AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪರು: ಶ್ರೀಮಂತ ಮನೆಯ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವಕನಿಗೆ ಬೆದರಿಕೆ

ಅಂತರ್ಜಾತಿ, ಶ್ರೀಮಂತ ಮನೆಯ ಮತ್ತು ತನಗಿಂತ ಚಿಕ್ಕವಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವಕನಿಗೆ ಯುವತಿಯ ಪೋಷಕರು ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಹೀಗಾಗಿ ನವ ಜೋಡಿ ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಪೊಲೀಸ್​ ವರಿಷ್ಠಾಧಿಕಾರಿ ಮೊರೆ ಹೋಗಿದ್ದಾರೆ.

ಚಿಕ್ಕಬಳ್ಳಾಪರು: ಶ್ರೀಮಂತ ಮನೆಯ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವಕನಿಗೆ ಬೆದರಿಕೆ
ನವ ಜೋಡಿ ವಿಜಯ್ ಕುಮಾರ್, ಹಂಸಲೇಖಾ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ವಿವೇಕ ಬಿರಾದಾರ|

Updated on: Jul 23, 2024 | 12:40 PM

Share

ಚಿಕ್ಕಬಳ್ಳಾಪುರ, ಜುಲೈ 23: ಶ್ರೀಮಂತ ಮನೆಯ, ತನಗಿಂತ ಚಿಕ್ಕವಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿ ಪೋಷಕರು ಯುವಕನಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ರಕ್ಷಣೆ ಕೋರಿ ನವ ಜೋಡಿ ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಅವರ ಮೊರೆ ಹೋಗಿದ್ದಾರೆ. ದೇವನಹಳ್ಳಿ ತಾಲೂಕಿನ ಸಿ.ಎನ್. ಹೊಸೂರು ಗ್ರಾಮದ ವಿಜಯ್ ಕುಮಾರ್ (39 ವರ್ಷ) ಹಾಗೂ ಬೆಂಗಳೂರು ಉತ್ತರದ ಅಮೃತ್ ಹಳ್ಳಿ ಮೂಲದ ಹಂಸಲೇಖಾ (21 ವರ್ಷ) ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದಾರೆ. ಅಲ್ಲದೆ ವಿಜಯ್ ಕುಮಾರ್ ಫೋಟೋಗ್ರಾಫರ್​ ಆಗಿದ್ದು, ಶ್ರೀಮಂತಳಾದ ಹಂಸಲೇಖಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ಈ ಮದುವೆಗೆ ಹಂಸಲೇಖಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಹಂಸಲೇಖಾಳಿಗಿಂತ ವಿಜಯ್ ಕುಮಾರ್ ವಯಸ್ಸಿನಲ್ಲಿ ದೊಡ್ಡವನಿದ್ದಾನೆ, ಹಾಗೆ ಆತ ಆರ್ಥಿಕವಾಗಿ ಸದೃಡವಾಗಿಲ್ಲ. ಅಲ್ಲದೆ ಇದು ಅಂತರ್ಜಾತಿ ವಿವಾಹವೆಂದು ಹಂಸಲೇಖಾ ಪೋಷಕರು ಈ ಮದುವೆ ವಿರೋಧ ವ್ಯಕ್ತಪಡಿಸಿ, ಗೂಂಡಾ ವರ್ತನೆ ತೋರಿದ್ದಾರೆ. ನವ ಜೋಡಿ ಪೊಲೀಸರ ಮೊರೆ ಹೋಗುತ್ತಿದ್ದಂತೆ ಠಾಣೆಗೆ ಏಕಾಏಕಿ ನುಗ್ಗಿದ ಯುವತಿ ಪೋಚಕರು ಗುಂಡಾವರ್ತನೆ ತೋರಿದರು. ಕೂಡಲೆ ಪೊಲೀಸರು ನವ ಜೊಡಿ ಹೊರತುಪಡಿಸಿ ಎಲ್ಲರನ್ನು ಹೊರಗೆ ಕಳುಹಿಸಿದರು.

ಇದನ್ನೂ ಓದಿ: ಹೆಂಡತಿಯ ಶೀಲದ ಬಗ್ಗೆ ಅನುಮಾನ; ಬೆಚ್ಚಿ ಬೀಳಿಸುವಂಥ ನಿರ್ಧಾರ ತೆಗೆದುಕೊಂಡ ಗಂಡ

ಪತಿ ವಿಜಯ ಕುಮಾರ್​ ಅವರನ್ನು ಬಿಟ್ಟು ವಾಪಸ್​ ಮನೆಗೆ ಬರುವಂತೆ ಹಂಸಲೇಖಾಗೆ ಆಕೆಯ ಪೋಷಕರು ಅಂಗಲಾಚಿದರು. ಪೊಲೀಸ್ ಠಾಣೆಯಲ್ಲಿ ಪರಿ ಪರಿಯಾಗಿ ಕಾಲಿಗೆ ಬಿದ್ದು ಕೇಳಿಕೊಂಡರು. ತಾಯಿ, ಅಕ್ಕ ಸೇರಿದಂತೆ ಸಂಬಂಧಿಗಳ ಮನವಿಗೆ ಸ್ಪಂದಿಸದ ಹಂಸಲೇಖಾ ಪತಿಯೊಂದಿಗೆ ಹೋಗುವುದಾಗಿ ಪಟ್ಟು ಹಿಡಿದರು. ಕೊನೆಗೆ ಹಂಸಲೇಖಾ ಪತಿಯೊಂದಿಗೆನೇ ಜೊತೆಗೆ ಹೋದರು.

ಈ ಬಗ್ಗೆ ಟವಿ9 ಜೊತೆ ಹಂಸಲೇಖಾ ಮಾತನಾಡಿ, ನನ್ನ ತಂದೆ ಮೃತಪಟ್ಟಿದ್ದಾರೆ. ನಮ್ಮದು ಶ್ರೀಮಂತ ಕುಟುಂಬ. ನಮ್ಮ ಮಾವಂದಿರು ರಾಜಕೀಯದಲ್ಲಿ ಪ್ರಭಾವಿಗಳು. ನನ್ನ ಮಾವ ರಾಮಚಂದ್ರ ದೇವನಹಳ್ಳಿಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿದ್ದಾರೆ. ಗಂಡನನ್ನು ಬಿಟ್ಟ ಬಾರದಿದ್ದರೆ ಕೊಲೆ ಬೆದರಿಕೆ ಹಾಕಿದ್ದಾರೆ. ನನ್ನ ಹೆಸರಿನಲ್ಲಿ ಮಾಡಿರುವ ಎಲ್ಲ ಆಸ್ತಿಯನ್ನು ಬರೆದುಕೊಡಲು ಕೇಳಿದ್ದಾರೆ. ಎಲ್ಲ ಆಸ್ತಿಯನ್ನು ಬರೆದುಕೊಡಲು ನೊಂದಣಿ ಮಾಡಿ ಕೊಡಲು ರೆಡಿ ಇದ್ದೇನೆ. ಆದರೂ ನಮ್ಮನ್ನು ನಮ್ಮ ಪಾಡಿಗೆ ಬೀಡುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