ ಮಾಡುವ ಈ ಟೆಕ್ಕಿ, ವಾರಾಂತ್ಯದಲ್ಲಿ ನಮ್ಮ ಯಾತ್ರಿ ಆಟೋ ಓಡಿಸುವ ಕೆಲಸ ಮಾಡುತ್ತಿದ್ದಾರೆ.
ಇತ್ತೀಚಿಗಷ್ಟೆ ವ್ಯಕ್ತಿಯೊಬ್ಬರು ಕೋರಮಂಗಲದ ಹತ್ತಿರ ನಮ್ಮ ಯಾತ್ರಿ ಆಟೋ ಬುಕ್ ಮಾಡುತ್ತಾರೆ. ಆಟೋದಲ್ಲಿ ಕುಳಿತ ಬಳಿಕ ಅವರು ಡ್ರೈವರ್‌ನ ಬಟ್ಟೆಯಲ್ಲಿ ಮೈಕ್ರೋಸಾಫ್ಟ್ ಲೋಗೋ ಇರುವುದನ್ನು ಗಮನಿಸಿ ನೀವು ಮೈಕ್ರೋಸಾಫ್ಟ್ ಉದ್ಯೋಗಿಯೇ ಎಂದು ಕೇಳುತ್ತಾರೆ. ಹೀಗೆ ಮಾತುಕತೆ ಆರಂಭವಾಗಿ ಆ ಟೆಕ್ಕಿ, ಹೌದು ನಾವು ಸಾಫ್ಟ್‌ವೇರ್ ಇಂಜಿನಿಯರ್. ಹಣಕ್ಕಾಗಿ ನಾನು ಈ ಆಟೋವನ್ನು ಓಡಿಸುತ್ತಿಲ್ಲ. ನನಗೆ ವಿಪರೀತವಾಗಿ ಒಂಟಿತನ ಎಂಬುದು ಕಾಡುತ್ತಿದೆ. ಈ ಒಂಟಿತನ ಮತ್ತು ಒತ್ತಡದಿಂದ ಮುಕ್ತಿ ಪಡೆಯಲು ನಾನು ಆಟೋ ಓಡಿಸುತ್ತೇನೆ ಎಂದು ಹೇಳಿದ್ದಾರೆ. ವಾರದಲ್ಲಿ ಐದು ದಿನ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿ, ವೀಕೆಂಡ್‌ನಲ್ಲಿ ಎರಡು ದಿನ ಆಟೋ ಓಡಿಸುತ್ತೇನೆ. ಹೀಗೆ ಆಟೋ ಓಡಿಸುತ್ತಾ, ಬರುವ ಪ್ರಯಾಣಿಕರ ಬಳಿ ಮಾತನಾಡುತ್ತಾ, ನಾನು ಒಬ್ಬಂಟಿಯಾಗಿದ್ದೇನೆ ಎಂಬುದನ್ನು ಮರೆತು ಹಾಯಾಗಿ ಜೀವನ ಸಾಗಿಸುತ್ತಿದ್ದೇನೆ ಎಂಬುದನ್ನು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
Met a 35 year old staff software engineer at Microsoft in Kormangala driving Namma Yatri to combat loneliness on weekends pic.twitter.com/yesKDM9v2j
— Venkatesh Gupta (@venkyHQ) July 21, 2024
ಬೆಂಗಳೂರಿನ ಟೆಕ್ಕಿಯ ಈ ಸ್ಟೋರಿಯನ್ನು ವೆಂಕಟೇಶ್ ಗುಪ್ತಾ (venkyHQ) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಒಂಟಿತನವನ್ನು ಹೋಗಲಾಡಿಸಲು ವಾರಾಂತ್ಯದಲ್ಲಿ ನಮ್ಮ ಯಾತ್ರಿ ಆಟೋವನ್ನು ಓಡಿಸುವ 35 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹೀರೋನಂತೆ ಗುಂಡಿನ ದಾಳಿಯನ್ನು ಮೆಟ್ಟಿ ನಿಂತ ಡೊನಾಲ್ಡ್ ಟ್ರಂಪ್
ಜುಲೈ 21 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ʼಒಂಟಿತನವನ್ನು ಹೋಗಲಾಡಿಸಲು ಮದುವೆಯಾಗಬಹುದಿತ್ತಲ್ವಾʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಟೆಕ್ ಉದ್ಯಮವು ಬೆಳೆಯುತ್ತಾ ಹೋದಂತೆ, ಉದ್ಯೋಗಿಗಳಲ್ಲಿ ಒಂಟಿತನ ಹೆಚ್ಚಾಗುತ್ತಿದೆʼ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