Union Budget 2024 Highlights: ಐಟಿ ಸ್ಲ್ಯಾಬ್​​ ಬದಲಾವಣೆ, ಕಸ್ಟಮ್ಸ್ ತೆರಿಗೆ ಇಳಿಕೆ ಸೇರಿ ಕೇಂದ್ರ ಬಜೆಟ್ ಮುಖ್ಯಾಂಶಗಳು

|

Updated on:Jul 23, 2024 | 2:39 PM

Nirmala Sitharaman Union Budget Highlights in Kannada: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡಿಸಿದ್ದಾರೆ. ಇಡೀ ದೇಶವು ಬಜೆಟ್ ಮೇಲೆ ಕಣ್ಣಿಟ್ಟಿತ್ತು ಮತ್ತು ಪ್ರತಿಯೊಂದು ಕ್ಷೇತ್ರವು ತನ್ನದೇ ಆದ ನಿರೀಕ್ಷೆಗಳನ್ನು ಹೊಂದಿದ್ದವು. ಇದೀಗ ಎಲ್ಲ ನಿರೀಕ್ಷೆಗಳಿಗೆ ಉತ್ತರ ಸಿಕ್ಕಿದೆ. ಕೇಂದ್ರ ಬಜೆಟ್​​​ನ ಮುಖ್ಯಾಂಶಗಳು ಇಲ್ಲಿವೆ.

Union Budget 2024 Highlights: ಐಟಿ ಸ್ಲ್ಯಾಬ್​​ ಬದಲಾವಣೆ, ಕಸ್ಟಮ್ಸ್ ತೆರಿಗೆ ಇಳಿಕೆ ಸೇರಿ ಕೇಂದ್ರ ಬಜೆಟ್ ಮುಖ್ಯಾಂಶಗಳು
ಕೇಂದ್ರ ಬಜೆಟ್ 2024

ನವದೆಹಲಿ, ಜುಲೈ 23: ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನದ ಮೊದಲ ದಿನವೇ, ಈ ಬಾರಿಯ ಬಜೆಟ್ 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪ್ರಸ್ತುತಪಡಿಸುವ ಬಗ್ಗೆ ಕೇಂದ್ರೀಕರಿಸುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಪ್ರಸ್ತುತ ಸರ್ಕಾರದ ಮುಂದೆ ಹಲವು ಸವಾಲುಗಳಿವೆ. ಬಳಕೆ ವೆಚ್ಚದಲ್ಲಿನ ಕೊರತೆಯನ್ನು ಸರಿದೂಗಿಸಲು, ಹೆಚ್ಚಿನ ಸಾಮಾನ್ಯ ಜನರ ಕೈಯಲ್ಲಿ ಹಣಕಾಸು ಹರಿವು ಹೆಚ್ಚಿರುವಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಸರ್ಕಾರಕ್ಕಿದೆ. ಇದಕ್ಕಾಗಿ ಸರ್ಕಾರ ತೆರಿಗೆ ವಿನಾಯಿತಿ ನೀಡಬೇಕಾಗುತ್ತದೆ. ಕಾರ್ಪೊರೇಟ್ ಹೂಡಿಕೆಗೆ ಸ್ಥಿರತೆಯನ್ನು ತರುವುದು ಸರ್ಕಾರಕ್ಕೆ ಮತ್ತೊಂದು ಪ್ರಮುಖ ಸವಾಲಾಗಿದೆ. ಏಕೆಂದರೆ ಹೂಡಿಕೆಯು ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತದೆ. ಪ್ರತಿಯೊಂದು ಕ್ಷೇತ್ರವೂ ಬಜೆಟ್‌ನಿಂದ ನಿರೀಕ್ಷೆಗಳನ್ನು ಹೊಂದಿದೆ. ಹೀಗಿರುವಾಗ ಇಂದು ವಿತ್ತ ಸಚಿವರು ಏನು ಉಡುಗೊರೆ ನೀಡುತ್ತಾರೋ ಎಂದು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ.

ಇದನ್ನೂ ಓದಿ: ಅಭಿವೃದ್ಧಿ ಹಾದಿಯಲ್ಲಿ ಭಾರತಕ್ಕಿರುವ ಸವಾಲು ಯಾರಿಗೂ ಎದುರಾಗಿರಲಿಲ್ಲ: ಸಿಇಎ ಅನಂತನಾಗೇಶ್ವರನ್

ರೈತರು, ಉತ್ಪಾದನಾ ವಲಯಕ್ಕೆ ಸಂಬಂಧಿಸಿದ ಜನರು ಮತ್ತು ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಬಜೆಟ್​​​ನಲ್ಲಿ ತಮಗೆ ಕೊಡುಗೆ ದೊರೆಯಬಹುದು ಎಂದು ಭರವಸೆಯಿಂದ ಕಾಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಸಾಧ್ಯ. ಉಳಿತಾಯಕ್ಕಾಗಿ ಹೊಸ ಕ್ರಮಗಳನ್ನು ಕೈಗೊಳ್ಳಬಹುದು. ಎಂನರೇಗಾ ಯೋಜನೆಗೆ ಅನುದಾನ ಹಂಚಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೊತ್ತವನ್ನು ಹೆಚ್ಚಿಸಬಹುದು ಎನ್ನಲಾಗುತ್ತಿದೆ. ಮಧ್ಯಮ, ಸಣ್ಣ ಗಾತ್ರದ ಉದ್ದಿಮೆಗಳಿಗೆ ಸಾಲದ ಮಾರ್ಗವನ್ನು ಸುಲಭಗೊಳಿಸಬಹುದು ಎಂಬ ನಿರೀಕ್ಷೆ ಇದೆ. ಮಹಿಳೆಯರೂ ವಿಶೇಷ ಕೊಡುಗೆಯ ನಿರೀಕ್ಷೆಯಲ್ಲಿದ್ದಾರೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

LIVE NEWS & UPDATES

The liveblog has ended.
  • 23 Jul 2024 01:26 PM (IST)

    Budget 2024 LIVE: 5 ಕೆಜಿ ಉಚಿತ ಪಡಿತರ ಗಡುವು 5 ವರ್ಷ ವಿಸ್ತರಣೆ

    ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅಡಿಯಲ್ಲಿ ನೀಡಲಾಗುತ್ತಿರುವ 5 ಕೆಜಿ ಉಚಿತ ಆಹಾರ ಧಾನ್ಯಗಳ ವಿತರಣೆಯ ಗಡುವನ್ನು 5 ವರ್ಷಗಳವರೆಗೆ ವಿಸ್ತರಣೆ ಮಾಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​​ನಲ್ಲಿ ಘೋಷಣೆ ಮಾಡಿದರು. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.

