ಜೈಲಿನಿಂದ ಹೊರಬಂದು ಖಡಕ್ ಆಗಿ ಮಾತನಾಡಿದ ಸೂರಜ್ ರೇವಣ್ಣ, ಏನಂದ್ರು ನೋಡಿ..
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರಿಗೆ ನಿನ್ನೆ(ಜುಲೈ 22) ಜಾಮೀನು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸೂರಜ್ ರೇವಣ್ಣ ಅವರು ಇಂದು (ಜುಲೈ 23) ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದರು. ಇನ್ನು ಜೈಲಿನಿಂದ ಆಚೆ ಬಂದ ಸೂರಜ್ ರೇವಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಏನೆಲ್ಲಾ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಜುಲೈ 23): ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರಿಗೆ ಜಾಮೀನು ಸಿಕ್ಕಿದ್ದು, ಇಂದು(ಜುಲೈ 23) ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇನ್ನು ಜೈಲಿನಿಂದ ಆಚೆಬಂದ ಬಳಿಕ ಸೂರಜ್ ಅವರು ಮೊಲದ ಬಾರಿಗೆ ನಾಧ್ಯಮಗಳ ಜೊತೆ ಮಾತನಾಡಿದ್ದು, ಕುಟುಂಬದ ವಿರುದ್ಧ ಷಡ್ಯಂತ್ರ ಮಾಡಿ ತೇಜೋವಧೆ ಮಾಡಿದ್ದಾರೆ. ತೇಜೋವಧೆ ಮಾಡುವ ದುರುದ್ದೇಶದಿಂದ ಕೇಸ್ ದಾಖಲಿಸಿದ್ದಾರೆ. ನಾವು ಯಾವುದಕ್ಕೂ ಹೆದರಿಕೊಂಡು ಎಲ್ಲಿಗೂ ಓಡಿಹೋಗಲ್ಲ 2-3 ದಿನದಲ್ಲಿ ಎಲ್ಲದಕ್ಕೂ ಸ್ಪಷ್ಟನೆ ಕೊಡ್ತೇನೆ ಎಂದು ಸ್ಪಷ್ಟಪಡಿಸಿದರು.
ಪರಪ್ಪನ ಅಗ್ರಹಾರ ಜೈಲಿನಿಂದ ಆಚೆಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸೂರಜ್, ತನಿಖಾಧಿಕಾರಿಗಳಿಗೆ ಸಹಕಾರ ನೀಡಿದ್ದೇನೆ. ಕಾನೂನು ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಇದು ಕೇಸ್ ಅಲ್ಲ, ಷಡ್ಯಂತ್ರ ಕುತಂತ್ರ. ಶಿವಕುಮಾರ್ ಆಪ್ತ ಸಹಾಯಕನಲ್ಲ, ಕಾರು ಚಾಲಕನೂ ಅಲ್ಲ. ನಮಗೆ ಲೋಕೇಶ್ ಅಂತಾ ಒಬ್ಬನೇ ಕಾರು ಚಾಲಕ. ಹಾಸನದಲ್ಲಿ ರೇವಣ್ಣರಿಗಾಗಲಿ ನಮಗಾಗಲಿ ಕಪ್ಪುಚುಕ್ಕೆ ಇಲ್ಲ. ರಾಜಕೀಯವಾಗಿ ನಮ್ಮನ್ನು ಕುಗ್ಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಅಸಹಜ ಲೈಂಗಿಕ ದೌರ್ಜನ್ಯ ಕೇಸ್: ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು
ಇದು ಕೇಸ್ ಅಲ್ಲ ಇದು ಷಡ್ಯಂತ್ರ ಕುತಂತ್ರ. ಕಾನೂನು ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಇದರಿಂದ ಪರಿಪೂರ್ಣವಾಗಿ ಹೊರಬರುತ್ತೇನೆ. ರಾಜಕೀಯವಾಗಿ ಹಾಸನ ಜಿಲ್ಲೆಯಲ್ಲಿ ನಮ್ಮನ್ನು ಕುಗ್ಗಿಸುವ ಷಡ್ಯಂತ್ರ ಅಷ್ಟೇ. ಮೊದಲ ದಿನದಿಂದಲೂ ತನಿಖೆಗೆ ಸಹಕರಿಸಿದ್ದೇನೆ. ನಾನೇನು ಹೆದರಿಕೊಂಡು ಎಲ್ಲಿಯೋ ಓಡಿಹೋಗಲ್ಲ ಎಂದು ಖಡಕ್ ಆಗಿ ಹೇಳಿದರು.
ನಮ್ಮ ಕುಟುಂಬ ಮತ್ತು ಹಾಸನ ಜಿಲ್ಲೆಯ ರಾಜಕಾರಣವನ್ನ ಕುಸಿತಗೊಳಿಸಬೇಕು ಅಂದುಕೊಂಡಿದ್ದಾರೆ. ಯಾರು ಎಂಬುವ ಬಗ್ಗೆ ಎಲ್ಲದಕ್ಕೂ ಸದ್ಯದಲ್ಲೇ ಉತ್ತರವನ್ನ ಕೊಡ್ತೀನಿ. ಮೊದಲನೇ ದಿನದಿಂದಲೂ ತನಿಖೆಗೆ ಸಹಕರಿಸುತ್ತೇದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಓಡೋಗೋದಿಲ್ಲ. ನನಗೆ ನ್ಯಾಯಾಂಗ ಮತ್ತು ಕಾನೂನಿನ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:45 pm, Tue, 23 July 24