Budget 2024 Cheaper and Costlier Items: ಯಾವುದು ಅಗ್ಗ? ಯಾವುದು ದುಬಾರಿ?
ಈ ಬಾರಿ ಬಜೆಟ್ ನಲ್ಲಿ ಮೂರು ಕ್ಯಾನ್ಸರ್ ಔಷಧಗಳ ಮೇಲಿನ ಕಸ್ಟಮ್ ಡ್ಯೂಟಿ ತೆರವುಗೊಳಿಸಲಾಗಿದೆ. ಅಂದರೆ ಈ ಮೂರು ಔಷಧಿಗಳು ಅಗ್ಗವಾಗಲಿವೆ. ಎಕ್ಸ್-ರೇ ಟ್ಯೂಬ್‌ಗಳು ಮತ್ತು ಫ್ಲಾಟ್ ಪ್ಯಾನಲ್ ಡಿಟೆಕ್ಟರ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 6 ರಷ್ಟು ಮತ್ತು ಪ್ಲಾಟಿನಂ ಮೇಲೆ ಶೇಕಡಾ 6.4 ರಷ್ಟು ಕಡಿಮೆ ಮಾಡಲಾಗುವುದು. ಅದೇ ವೇಳೆ ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ ಮಾಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ದೆಹಲಿ ಜುಲೈ 23: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman )2024 ರ ಕೇಂದ್ರ ಬಜೆಟ್ (Budget 2024) ಮಂಡನೆ ಮಾಡಿದ್ದು, ತೆರಿಗೆ ಪಾವತಿಸುವ ಭಾರತೀಯರು ಯಾವ ವಸ್ತುಗಳು ಅಗ್ಗ ಮತ್ತು ಯಾವ ವಸ್ತುಗಳು ದುಬಾರಿ ಆಗಲಿವೆ ಎಂಬುದರ ಬಗ್ಗೆ ಕುತೂಹಲದಿಂದ ನೋಡುತ್ತಿದ್ದಾರೆ. ಫೆಬ್ರವರಿ 1 ರಂದು ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಸೀತಾರಾಮನ್ ಯಾವುದೇ ಪ್ರಮುಖ ಬದಲಾವಣೆಗಳನ್ನು ಘೋಷಿಸಲಿಲ್ಲ.
ಹಿಂದಿನ ವರ್ಷದ ಬಜೆಟ್ ಅಧಿವೇಶನದಲ್ಲಿ, ಟಿವಿ, ಸ್ಮಾರ್ಟ್‌ಫೋನ್‌ಗಳು, ಸೀಗಡಿ ಫೀಡ್ ಮೊದಲಾದ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಲಾಯಿತು. ಸಿಗರೇಟ್, ವಿಮಾನ ಪ್ರಯಾಣ ಮತ್ತು ಜವಳಿಗಳ ವೆಚ್ಚವನ್ನು ಹೆಚ್ಚಿಸಲಾಗಿತ್ತು.
ಈ ಬಾರಿ ಬಜೆಟ್ ನಲ್ಲಿ ಮೂರು ಕ್ಯಾನ್ಸರ್ ಔಷಧಗಳ ಮೇಲಿನ ಕಸ್ಟಮ್ ಡ್ಯೂಟಿ ತೆರವುಗೊಳಿಸಲಾಗಿದೆ. ಅಂದರೆ ಈ ಮೂರು ಔಷಧಿಗಳು ಅಗ್ಗವಾಗಲಿವೆ. ಎಕ್ಸ್-ರೇ ಟ್ಯೂಬ್‌ಗಳು ಮತ್ತು ಫ್ಲಾಟ್ ಪ್ಯಾನಲ್ ಡಿಟೆಕ್ಟರ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 6 ರಷ್ಟು ಮತ್ತು ಪ್ಲಾಟಿನಂ ಮೇಲೆ ಶೇಕಡಾ 6.4 ರಷ್ಟು ಕಡಿಮೆ ಮಾಡಲಾಗುವುದು. ಅದೇ ವೇಳೆ ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ ಮಾಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಇದನ್ನೂ ಓದಿ: ಹಳೆಯ ಮತ್ತು ಹೊಸ ಟ್ಯಾಕ್ಸ್ ರೆಜಿಮೆಗಳಲ್ಲಿ ಆದಾಯ ತೆರಿಗೆ ಹೇಗಿದೆ? ಇಲ್ಲಿದೆ ಡೀಟೆಲ್ಸ್
ಮೊಬೈಲ್ ಹಾಗೂ ಚಾರ್ಜರ್ಗಳ ಮೇಲಿನ ತೆರಿಗೆ ಇಳಿಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ.
ಅಗ್ಗ ಯಾವುದು? | ಯಾವುದು ದುಬಾರಿ? |
ಆಮದು ಮಾಡಿದ ಆಭರಣ ವಸ್ತುಗಳು | ಜೈವಿಕವಾಗಿ ವಿಘಟನೀಯವಲ್ಲದ ಪ್ಲಾಸ್ಟಿಕ್‌ಗಳು |
ಮೊಬೈಲ್ ಫೋನ್, ಮೊಬೈಲ್ ಚಾರ್ಜರ್, ಮೊಬೈಲ್ ಬಿಡಿಭಾಗಗಳು | ದೂರಸಂಪರ್ಕ ಸಲಕರಣೆ |
ಕ್ಯಾನ್ಸರ್ ಔಷಧಗಳು | ಅಮೋನಿಯಂ ನೈಟ್ರೇಟ್ |
ಸಮುದ್ರಾಹಾರ | PVC ಫ್ಲೆಕ್ಸ್ ಬ್ಯಾನರ್‌ಗಳು |
ಚಿನ್ನ ಮತ್ತು ಬೆಳ್ಳಿ | ಸೋಲಾರ್ ಗ್ಲಾಸ್ |
ಪ್ಲಾಟಿನಂ | |
ಪಾದರಕ್ಷೆ | |
ಪೆಟ್ರೋಕೆಮಿಕಲ್ | |
ಚರ್ಮದ ವಸ್ತುಗಳು | |
ಎಕ್ಸ್ ರೇ ಮೆಷೀನ್ | |
ಫೆರೋ ನಿಕ್ಕೆಲ್, ಬ್ಲಿಸ್ಟರ್ ಕಾಪರ್ |
ಕೇಂದ್ರ ಬಜೆಟ್ ಲೈವ್ ಬ್ಲಾಗ್ ಲಿಂಕ್
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Tue, 23 July 24