  • 23 Jul 2024 12:53 PM (IST)

    Budget 2024 LIVE: ಸ್ಟ್ಯಾಂಡರ್ಡ್ ಡಿಡಕ್ಷನ್ 75 ಸಾವಿರಕ್ಕೆ…

    ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50 ಸಾವಿರದಿಂದ 75 ಸಾವಿರಕ್ಕೆ ಸರ್ಕಾರ ಹೆಚ್ಚಿಸಿಸಲಾಗಿದೆ. ಕುಟುಂಬ ಪಿಂಚಣಿ ಮೇಲಿನ ವಿನಾಯಿತಿ ಮಿತಿಯನ್ನು 15 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸಲಾಗುತ್ತಿದೆ. ಈ ಎರಡು ಬದಲಾವಣೆಗಳಿಂದ ನಾಲ್ಕು ಕೋಟಿ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಹಣಕಾಸು ಸಚಿವರು ಹೇಳಿದರು.

  • 23 Jul 2024 12:47 PM (IST)

    Budget 2024 LIVE: ಆದಾಯ ತೆರಿಗೆ ಸ್ಲ್ಯಾಬ್​​​ನಲ್ಲಿ ಬದಲಾವಣೆ

    ಹೊಸ ವಿಧಾನದಲ್ಲಿ ಆದಾಯ ತೆರಿಗೆ ಸ್ಲ್ಯಾಬ್​ನಲ್ಲಿ ತುಸು ಬದಲಾವಣೆ ಮಾಡಲಾಗಿದೆ. ವಿವರ ಹೀಗಿದೆ;

    • 0-3 ಲಕ್ಷ ರೂ. ಆದಾಯಕ್ಕೆ ತೆರಿಗೆ ಇಲ್ಲ
    • 3 ರಿಂದ 7 ಲಕ್ಷ ರೂ. ವರೆಗಿನ ಆದಾಯದ ಮೇಲೆ ಶೇಕಡಾ 5 ರಷ್ಟು ತೆರಿಗೆ
    • 7 ರಿಂದ 10 ಲಕ್ಷ ರೂ. ವರೆಗಿನ ಆದಾಯದ ಮೇಲೆ ಶೇ 10 ತೆರಿಗೆ
    • 10-12 ಲಕ್ಷ ರೂ. ವರೆಗೆ ಆದಾಯದ ಮೇಲೆ ಶೇ 15 ತೆರಿಗೆ
    • 12-15 ಲಕ್ಷ ರೂ. ವರೆಗೆ ಆದಾಯದ ಮೇಲೆ ಶೇ 20 ತೆರಿಗೆ
    • 15 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಆದಾಯಕ್ಕೆ ಶೇ 30 ತೆರಿಗೆ
  • 23 Jul 2024 12:27 PM (IST)

    Budget 2024 LIVE: ಆದಾಯ ತೆರಿಗೆ, ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು

    ಸದ್ಯ ಮೂರನೇ 2 ಭಾಗದಷ್ಟು ಜನರು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ತೆರಿಗೆ ವ್ಯವಸ್ಥೆಯ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ವಿವಿಧ ಪಾವತಿಗಳಿಗೆ ಐದು ಪ್ರತಿಶತ ಟಿಡಿಎಸ್ ಬದಲಿಗೆ ಎರಡು ಪ್ರತಿಶತ ಟಿಡಿಎಸ್ ಅನ್ನು ಒದಗಿಸಲಾಗುತ್ತದೆ ಎಂದರು. ಮ್ಯೂಚುವಲ್ ಫಂಡ್ ಅಥವಾ ಯುಟಿಐ ಮರುಖರೀದಿಯಲ್ಲಿ ಟಿಡಿಎಸ್ ಅನ್ನು ಶೇಕಡಾ 20ರಷ್ಟು ಹಿಂಪಡೆಯಲಾಗಿದೆ. ಇ-ಕಾಮರ್ಸ್ ಆಪರೇಟರ್‌ಗಳಿಗೆ TDS ಅನ್ನು ಶೇಕಡಾ 1 ರಿಂದ 0.1 ಕ್ಕೆ ಇಳಿಸಲಾಗಿದೆ. ಅಲ್ಲದೆ, ಟಿಡಿಎಸ್ ತುಂಬುವಲ್ಲಿ ವಿಳಂಬವನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದರು.

  • 23 Jul 2024 12:17 PM (IST)

    Budget 2024 LIVE: 3 ಕ್ಯಾನ್ಸರ್ ಔಷಧಿಗಳು ಅಗ್ಗ

    ಮೂರು ಕ್ಯಾನ್ಸರ್ ಔಷಧಗಳ ಮೇಲಿನ ಕಸ್ಟಮ್ ಡ್ಯೂಟಿ ತೆರವುಗೊಳಿಸಲಾಗಿದೆ. ಅಂದರೆ ಈ ಮೂರು ಔಷಧಿಗಳು ಅಗ್ಗವಾಗಲಿವೆ. ಎಕ್ಸ್-ರೇ ಟ್ಯೂಬ್‌ಗಳು ಮತ್ತು ಫ್ಲಾಟ್ ಪ್ಯಾನಲ್ ಡಿಟೆಕ್ಟರ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 6 ರಷ್ಟು ಮತ್ತು ಪ್ಲಾಟಿನಂ ಮೇಲೆ ಶೇಕಡಾ 6.4 ರಷ್ಟು ಕಡಿಮೆ ಮಾಡಲಾಗುವುದು ಎಂದು ಹಣಕಾಸು ಸಚಿವರು ಬಜೆಟ್​​ನಲ್ಲಿ ಘೋಷಿಸಿದ್ದಾರೆ.

