ವೇತನ ತಾರತಮ್ಯತೆಯಿಂದ ಹಿಡಿದು ಹೆಚ್ಚಿನ ಉದ್ಯೋಗಾವಕಾಶದವರೆಗೂ… ಬಜೆಟ್​ನಿಂದ ಮಹಿಳೆಯರಿಗಿರುವ ನಿರೀಕ್ಷೆಗಳು…

Women's expectations from Budget 2024: ದೇಶದ ಬೆಳವಣಿಗೆಯಲ್ಲಿ ಪುರುಷರಂತೆ ಮಹಿಳೆಯರೂ ಕೂಡ ಸಮಾನವಾಗಿ ಪಾಲ್ಗೊಳ್ಳುವುದು ಅವಶ್ಯಕವಿದೆ. ಜನಸಂಖ್ಯೆಯಲ್ಲಿ ಗಂಡು ಮತ್ತು ಹೆಣ್ಣಿನ ಸಂಖ್ಯೆ ಸಮ ಇದ್ದರೂ ಉದ್ಯೋಗಕ್ಕೆ ಬಂದರೆ ಪುರುಷರ ಪ್ರಾಬಲ್ಯವೇ ಹೆಚ್ಚು. ಒಟ್ಟಾರೆ ಕಾರ್ಮಿಕರ ಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಸದ್ಯ ಶೇ. 37ರ ಆಸುಪಾಸು ಇದೆ. ಇದು ಶೇ. 50ಕ್ಕೆ ಏರಬೇಕು ಎಂಬ ಅಪೇಕ್ಷೆ ಇದೆ.

ವೇತನ ತಾರತಮ್ಯತೆಯಿಂದ ಹಿಡಿದು ಹೆಚ್ಚಿನ ಉದ್ಯೋಗಾವಕಾಶದವರೆಗೂ... ಬಜೆಟ್​ನಿಂದ ಮಹಿಳೆಯರಿಗಿರುವ ನಿರೀಕ್ಷೆಗಳು...
ಮಹಿಳೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 22, 2024 | 6:59 PM

ನವದೆಹಲಿ, ಜುಲೈ 22: ಮನುಷ್ಯ ಸಂತತಿಯಲ್ಲಿ ಹೆಚ್ಚೂಕಡಿಮೆ ಪುರುಷರಷ್ಟೇ ಸಂಖ್ಯೆಯಲ್ಲಿ ಮಹಿಳೆಯರೂ ಇದ್ದಾರೆ. ಆದರೆ, ಸಾಮಾಜಿಕ ರಚನೆಯ ವೈಭಿನ್ಯತೆಯಿಂದ ಭಾರತದಲ್ಲಿ ಮಹಿಳೆಯರು ಪೂರ್ಣವಾಗಿ ಉದ್ಯೋಗಕ್ಕೆ ತೆರೆದುಕೊಳ್ಳಲು ಸಾಧ್ಯವಾಗಿಲ್ಲ. ಅಂತೆಯೇ, ಹೆಚ್ಚಿನ ಮಹಿಳೆಯರು ಇನ್ನೂ ಅವಲಂಬಿತರಾಗಿ ಉಳಿದಿದ್ದಾರೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪೂರ್ಣವಾಗಿ ಸಬಲರಾಗಿಲ್ಲ. ಉದ್ಯೋಗಸ್ಥಳದಲ್ಲೂ ಪುರುಷರಿಗೆ ಸಿಗುವಷ್ಟು ವೇತನ ಮಹಿಳೆಯರಿಗೆ ಸಿಗುವುದಿಲ್ಲ. ಈ ವೇತನ ತಾರತಮ್ಯ ಸೇರಿದಂತೆ ಹಲವು ಸಮಸ್ಯೆಗಳು ಮಹಿಳೆಯರನ್ನು ಕಟ್ಟಿಹಾಕಿರುವುದು ಹೌದು. ಈ ಬಾರಿಯ ಬಜೆಟ್​ನಲ್ಲಿ ಈ ಸಮಸ್ಯೆಗಳ ಕಡೆ ಗಮನ ಹರಿಸಬಹುದು ಎನ್ನುವ ನಿರೀಕ್ಷೆ ಮಹಿಳಾ ಸಮುದಾಯದ್ದಾಗಿದೆ.

