Union Budget 2024: ಅಗ್ಗವಾಗಲಿದೆ ಚಿನ್ನ-ಬೆಳ್ಳಿ ದರ, ಕಸ್ಟಮ್ಸ್​ ತೆರಿಗೆಯಲ್ಲಿ ಕಡಿತ, ಸೀತಾರಾಮನ್ ಘೋಷಣೆ

ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ದರ ಅಗ್ಗವಾಗಲಿದ್ದು, ಕಸ್ಟಮ್ಸ್​ ತೆರಿಗೆಯಲ್ಲಿ ಶೇ.6ರಷ್ಟು ಕಡಿತಗೊಳಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಂದು 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

Union Budget 2024: ಅಗ್ಗವಾಗಲಿದೆ ಚಿನ್ನ-ಬೆಳ್ಳಿ ದರ, ಕಸ್ಟಮ್ಸ್​ ತೆರಿಗೆಯಲ್ಲಿ ಕಡಿತ, ಸೀತಾರಾಮನ್ ಘೋಷಣೆ
ಚಿನ್ನ, ಬೆಳ್ಳಿ
Follow us
ನಯನಾ ರಾಜೀವ್
|

Updated on:Jul 23, 2024 | 1:10 PM

ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ದರ ಅಗ್ಗವಾಗಲಿದ್ದು, ಕಸ್ಟಮ್ಸ್​ ತೆರಿಗೆಯಲ್ಲಿ ಶೇ.6ರಷ್ಟು ಕಡಿತಗೊಳಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಂದು 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಮೂರು ಕ್ಯಾನ್ಸರ್ ಔಷಧಗಳ ಮೇಲಿನ ಕಸ್ಟಮ್ ಡ್ಯೂಟಿ ತೆರವುಗೊಳಿಸಲಾಗಿದೆ. ಅಂದರೆ ಈ ಮೂರು ಔಷಧಿಗಳು ಅಗ್ಗವಾಗಲಿವೆ. ಎಕ್ಸ್-ರೇ ಟ್ಯೂಬ್‌ಗಳು ಮತ್ತು ಫ್ಲಾಟ್ ಪ್ಯಾನಲ್ ಡಿಟೆಕ್ಟರ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 6 ರಷ್ಟು ಮತ್ತು ಪ್ಲಾಟಿನಂ ಮೇಲೆ ಶೇಕಡಾ 6.4 ರಷ್ಟು ಕಡಿಮೆ ಮಾಡಲಾಗುವುದು ಎಂದು ಹಣಕಾಸು ಸಚಿವರು ಬಜೆಟ್​​ನಲ್ಲಿ ಘೋಷಿಸಿದ್ದಾರೆ.

ಮೊಬೈಲ್ ಹಾಗೂ​ ಚಾರ್ಜರ್​ಗಳ ಮೇಲಿನ ತೆರಿಗೆ ಇಳಿಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ.

ಈ ವಸ್ತುಗಳು ಅಗ್ಗವಾಗಲಿವೆ -ಕ್ಯಾನ್ಸರ್ ಸಂಬಂಧಿತ ಮೂರು ಔಷಧಿಗಳ ಮೇಲಿನ ಕಸ್ಟಮ್ ಸುಂಕವನ್ನು ತೆಗೆದುಹಾಕಲಾಗಿದೆ. ಎಕ್ಸ್-ರೇ ಟ್ಯೂಬ್ ಮತ್ತು ಫ್ಲಾಟ್ ಪ್ಯಾನಲ್ ಡಿಟೆಕ್ಟರ್ ಮೇಲಿನ ಆಮದು ಸುಂಕವನ್ನು ಸಹ ತೆಗೆದುಹಾಕಲಾಗಿದೆ. -ಮೊಬೈಲ್ ಫೋನ್ ಮತ್ತು ಬಿಡಿಭಾಗಗಳು- PCB ಮತ್ತು ಮೊಬೈಲ್ ಫೋನ್ ಚಾರ್ಜರ್ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 15 ರಷ್ಟು ಕಡಿಮೆ ಮಾಡಲಾಗಿದೆ. -25 ಅಗತ್ಯ ಖನಿಜಗಳ ಮೇಲೆ ಕಸ್ಟಮ್ಸ್ ಸುಂಕವಿಲ್ಲ. -ಸೌರ ಕೋಶಗಳು ಮತ್ತು ಸೌರ ಫಲಕಗಳ ತಯಾರಿಕೆಗೆ ತೆರಿಗೆ ವಿನಾಯಿತಿ. ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ ಆರಕ್ಕೆ ಇಳಿಸಲಾಗಿದೆ. -ಪ್ಲಾಟಿನಂ ಮೇಲಿನ ಕಸ್ಟಮ್ಸ್ ಸುಂಕವನ್ನು ಈಗ 6.4 ಪ್ರತಿಶತಕ್ಕೆ ಇಳಿಸಲಾಗಿದೆ.

ಮತ್ತಷ್ಟು ಓದಿ: LIVE Budget 2024 Speech: ಕೇಂದ್ರ ಬಜೆಟ್; ಆದಾಯ ತೆರಿಗೆ ಸ್ಲ್ಯಾಬ್​​ನಲ್ಲಿ ತುಸು ಬದಲಾವಣೆ

ಇವು ದುಬಾರಿಯಾಗಲಿವೆ -PVC ಫ್ಲೆಕ್ಸ್ ಬ್ಯಾನರ್‌ಗಳನ್ನು ಆಮದು ಮಾಡಿಕೊಳ್ಳುವುದು ದುಬಾರಿಯಾಗಲಿದೆ. ಕೆಲವು ಟೆಲಿಕಾಂ ಉಪಕರಣಗಳ ಆಮದು ದುಬಾರಿಯಾಗಲಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ದೇಶದಲ್ಲಿ ತಯಾರಿಸಿದ ಅಗ್ಗದ ದೇಶೀಯ ಉತ್ಪನ್ನಗಳನ್ನು ಉತ್ತೇಜಿಸಲು ಸರ್ಕಾರದ ಘೋಷಣೆ. -ಒಂದು ವರ್ಷಕ್ಕೂ ಹೆಚ್ಚು ಕಾಲ ಹೊಂದಿರುವ ಈಕ್ವಿಟಿ ಹೂಡಿಕೆಗಳು ದುಬಾರಿಯಾಗುತ್ತವೆ. -ತೆರಿಗೆಯನ್ನು 15% ರಿಂದ 20% ಕ್ಕೆ ಹೆಚ್ಚಿಸಲಾಗಿದೆ. ಒಂದು ವರ್ಷಕ್ಕಿಂತ ಹೆಚ್ಚು ಕಾಲ ಹೊಂದಿರುವ ಷೇರುಗಳು ದುಬಾರಿಯಾಗುತ್ತವೆ. 10ರಿಂದ 12.5ಕ್ಕೆ ತೆರಿಗೆ ಹೆಚ್ಚಿಸಲಾಗಿದೆ.

ವಾಣಿಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:02 pm, Tue, 23 July 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