  • 23 Jul 2024 12:13 PM (IST)

    Budget 2024 LIVE: ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ

    ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

  • 23 Jul 2024 12:12 PM (IST)

    Budget 2024 LIVE: ಮೊಬೈಲ್ ಹಾಗೂ​ ಚಾರ್ಜರ್​ಗಳ ಮೇಲಿನ ತೆರಿಗೆ ಇಳಿಕೆ

    ಮೊಬೈಲ್ ಹಾಗೂ​ ಚಾರ್ಜರ್​ಗಳ ಮೇಲಿನ ತೆರಿಗೆ ಇಳಿಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ.

  • 23 Jul 2024 12:11 PM (IST)

    Budget 2024 LIVE: 100 MW ವಾಣಿಜ್ಯ ಉಷ್ಣ ವಿದ್ಯುತ್ ಸ್ಥಾವರ

    ಎನ್‌ಟಿಪಿಸಿ ಮತ್ತು ಬಿಎಚ್‌ಇಎಲ್ ನಡುವಿನ ಜಂಟಿ ಉದ್ಯಮವು AUSC (ಅಡ್ವಾನ್ಸ್‌ಡ್ ಅಲ್ಟ್ರಾ ಸೂಪರ್‌ಕ್ರಿಟಿಕಲ್) ತಂತ್ರಜ್ಞಾನವನ್ನು ಬಳಸಿಕೊಂಡು 100 MW ವಾಣಿಜ್ಯ ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಿದೆ. ದೇಶದಲ್ಲಿ ಸಣ್ಣ ರಿಯಾಕ್ಟರ್‌ಗಳ ಸ್ಥಾಪನೆ, ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಪರಮಾಣು ಶಕ್ತಿಗಾಗಿ ಹೊಸ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಭಾರತವು ಖಾಸಗಿ ವಲಯದೊಂದಿಗೆ ಪಾಲುದಾರಿಕೆ ಹೊಂದಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

  • 23 Jul 2024 11:59 AM (IST)

    Budget 2024 LIVE: ಧಾರ್ಮಿಕ ಪ್ರವಾಸೋದ್ಯಮಕ್ಕೆ ಸರ್ಕಾರದ ಒತ್ತು

    ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ವಿಶೇಷ ಗಮನ ಹರಿಸಿದೆ. ಮಹಾಬೋಧಿ ದೇವಾಲಯಕ್ಕೆ ಕಾರಿಡಾರ್ ನಿರ್ಮಾಣವನ್ನು ಘೋಷಿಸಲಾಗಿದೆ. ಗಯಾದ ವಿಷ್ಣುಪಾದ ದೇವಸ್ಥಾನಕ್ಕೆ ಕಾರಿಡಾರ್ ನಿರ್ಮಿಸಲಾಗುವುದು. ಇದು ಕಾಶಿ ವಿಶ್ವನಾಥ ಕಾರಿಡಾರ್ ಅಭಿವೃದ್ಧಿಯ ಮಾದರಿಯಲ್ಲಿರಲಿದೆ.

  • 23 Jul 2024 11:57 AM (IST)

    Budget 2024 LIVE: ಸೂರ್ಯೋಘರ್ ಉಚಿತ ವಿದ್ಯುತ್ ಯೋಜನೆ

    ಉಚಿತ ಸೌರ ವಿದ್ಯುತ್ ಯೋಜನೆ ಕುರಿತು ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ‘ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ’ಯನ್ನು ಪ್ರಾರಂಭಿಸಲಾಗಿದೆ. ಇದರ ಅಡಿಯಲ್ಲಿ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗುವುದು. ಇದರಿಂದಾಗಿ 1 ಕೋಟಿ ಕುಟುಂಬಗಳು 300 ಯೂನಿಟ್​​​ಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದರು.

  • 23 Jul 2024 11:55 AM (IST)

    Budget 2024 LIVE: ದೇಶದಲ್ಲಿ 12 ಹೊಸ ಇಂಡಸ್ಟ್ರಿಯಲ್​ ಪಾರ್ಕ್​​ಗಳ ನಿರ್ಮಾಣ

    ದೇಶದಲ್ಲಿ 12 ಹೊಸ ಇಂಡಸ್ಟ್ರಿಯಲ್​ ಪಾರ್ಕ್​​ಗಳ ನಿರ್ಮಾಣ ಮಾಡಲಾಗುವುದು. ಕೈಗಾರಿಕೆಗಳಲ್ಲಿ ಇಂಟರ್ನಶಿಪ್​ ಮಾಡುವವರಿಗೆ 5 ಸಾವಿರ ರೂ. ಸಹಾಯಧನ, ಮುದ್ರಾ ಯೋಜನೆಯ ಸಾಲ ₹10 ಲಕ್ಷದಿಂದ ₹20 ಲಕ್ಷಕ್ಕೆ ಹೆಚ್ಚಿಸಲು ನಿರ್ಧಾರ, ದೇಶಾದ್ಯಂತ 26 ಸಾವಿರ ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಯೋಜನೆ, ಗ್ರಾಮೀಣಾವೃದ್ಧಿ ಪ್ರದೇಶದ ಅಭಿವೃದ್ಧಿಗೆ 2.66 ಲಕ್ಷ ಕೋಟಿ ರೂ. ಅನುದಾನವನ್ನು ನಿರ್ಮಲಾ ಸೀತಾರಾಮನ್ ಬಜೆಟ್​ನಲ್ಲಿ ಘೋಷಿಸಿದರು.

