ಭೂ ವಿವಾದ: ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಅಣ್ಣ-ತಮ್ಮ, ಇಬ್ಬರು ಸಾವು

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೋತವಾಡಿ ಗ್ರಾಮದಲ್ಲಿ ಭೂ ವಿವಾದ ವಿಚಾರವಾಗಿ ಅಣ್ಣ ತಮ್ಮ ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸ್ಥಳಕ್ಕೆ ಎಸ್‌ಪಿ ಭೀಮಾಶಂಕರ್ ಗುಳೇದ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೂ ವಿವಾದ: ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಅಣ್ಣ-ತಮ್ಮ, ಇಬ್ಬರು ಸಾವು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Jul 23, 2024 | 3:55 PM

ಚಿಕ್ಕೋಡಿ, ಜುಲೈ 23: ದಾಯಾದಿಗಳ (brothers) ಕಲಹ ಕೊಲೆಯಲ್ಲಿ (death) ಅಂತ್ಯವಾಗಿರುವಂತಹ ಘಟನೆ ದಾರುಣ ಘಟನೆಯೊಂದು ಜಿಲ್ಲೆಯ ಅಥಣಿ ತಾಲೂಕಿನ ಖೋತವಾಡಿ ಗ್ರಾಮದಲ್ಲಿ ನಡೆದಿದೆ. ಭೂ ವಿವಾದ ಹಿನ್ನೆಲೆಯಲ್ಲಿ ಸಹೋದರ ಸಂಬಂಧಿಕರ ಮಕ್ಕಳ ನಡುವೆ ನಿನ್ನೆ ಸಂಜೆ ಗಲಾಟೆಯಾಗಿದ್ದು, ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದುಕೊಂಡು ಅಣ್ಣ ತಮ್ಮ ಸಾವನ್ನಪ್ಪಿದ್ದಾರೆ. ಹಣಮಂತ ರಾಮಚಂದ್ರ ಖೋತ್ (35), ಖಂಡೋಬಾ ತಾನಾಜಿ ಖೋತ್ (30) ಮೃತರು.

ಸೋಮವಾರ ಪರಸ್ಪರ ಹೊಡೆದಾಟದಲ್ಲಿ ತೀವ್ರವಾಗಿ ಇಬ್ಬರು ಗಾಯಗೊಂಡಿದ್ದರು. ಹಾಗಾಗಿ ಇಬ್ಬರನ್ನು ಮಹಾರಾಷ್ಟ್ರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಎಸ್‌ಪಿ ಭೀಮಾಶಂಕರ್ ಗುಳೇದ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರ್ಚಕ ದೇವೇಂದ್ರಪ್ಪಜ್ಜ‌ ಕೊಲೆ ಕೇಸ್​: 24 ಗಂಟೆಯಲ್ಲಿ ಆರೋಪಿ ಅರೆಸ್ಟ್

ಹುಬ್ಬಳ್ಳಿ: ಅರ್ಚಕ ದೇವೇಂದ್ರಪ್ಪಜ್ಜ‌ ಕೊಲೆ ಆರೋಪಿಯನ್ನು ನಿನ್ನೆ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಸುಣಗಾರ ಬಂಧಿತ ಆರೋಪಿ‌. 24 ಗಂಟೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್​ರಿಂದ ಆರೋಪಿ ಬಂಧಿಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಧರ್ಮಾಧಿಕಾರಿಯ ಹೊಟ್ಟೆ ಬಗೆದ ದುಷ್ಕರ್ಮಿಗಳು: ಕೊಲೆಗೆ ಕಾರಣವಾಯ್ತಾ ಮಾಟ, ಮಂತ್ರ?

ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ಅರ್ಚಕನ ಕೊಲೆಯಾಗಿತ್ತು. ಮೃತ ದೇವೇಂದ್ರಪ್ಪಜ್ಜ ವೈಷ್ಣೋದೇವಿ ಮಂದಿರದ ಅರ್ಚಕರಾಗಿದ್ದರು. ಕಳೆದ ಆರು ವರ್ಷದಿಂದ ಬಂಧಿತ ಆರೋಪಿ ಸಂತೋಷ್ ದ್ವೇಷ ಕಾರುತ್ತಿದ್ದ. ಮಾಟ ಮಂತ್ರದ ವಿಚಾರವಾಗಿ ಕೊಲೆ‌ಮಾಡಿರುವ ಶಂಕೆ ವ್ಯಕ್ತವಾಗಿದೆ. 2022ರಲ್ಲೂ ಸಂತೋಷ್ ಅರ್ಚಕನ ಕೊಲೆ ಪ್ರಯತ್ನ ನಡೆದಿತ್ತು. ವಿದ್ಯಾನಗರದ ಅರ್ಚಕನ ಮನೆ ಮಂದೆ ಕೊಲೆಗೆ ಯತ್ನಿಸಿದ್ದ.

ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಧಾರವಾಡ: ಚಾಕುವಿನಿಂದ ಇರಿದು ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಧಾರವಾಡ ತಾಲೂಕಿನ ಗೋವನಕೊಪ್ಪ ಕ್ರಾಸ್ ಬಳಿ ನಡೆದಿದೆ. ಹರೀಶ್ ಶಿಂಧೆ (30) ಹತ್ಯೆಗೀಡಾದ ವ್ಯಕ್ತಿ. ಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:54 pm, Tue, 23 July 24