Union Budget 2024; ಬಜೆಟ್ ಭಾಷಣದಲ್ಲಿ ರಾಜ್ಯಗಳ ಹೆಸರು ಉಲ್ಲೇಖವಾಗಲ್ಲ: ಬಸವರಾಜ ಬೊಮ್ಮಾಯಿ, ಸಂಸದ
Union Budget 2024: ಇಂಡಸ್ಟ್ರಿಯಲ್ ಕಾರಿಡಾರ್ ಗಳು ಕರ್ನಾಟಕಕ್ಕೆ ಮಂಜೂರಾಗಿಲ್ಲ, ಹೆಚ್ ಡಿ ಕುಮಾರಸ್ವಾಮಿಯವರು ಬೃಹತ್ ಕೈಗಾರಿಕೆಗಳ ಸಚಿವರಾಗಿರುವುದರಿಂದ ಕಾರಿಡಾರ್ ಬಗ್ಗೆ ನಿರೀಕ್ಷೆ ಇತ್ತು. ಆದರೆ ಬಸವರಾಜ ಬೊಮ್ಮಾಯಿ ಅವರು ಹೇಳುವ ಪ್ರಕಾರ ಈ ಸಲ ಮಂಜೂರಾಗಿರುವ 10 ಇನ್ಪ್ರಾಸ್ಟ್ರಕ್ಚರ್ ಕಾರಿಡಾರ್ ಗಳಿಂದ ಕರ್ನಾಟಕಕ್ಕೆ ಲಾಭವಾಗಲಿದೆ
ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2024-2025 ಸಾಲಿನ ಬಜೆಟ್ ಮಂಡಿಸಿದರು. ಅವರು ಮಂಡಿಸಿದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಯಾವುದೇ ಯೋಜನೆ ಘೋಷಣೆಯಾಗದಿರುವ ಬಗ್ಗೆ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಸಂಸದ ಬಸವರಾಜ ಬೊಮ್ಮಾಯಿಯವರನ್ನ್ನು ಕೇಳಿದಾಗ ಬಜೆಟ್ ಮಂಡನೆ ಭಾಷಣದಲ್ಲಿ ರಾಜ್ಯಗಳ ಹೆಸರು ಪ್ರಸ್ತಾಪ ಆಗೋದಿಲ್ಲ, ಆದರೆ ಅನುದಾನ ಇಲಾಖಾವಾರು ವಿಂಗಡಣೆಯಾದಾಗ ಕರ್ನಾಟಕಕ್ಕೂ ಪಾಲು ಬರುತ್ತದೆ ಎಂದು ಹೇಳಿದರು. ರಾಜ್ಯಕ್ಕೆ ಒಂದು ಎಐಐಎಮ್ ಎಸ್ ಬೇಕೆಂದು ಬಹಳ ದಿನಗಳಿಂದ ಬೇಡಿಕೆ ಇದೆ, ಆದರೆ ಈ ಬಾರಿಯ ಬಜೆಟ್ ನಲ್ಲಿ ಅದ ಪ್ರಸ್ತಾಪವಿಲ್ಲ ಎಂದು ಬೊಮ್ಮಾಯಿಯವರನ್ನು ಕೇಳಿದಾಗ, ಕಳೆದ ವರ್ಷದಿಂದ ಏಮ್ಸ್ ಮಂಜೂರು ಮಾಡುವುದನ್ನು ನಿಲ್ಲಿಸಲಾಗಿದೆ ಎಂದು ಹೇಳಿದರು. ಇಂಡಸ್ಟ್ರಿಯಲ್ ಕಾರಿಡಾರ್ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಕಳೆದ ಸಲ ಪ್ರಧಾನ ಮಂತ್ರಿ ಮಿತ್ರ ಯೋಜನೆ ಅಡಿ ಕಲಬುರಗಿಗೆ ಒಂದು ಟೆಕ್ಸ್ ಟೈಲ್ ಪಾರ್ಕ್ ಮಂಜೂರಾಗಿದೆ ಮತ್ತು ಅದು ಒಂದು ಲಕ್ಷ ಜನಕ್ಕೆ ಉದ್ಯೋಗಾವಕಾಶ ಕಲ್ಪಿಸಲಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Union Budget 2024: ಅಗ್ಗವಾಗಲಿದೆ ಚಿನ್ನ-ಬೆಳ್ಳಿ ದರ, ಕಸ್ಟಮ್ಸ್ ತೆರಿಗೆಯಲ್ಲಿ ಕಡಿತ, ಸೀತಾರಾಮನ್ ಘೋಷಣೆ