  • 23 Jul 2024 11:53 AM (IST)

    Budget 2024 LIVE: ಮಹಿಳೆಯರಿಗೆ 3 ಸಾವಿರ ಕೋಟಿಗೂ ಹೆಚ್ಚು ಅನುದಾನ

    ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಅನುಕೂಲವಾಗುವ ಯೋಜನೆಗಳಿಗೆ ಸರ್ಕಾರ 3 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹಣವನ್ನು ವಿನಿಯೋಗಿಸಿದೆ ಎಂದು ಹಣಕಾಸು ಸಚಿವರು ಹೇಳಿದರು. ಕೈಗಾರಿಕಾ ಕಾರ್ಮಿಕರಿಗೆ ವಸತಿ ನಿಲಯದ ಸೌಲಭ್ಯ ಸಿಗಲಿದೆ. ಆಂಧ್ರಪ್ರದೇಶದ ಮೂರು ಜಿಲ್ಲೆಗಳಿಗೆ ಹಿಂದುಳಿದ ಪ್ರದೇಶಗಳ ಅನುದಾನವನ್ನು ಒದಗಿಸಲಾಗುವುದು ಎಂದೂ ಅವರು ಘೋಷಿಸಿದರು.

  • 23 Jul 2024 11:51 AM (IST)

    Budget 2024 LIVE: 3 ಕೋಟಿ ಮನೆಗಳ ನಿರ್ಮಾಣ ಗುರಿ

    ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣ ಗುರಿ. ನಗರ, ಗ್ರಾಮಾಂತರ ಪ್ರದೇಶದಲ್ಲಿ 3 ಕೋಟಿ ಮನೆಗಳ ನಿರ್ಮಾಣದ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್

  • 23 Jul 2024 11:48 AM (IST)

    Budget 2024 LIVE: ಐದು ವರ್ಷಗಳಲ್ಲಿ ಟಾಪ್-500 ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶ

    ಮುಂದಿನ ಐದು ವರ್ಷಗಳಲ್ಲಿ ಟಾಪ್ 500 ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶವನ್ನು ಸರ್ಕಾರ ನೀಡಲಿದೆ. ಈ ಇಂಟರ್ನ್‌ಶಿಪ್ 12 ತಿಂಗಳವರೆಗೆ ಇರುತ್ತದೆ. ಇದರಲ್ಲಿ ಯುವಕರು ವ್ಯಾಪಾರದ ನೈಜ ವಾತಾವರಣವನ್ನು ತಿಳಿದುಕೊಳ್ಳಲು ಮತ್ತು ವಿವಿಧ ವೃತ್ತಿಗಳ ಸವಾಲುಗಳನ್ನು ಎದುರಿಸಲು ಅವಕಾಶವನ್ನು ಪಡೆಯುತ್ತಾರೆ. ಇದರ ಅಡಿಯಲ್ಲಿ ಯುವಕರಿಗೆ ಪ್ರತಿ ತಿಂಗಳು 5,000 ರೂ. ಅಷ್ಟೇ ಅಲ್ಲ ಅವರಿಗೆ ಒಟ್ಟು 6,000 ರೂಪಾಯಿ ಸಹಾಯಧನ ನೀಡಲಾಗುವುದು.

    ಕಂಪೆನಿಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ತರಬೇತಿ ವೆಚ್ಚಗಳನ್ನು ಮತ್ತು ಇಂಟರ್ನ್‌ಶಿಪ್ ವೆಚ್ಚದ ಶೇಕಡಾ 10 ರಷ್ಟು ಭರಿಸಬೇಕಾಗುತ್ತದೆ.

  • 23 Jul 2024 11:44 AM (IST)