ಕಾರ್ಪೊರೇಟ್ ಸೆಕ್ಟರ್​ನಲ್ಲಿ ಮಹಿಳಾ ಉದ್ಯೋಗಿಗಳು ಬಹಳಷ್ಟಿದ್ದಾರಾದರೂ ಉನ್ನತ ಹುದ್ದೆಗಳಲ್ಲಿ ಮಹಿಳೆಯರ ಪ್ರಮಾಣ ಶೇ. 20 ಕೂಡ ಇಲ್ಲ ಎಂದು ಇತ್ತೀಚೆಗೆ ವರದಿಯೊಂದು ಹೈಲೈಟ್ ಮಾಡಿತ್ತು. ಗಾರ್ಮೆಂಟ್ಸ್ ಕೆಲಸದಿಂದ ಹಿಡಿದು ಸಿಇಒವರೆಗೆ ಮಹಿಳೆಯರಿಗೆ ಪುರುಷರಿಗಿಂತ ಸಿಗುವ ವೇತನ ಬಹಳ ಕಡಿಮೆ. ದೇಶದಲ್ಲಿ ಸ್ಥಾಪನೆಯಾಗಿರುವ ಸ್ಟಾರ್ಟಪ್​ಗಳಲ್ಲಿ ಶೇ. 15ರಷ್ಟು ಕಂಪನಿಗಳು ಮಾತ್ರ ಮಹಿಳಾ ಮುಖ್ಯಸ್ಥರನ್ನು ಹೊಂದಿವೆ.

ಎಂಎಸ್​ಎಂಇ ವಲಯದಲ್ಲಂತೂ ಮಹಿಳಾ ಉದ್ಯೋಗಿಗಳ ಸಂಖ್ಯೆ ಬಹಳ ಕಡಿಮೆ. ವರದಿಯೊಂದರ ಪ್ರಕಾರ ಎಂಎಸ್​ಎಂಇ ವಲಯದಲ್ಲಿ ಇರುವ ಕಾರ್ಮಿಕರಲ್ಲಿ ಮಹಿಳೆಯರು ಶೇ. 20 ಮಾತ್ರ ಇದ್ದಾರೆ.

ಇದನ್ನೂ ಓದಿ:

2021-22ರಲ್ಲಿ ಒಟ್ಟೂ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣ ಶೇ 32.8ರಷ್ಟಿತ್ತು. 2022-23ರಲ್ಲಿ ಇದು ಶೇ. 37ಕ್ಕೆ ಹೆಚ್ಚಿದೆ. ಭಾರತ ಶೇ. 8ಕ್ಕಿಂತ ಹೆಚ್ಚಿನ ವೇಗದಲ್ಲಿ ಜಿಡಿಪಿ ವೃದ್ಧಿ ಕಾಣಬೇಕಾದರೆ ಮಹಿಳಾ ಉದ್ಯೋಗಿಗಳ ಸಂಖ್ಯೆ ಶೇ. 50ಕ್ಕೆ ಏರಬೇಕು ಎನ್ನುವ ಅಭಿಪ್ರಾಯ ಇದೆ. ಆ ನಿಟ್ಟಿನಲ್ಲಿ ಬಜೆಟ್ ಗಮನ ಹರಿಸುತ್ತಾ ನೋಡಬೇಕು.

ಬಜೆಟ್ 2024, ಮಹಿಳೆಯರ ನಿರೀಕ್ಷೆಗಳು

  1. ಎಲ್ಲಾ ಉದ್ಯೋಗಿಗಳಿಗೂ ಲಿಂಗ ತಾರತಮ್ಯ ಇಲ್ಲದೇ ಸಮಾನ ಹುದ್ದೆ ಸಮಾನ ವೇತನ ರೀತಿಯ ನೀತಿ ಜಾರಿ ಮಾಡಲಿ.
  2. ಮಹಿಳೆಯರಿಗೆ ಸ್ವಂತ ಉದ್ಯೋಗ ಸ್ಥಾಪಿಸಲು ಸಾಲ ಮೊದಲಾದ ನೆರವನ್ನು ಇನ್ನಷ್ಟು ಹೆಚ್ಚಿಸಲಿ
  3. ಮಹಿಳೆಯರಿಗೆ ಉದ್ಯೋಗ ಸಿಗಲು ಅವಕಾಶ ಹೆಚ್ಚಳವಾಗುವ ನಿಟ್ಟಿನಲ್ಲಿ ಅವರ ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ಸ್ಕೀಮ್​ಗಳಿರಲಿ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