    Budget 2024 LIVE: ಪ್ರಮುಖ ಘೋಷಣೆಗಳು

    ನಿರ್ಮಲಾ ಸೀತಾರಾಮನ್ ಪ್ರಮುಖ ಘೋಷಣೆಗಳು

    • ಈಶಾನ್ಯ ರಾಜ್ಯಗಳಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ 100 ಕ್ಕೂ ಹೆಚ್ಚು ಶಾಖೆಗಳನ್ನು ಸ್ಥಾಪಿಸಲಾಗುವುದು.
    • ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪೂರ್ವೋದಯ ಯೋಜನೆಯನ್ನು ಸಿದ್ಧಪಡಿಸಲಾಗುವುದು.
    • ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ರಾಷ್ಟ್ರೀಯ ಸಹಕಾರ ನೀತಿಯನ್ನು ತರಲಾಗುವುದು.
    • ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ.
    • ಆಂಧ್ರಪ್ರದೇಶಕ್ಕೆ 15,000 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು.
    • ಸರ್ಕಾರವು ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ನೇರವಾಗಿ ಇ-ವೋಚರ್‌ಗಳನ್ನು ನೀಡಲಿದ್ದು, ಇದರಲ್ಲಿ ಸಾಲದ ಮೊತ್ತದ ಮೇಲೆ ಶೇಕಡಾ ಮೂರರಷ್ಟು ಬಡ್ಡಿ ಸಬ್ಸಿಡಿ ನೀಡಲಾಗುತ್ತದೆ.
    • ಉದ್ಯೋಗಕ್ಕೆ ಸಂಬಂಧಿಸಿದ ಮೂರು ಯೋಜನೆಗಳನ್ನು ಸರ್ಕಾರ ಆರಂಭಿಸಲಿದೆ.
    • ಪೂರ್ವ ಪ್ರದೇಶದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸುವ ಪ್ರಸ್ತಾವನೆ.
    • ಅಮೃತಸರ-ಕೋಲ್ಕತ್ತಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬಿಹಾರದ ಗಯಾದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ನಾವು ಬೆಂಬಲಿಸುತ್ತೇವೆ. ಇದು ಪೂರ್ವ ಭಾಗದ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.
    • 26,000 ಕೋಟಿ ವೆಚ್ಚದಲ್ಲಿ ರಸ್ತೆ ಸಂಪರ್ಕ ಯೋಜನೆಗಳಾದ ಪಾಟ್ನಾ-ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ, ಬಕ್ಸರ್-ಭಾಗಲ್ಪುರ್ ಹೆದ್ದಾರಿ, ಬೋಧಗಯಾ-ರಾಜ್‌ಗೀರ್-ವೈಶಾಲಿ-ದರ್ಭಾಂಗ ಮತ್ತು ಬಕ್ಸಾರ್‌ನಲ್ಲಿ ಗಂಗಾ ನದಿಯ ಮೇಲೆ ಹೆಚ್ಚುವರಿ ದ್ವಿಪಥ ಸೇತುವೆಯ ಅಭಿವೃದ್ಧಿಗೆ ನಾವು ಬೆಂಬಲ ನೀಡುತ್ತೇವೆ.
    • ಎಲ್ಲಾ ಔಪಚಾರಿಕ ವಲಯಗಳಲ್ಲಿ ಕೆಲಸ ಮಾಡಲು ಬರುವ ಎಲ್ಲಾ ಹೊಸ ಜನರಿಗೆ ಒಂದು ತಿಂಗಳ ವೇತನವನ್ನು ನೀಡಲಾಗುವುದು.
    • ಇಪಿಎಫ್‌ಒದಲ್ಲಿ ನೋಂದಾಯಿಸಿದ ಮೊದಲ ಬಾರಿಯ ಉದ್ಯೋಗಿಗಳಿಗೆ 3 ಕಂತುಗಳಲ್ಲಿ ನೇರ ನಗದು ವರ್ಗಾವಣೆ ಅಡಿಯಲ್ಲಿ ಒಂದು ತಿಂಗಳ ಸಂಬಳ ರೂ 15,000 ವರೆಗೆ ನೀಡಲಾಗುತ್ತದೆ.
    • ಹವಾಮಾನ ಸ್ನೇಹಿ ಬೀಜಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಖಾಸಗಿ ವಲಯ, ತಜ್ಞರು ಮತ್ತು ಇತರರಿಗೆ ಹಣವನ್ನು ಒದಗಿಸುವುದು.
    • ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ 30 ಲಕ್ಷ ಯುವಕರಿಗೆ ಸರ್ಕಾರ ಒಂದು ತಿಂಗಳ ಪಿಎಫ್ ಕೊಡುಗೆ ನೀಡುವ ಮೂಲಕ ಪ್ರೋತ್ಸಾಹಿಸಲಿದೆ.
    • ಸರಕಾರ ಸೀಗಡಿ ಸಾಕಾಣಿಕೆ ಮತ್ತು ಮಾರುಕಟ್ಟೆಗೆ ಹಣಕಾಸು ಒದಗಿಸುತ್ತದೆ.
    • ತರಕಾರಿ ಉತ್ಪಾದನೆ ಮತ್ತು ಪೂರೈಕೆ ಸರಪಳಿಗಾಗಿ ಹೆಚ್ಚಿನ ಎಫ್‌ಪಿಒಗಳನ್ನು ರಚಿಸಲಾಗುವುದು, ಕೃಷಿ ಭೂಮಿ ಮತ್ತು ರೈತರ ದಾಖಲೆಗಳನ್ನು ಡಿಜಿಟಲ್ ಮಾಡಲು ಒತ್ತು ನೀಡಲಾಗುತ್ತದೆ.
  • 23 Jul 2024 11:39 AM (IST)

    Budget 2024 LIVE: ನ್​ಡಿಎ ಮಿತ್ರಪಕ್ಷಗಳ ರಾಜ್ಯಗಳಿಗೆ ವಿಶೇಷ ಅನುದಾನ

    ಎನ್​ಡಿಎ ಮಿತ್ರಪಕ್ಷಗಳ ರಾಜ್ಯಗಳಿಗೆ ವಿಶೇಷ ಅನುದಾನ ಘೋಷಿಸಲಾಗಿದೆ. ಆಂಧ್ರಪ್ರದೇಶ, ಬಿಹಾರ ರಾಜ್ಯಗಳಿಗೆ ಕೇಂದ್ರ ಬಜೆಟ್​ನಲ್ಲಿ ಆದ್ಯತೆ ನೀಡಲಾಗಿದೆ. ಬಿಹಾರದಲ್ಲಿ ನೂತನ ವಿಮಾನ ನಿಲ್ದಾಣ, ವೈದ್ಯಕೀಯ ಕಾಲೇಜು ನಿರ್ಮಾಣ, ಆಂಧ್ರಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೂ ಬಜೆಟ್​ನಲ್ಲಿ ಘೋಷಣೆಗಳನ್ನು ಮಾಡಲಾಗಿದೆ.

  • 23 Jul 2024 11:34 AM (IST)

    Budget 2024 LIVE: ಹೈದರಾಬಾದ್ ಬೆಂಗಳೂರು ಕೈಗಾರಿಕಾ ಕಾರಿಡಾರ್

    ವಿಶಾಖಪಟ್ಟಣ ಚೆನ್ನೈ ಕೈಗಾರಿಕಾ ಕಾರಿಡಾರ್, ಹೈದರಾಬಾದ್ ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡುವುದಾಗಿ ಬಜೆಟ್​​ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. 26 ಸಾವಿರ ಕೋಟಿ ವೆಚ್ಚದಲ್ಲಿ ರೈಲು ಯೋಜನೆಗಳ ಆರಂಭ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದ ಅವರು, ಆಂಧ್ರಪ್ರದೇಶ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಇಂಧನ, ರೈಲು, ರಸ್ತೆ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗುವುದು, ಪೋಲಾವರಂ ಪ್ರಾಜೆಕ್ಟ್​ಗೆ ಕೇಂದ್ರ ಸರ್ಕಾರದಿಂದ ಅನುದಾನ ನೀಡಲಾಗುವುದು ಎಂದರು.

  • 23 Jul 2024 11:32 AM (IST)

    Budget 2024 LIVE: 5 ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗಕ್ಕೆ ಯೋಜನೆ

    5 ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗ, ಕೌಶಲ್ಯ ಮತ್ತು ಇತರ ಅವಕಾಶಗಳನ್ನು ಒದಗಿಸುವ 5 ಯೋಜನೆಗಳು ಮತ್ತು ಉಪಕ್ರಮಗಳಿಗೆ ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅನ್ನು ಘೋಷಿಸಲು ಸಂತೋಷವಾಗಿದೆ. ಈ ವರ್ಷ ನಾವು ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕಾಗಿ 1.48 ಲಕ್ಷ ಕೋಟಿ ರೂ. ನೀಡಲಿದ್ದೇವೆ: ನಿರ್ಮಲಾ ಸೀತಾರಾಮನ್

  • 23 Jul 2024 11:28 AM (IST)

    Budget 2024 LIVE: ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ 10 ಲಕ್ಷ ರೂ. ವರೆಗೆ ಸಾಲ ಸೌಲಭ್ಯ

    ಎಸ್​ಸಿ, ಎಸ್​ಟಿ, ಕುಶಲಕರ್ಮಿಗಳಿಗೆ ವಿಶೇಷ ಯೋಜನೆ ಹಮ್ಮಿಕೊಳ್ಳಲಾಗುವುದು. ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ 10 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ನೀಡಲಾಗುವುದು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

  • 23 Jul 2024 11:25 AM (IST)

    Budget 2024 LIVE: ಮೊದಲ ಬಾರಿಗೆ ಉದ್ಯೋಗ ಹುಡುಕುವವರಿಗೆ ಉಡುಗೊರೆ

    ಸರ್ಕಾರದ ಒಂಬತ್ತು ಆದ್ಯತೆಗಳಲ್ಲಿ ಒಂದು ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ. ಇದರ ಅಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಾಗಿರುವವರಿಗೆ ದೊಡ್ಡ ಸಹಾಯ ದೊರೆಯಲಿದೆ. ಔಪಚಾರಿಕ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗ ಆರಂಭಿಸುವವರಿಗೆ ಒಂದು ತಿಂಗಳ ವೇತನವನ್ನು ಸರ್ಕಾರದ ವತಿಯಿಂದ ನೀಡಲಾಗುವುದು. ಈ ವೇತನವನ್ನು ನೇರ ನಗದು ವರ್ಗಾವಣೆ ಮೂಲಕ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಗರಿಷ್ಠ ಮೊತ್ತ 15 ಸಾವಿರ ರೂ. ಇಪಿಎಫ್​ಒನಲ್ಲಿ ನೋಂದಾಯಿಸಲ್ಪಟ್ಟವರು ಈ ಭತ್ಯೆ ಪಡೆಯಲಿದ್ದಾರೆ. ಇದರಿಂದ 2.10 ಕೋಟಿ ಯುವಕರಿಗೆ ಅನುಕೂಲವಾಗಲಿದೆ ಎಂದು ನಿರ್ಮಲಾ ತಿಳಿಸಿದರು.

  • 23 Jul 2024 11:23 AM (IST)

    Budget 2024 LIVE: ಕೃಷಿ ಕ್ಷೇತ್ರಕ್ಕೆ 1.5 ಲಕ್ಷ ಕೋಟಿ ರೂ. ಘೋಷಣೆ

    ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಬಜೆಟ್‌ನಲ್ಲಿ 1.52 ಲಕ್ಷ ಕೋಟಿ ರೂ. ಘೋಷಣೆ ಮಾಡಲಾಗಿದೆ. ಈ ನಿಧಿಯಿಂದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ನಿರ್ಮಲಾ ತಿಳಿಸಿದ್ದಾರೆ.

  • 23 Jul 2024 11:18 AM (IST)

    Budget 2024 LIVE: ಮಧ್ಯಂತರ ಬಜೆಟ್​ ಯೋಜನೆಗಳ ಮುಂದುವರಿಕೆ

    ಮಧ್ಯಂತರ ಬಜೆಟ್‌ನಲ್ಲಿ ಉಲ್ಲೇಖಿಸಿರುವಂತೆ ನಾವು ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರೈತರಿಗೆ, ನಾವು ಎಲ್ಲಾ ಪ್ರಮುಖ ಬೆಳೆಗಳಿಗೆ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದ್ದೇವೆ, ಭರವಸೆಯನ್ನು ಈಡೇರಿಸಿದ್ದೇವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯು 5 ವರ್ಷಗಳವರೆಗೆ ಕನಿಷ್ಠ 50% ಮಾರ್ಜಿನ್ ವೆಚ್ಚದಲ್ಲಿ 80 ಕೋಟಿ ಜನರಿಗೆ ಪ್ರಯೋಜನವನ್ನು ನೀಡುತ್ತದೆ.

  • 23 Jul 2024 11:12 AM (IST)

    Budget 2024 LIVE: ವರ್ಷದಲ್ಲಿ 1 ಕೋಟಿ ರೈತರು ನೈಸರ್ಗಿಕ ಕೃಷಿ ವ್ಯಾಪ್ತಿಗೆ

    ಮುಂದಿನ ಒಂದು ವರ್ಷದಲ್ಲಿ 1 ಕೋಟಿ ರೈತರನ್ನು ನೈಸರ್ಗಿಕ ಕೃಷಿ ವ್ಯಾಪ್ತಿಗೆ ತರಲಾಗುವುದು ಎಂದು ನಿರ್ಮಲಾ ಘೋಷಣೆ ಮಾಡಿದರು. ಸಾಮಾಜಿಕ ನ್ಯಾಯ, ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ವಿಕಸಿತ ಭಾರತಕ್ಕಾಗಿ ಬಜೆಟ್​ನಲ್ಲಿ ಆದ್ಯತೆ ನೀಡಲಾಗಿದೆ. ಸೂಕ್ಷ್ಮ, ಸಣ್ಣ & ಮಧ್ಯಮ ಕೈಗಾರಿಕೆಗಳಿಗೆ ಪೂರಕವಾಗಿದೆ ಈ ಬಜೆಟ್ ಎಂದು ನಿರ್ಮಲಾ ಹೇಳಿದರು.

  • 23 Jul 2024 11:09 AM (IST)

    Budget 2024 LIVE: ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ 1.48 ಲಕ್ಷ ಕೋಟಿ

    ಉದ್ಯೋಗ, ಕೌಶಲ್ಯವೃದ್ಧಿ, ಆರ್ಥಿಕತೆ ಬೆಳವಣಿಗೆಗೆ ಪೂರಕ ಬಜೆಟ್ ಇದಾಗಿರಲಿದ್ದು, ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲು ಇಡುತ್ತಿದ್ದೇವೆ: ನಿರ್ಮಲಾ ಘೋಷಣೆ

  • 23 Jul 2024 11:08 AM (IST)

    Budget 2024 LIVE: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ

    ಭಾರತದ ಆರ್ಥಿಕತೆ ವೃದ್ಧಿಯಾಗಿದೆ, ಹಣದುಬ್ಬರ ನಿಯಂತ್ರಣದಲ್ಲಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ ಮಾಡುತ್ತೇವೆ: ನಿರ್ಮಲಾ ಸೀತಾರಾಮನ್

  • 23 Jul 2024 11:05 AM (IST)

    Budget 2024 LIVE: ಜನರ ಬೆಂಬಲಕ್ಕೆ ಧನ್ಯವಾದ: ನಿರ್ಮಲಾ

    ಜನರು ಮೋದಿ ನೇತೃತ್ವದ ಸರ್ಕಾರಕ್ಕೆ ಮೂರನೇ ಬಾರಿ ಆಶೀರ್ವಾದ ಮಾಡಿದ್ದಾರೆ. ನಾವು ಅವರಿಗೆ ಆಭಾರಿಯಾಗಿದ್ದೇವೆ. ಅದೇ ರೀತಿ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ಮೋದಿ ಅವರಿಗೆ ಅಭಿನಂದನೆ: ನಿರ್ಮಲಾ ಸೀತಾರಾಮನ್

  • 23 Jul 2024 11:03 AM (IST)

    Budget 2024 LIVE: ಬಜೆಟ್ ಮಂಡನೆ ಆರಂಭ

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಲೈವ್​ ಅಪ್​ಡೇಟ್​​ ಇಲ್ಲಿ ಸಿಗಲಿದೆ. ನಿರ್ಮಲಾ ಸೀತಾರಾಮನ್ ಸತತ 7ನೇ‌ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ.

  • 23 Jul 2024 10:59 AM (IST)

    Budget 2024 LIVE: ಲೋಕಸಭೆ ಕಲಾಪ ಆರಂಭ: ಕೆಲವೇ ಕ್ಷಣಗಳಲ್ಲಿ ಕೇಂದ್ರ ಬಜೆಟ್ ಮಂಡನೆ

    ಲೋಕಸಭೆ ಕಲಾಪ ಆರಂಭವಾಗಿದ್ದು, ಕೆಲವೇ ಕ್ಷಣಗಳಲ್ಲಿ ಬಜೆಟ್ ಭಾಷಣ ಆರಂಭವಾಗಲಿದೆ.

  • 23 Jul 2024 10:47 AM (IST)

    Budget 2024 LIVE: ಬಜೆಟ್ ಮಂಡನೆಗೂ ಮೊದಲು ನಿರ್ಮಲಾ ಸೀತಾರಾಮನ್​ಗೆ ಸಿಹಿ ಮೊಸರು!

    ಬಜೆಟ್​ ಮಂಡನೆಗೂ ಮುನ್ನ ರಾಷ್ಟ್ರಪತಿ ಭವನಕ್ಕೆ ತೆರಳಿದ ನಿರ್ಮಲಾ ಸೀತಾರಾಮನ್​ಗೆ  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿಹಿ ಮೊಸರು ತಿನ್ನಿಸಿ ಶುಭ ಹಾರೈಸಿದ್ದಾರೆ.

    ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

  • 23 Jul 2024 10:41 AM (IST)

    Budget 2024 LIVE: ಸಂಸತ್​ಗೆ ಆಗಮಿಸಿದ ಪ್ರಧಾನಿ ಮೋದಿ

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆ ಮಾಡಲು ಕೆಲವೇ ಕ್ಷಣಗಳಿದ್ದು, ಅದಕ್ಕೂ ಮುನ್ನ ಪ್ರಧಾನಿ ಮೋದಿ ಸಂಸತ್​​ಗೆ ಆಗಮಿಸಿದರು.

  • 23 Jul 2024 10:36 AM (IST)

    Budget 2024 LIVE: ಬಜೆಟ್ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ

    ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ, ಪ್ರಮುಖ ಮುಖ್ಯಾಂಶಗಳು ಸೇರಿದಂತೆ 2024 ರ ಬಜೆಟ್ ಸಂಬಂಧಿತ ಎಲ್ಲಾ ಮಾಹಿತಿಯುಳ್ಳ ಪಿಡಿಎಫ್​ ಪ್ರತಿಯನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

  • 23 Jul 2024 10:23 AM (IST)

    Budget 2024 LIVE: ಪ್ರಧಾನಿ ಮೋದಿ ನೇತ್ವತ್ವದಲ್ಲಿ ಸಂಪುಟ ಸಭೆ

    ಕೆಲವೇ ಹೊತ್ತಿನಲ್ಲಿ ಬಜೆಟ್​ ಮಂಡಿಸುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ನೇತ್ವತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಬಜೆಟ್​​ಗೆ ಅನುಮೋದನೆ ಪಡೆದರು.

  • 23 Jul 2024 10:12 AM (IST)

    Budget 2024 LIVE: ಸಂಸತ್ ಭವನ ತಲುಪಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದು, ಸಂಸತ್ತಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಿದರು.

  • 23 Jul 2024 10:00 AM (IST)

    Budget 2024 LIVE: ಸಂಸತ್​​ ಭವನ ತಲುಪಿದ ನಿರ್ಮಲಾ ಸೀತಾರಾಮನ್

    ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಮಂಡಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ತಂಡದೊಂದಿಗೆ ಬಜೆಟ್ ಟ್ಯಾಬ್ಲೆಟ್ ಇರುವ ಬ್ಯಾಗ್ ಹೊತ್ತು ಸಂಸತ್ತಿಗೆ ಆಗಮಿಸಿದರು.

  • 23 Jul 2024 09:50 AM (IST)

    Budget 2024 LIVE: ಸಂಸತ್​​ ಭವನಕ್ಕೆ ತಲುಪಿದ ಬಜೆಟ್​​​ ಪ್ರತಿಗಳ ಬ್ಯಾಗ್

    ಹಣಕಾಸು ಸಚಿವಾಲಯದ ಸಿಬ್ಬಂದಿ ಬಜೆಟ್​​​ ಪ್ರತಿಗಳ ಬ್ಯಾಗ್​ಗಳನ್ನು ಸಂಸತ್​​ ಭವನಕ್ಕೆ ತಂದರು. 11 ಗಂಟೆಗೆ ಬಜೆಟ್ ಭಾಷಣ ಆರಂಭವಾಗಲಿದೆ.

  • 23 Jul 2024 09:35 AM (IST)

    Budget 2024 LIVE: ಬಜೆಟ್ ದಾಖಲೆ ಪ್ರದರ್ಶಿಸಿದ ನಿರ್ಮಲಾ ಸೀತಾರಾಮನ್

    ರಾಷ್ಟ್ರಪತಿ ಭವನಕ್ಕೆ ತೆರಳಿದ ನಿರ್ಮಲಾ ಸೀತಾರಾಮನ್ ಬಜೆಟ್ ದಾಖಲೆಗಳನ್ನು ಪ್ರದರ್ಶಿಸಿದರು.

  • 23 Jul 2024 09:32 AM (IST)

    Budget 2024 LIVE: ಮೇಲ್ಮುಖವಾಗಿ ವಹಿವಾಟು ಆರಂಭಿಸಿದ ಸೆನ್ಸೆಕ್ಸ್

    ಬಜೆಟ್ ಮೇಲಿನ ನಿರೀಕ್ಷೆಯೊಂದಿಗೆ ಮುಂಬೈ ಷೇರುಪೇಡೆ ಸೂಚ್ಯಂಕ ಸೆನ್ಸೆಕ್ಸ್ ಮೇಲ್ಮುಖವಾಗಿ ವಹಿವಾಟು ಆರಂಭಿಸಿದೆ. ಸೆನ್ಸೆಕ್ಸ್ 229.89 ಪಾಯಿಂಟ್ ಗಳ ಏರಿಕೆ ಕಂಡು 80,731.97 ಟ್ರೆಂಡಿಂಗ್​​ ಆರಂಭಿಸಿದೆ.

  • 23 Jul 2024 09:25 AM (IST)

    Budget 2024 LIVE: ರಾಷ್ಟ್ರಪತಿ ಭವನಕ್ಕೆ ನಿರ್ಮಲಾ ಸೀತಾರಾಮನ್

    ಬಜೆಟ್ ಮಂಡನೆಗೂ ಮುನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ರಾಷ್ಟ್ರಪತಿ ಭವನಕ್ಕೆ ತೆರಳಿದ್ದಾರೆ.

  • 23 Jul 2024 09:23 AM (IST)

    Budget 2024 LIVE: ಬಜೆಟ್ ಫೋಟೊ ಅಪ್

    ಬಜೆಟ್ ಜತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿತ್ತ ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮತ್ತು ಅಧಿಕಾರಿಗಳ ಫೋಟೊ ಅಪ್ ನಡೆಯಿತು.

  • 23 Jul 2024 09:15 AM (IST)

    Budget 2024 LIVE: ಕೇಂದ್ರ ಬಜೆಟ್ ಮೇಲೆ ಕರ್ನಾಟಕದ ನಿರೀಕ್ಷೆಗಳೇನು?

    ದಕ್ಷಿಣ ಭಾರತದಲ್ಲೇ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ನೀಡಿರುವ ಕರ್ನಾಟಕ, ಮೋದಿ 3ನೇ ಅವಧಿಯ ಮೊದಲ ಬಜೆಟ್‌ನತ್ತ ಆಸೆಗಣ್ಣಿನಿಂದ ನೋಡುತ್ತಿದೆ. ಹಾಗಾದರೆ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಕೇಂದ್ರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಇರುವ ನಿರೀಕ್ಷೆಗಳೇನು? ಇಲ್ಲಿದೆ ವಿವರ.

  • 23 Jul 2024 09:13 AM (IST)

    Budget 2024 LIVE: ಹಣಕಾಸು ಸಚಿವಾಲಯ ತಲುಪಿದ ನಿರ್ಮಲಾ

    ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವಾಲಯವನ್ನು ತಲುಪಿದ್ದಾರೆ. ಅವರು 11 ಗಂಟೆಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ.

  • 23 Jul 2024 09:12 AM (IST)

    Budget 2024 LIVE: ರಾಷ್ಟ್ರಪತಿ ಭವನಕ್ಕೆ ನಿರ್ಮಲಾ ಸೀತಾರಾಮನ್

    ನಿರ್ಮಲಾ ಸೀತಾರಾಮನ್ ಮೊದಲು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲಿದ್ದಾರೆ. ಅವರು ಬೆಳಿಗ್ಗೆ 10 ರಿಂದ 10.30 ರ ನಡುವೆ ಸಂಸತ್ತನ್ನು ತಲುಪಲಿದ್ದಾರೆ ಮತ್ತು ಸಂಪುಟದಿಂದ ಬಜೆಟ್​​ಗೆ ಅನುಮೋದನೆ ಪಡೆಯಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಹಣಕಾಸು ಸಚಿವರು ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಅವರ ಭಾಷಣ ಸುಮಾರು 45 ನಿಮಿಷದಿಂದ 1 ಗಂಟೆ ಇರಬಹುದು ಎಂದು ಅಂದಾಜಿಸಲಾಗಿದೆ.

  • Published On - Jul 23,2024 9:12 AM

    Follow us
    ‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
    ‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
    ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
    ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
    ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
    ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
    ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
    ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
    ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
    ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
    ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
    ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
    ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
    ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
    20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
    20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
    ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
    ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
    ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
    ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್